ಎಲ್ಲಾ ವರ್ಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದೇ ನಮ್ಮ ಸರ್ಕಾರ ಮುಖ್ಯ ಉದ್ದೇಶ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಕಳ್ಳಿಹಟ್ಟಿ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ “ವಿವೇಕ” ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಹಳ್ಳಿಗಾಡಿನ ಮಕ್ಕಳಿಗೆ ಶಿಕ್ಷಣ ನೀಡುವುದು ಅತಿ ಮುಖ್ಯ ಎಂಬ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.ಮಕ್ಕಳ ವಿದ್ಯಾಭ್ಯಾಸ ನೀಡುವ ಮುಲಕ ಹಿತ ಕಾಯುವುದಕ್ಕಾಗಿ ರಾಜ್ಯಾದ್ಯಂತ ವಿವೇಕ ಯೋಜನೆಯಲ್ಲಿ ಇಂದು ಒಂದೇ ದಿನ 8100 ಸರ್ಕಾರಿ ಶಾಲಾ ಕೊಠಡಿಗಳಿಗೆ ಭೂಮಿ ಪೂಜೆ ಮಾಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಒಂದೇ ಬಾರಿಗೆ 8100 ಶಾಲಾ ಕೊಠಡಿಗಳನ್ನು ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಅನೇಕ ಶಾಲೆಗಳು ದುಸ್ಥಿಯಲ್ಲಿವೆ. ಅನೇಕ ಶಾಲೆಗಳಿಗೆ ಮೂಲ ಸೌಕರ್ಯ ಕೊರತೆಯಿಂದ ಮಕ್ಕಳ ದಾಖಲು ಕಡಿಮೆ ಆಗುತ್ತವೆ.ಇದನ್ನು ಮನಗಂಡು ಸಿಎಂ ಅವರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರುವುದಕ್ಕಾಗಿ ಸರ್ಕಾರ ಶಾಲೆಯ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ವಿವೇಕ ಯೋಜನೆಯ 8100 ಶಾಲೆಗಳು ಒಂದೇ ಮಾದರಿಯಲ್ಲಿ ಮತ್ತು ಕೇಸರಿ ಬಣ್ಣ ಬಳಿಯಲಾಗುತ್ತದೆ ಎಂದರು.
ವಿವೇಕ ಯೋಜನೆಯ ಶಾಲೆಗಳನ್ನು 14 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ.ಇದನ್ನು ಬಿಟ್ಟು ಈ ಗ್ರಾಮಕ್ಕೆ ಸ್ಥಳೀಯವಾಗಿ ಡಿಎಂಎಫ್ ಅನುದಾನದಲ್ಲಿ 28 ಲಕ್ಷ ವೆಚ್ಚದ ಎರಡು ಕೊಠಡಿಗಳು ಮತ್ತು ಶಾಸಕರ ಅನುದಾನದಲ್ಲಿ ಬಾಲಕಿಯರಿಗೆ 2.85ಲಕ್ಷ , ಬಾಲಕರಿಗೆ 2.85 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ, 1 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ, ರ್ಯಾಂಪ್ಸ್ 50 ಸಾವಿರ, ಆಟದ ಸಾಮಾನುಗಳಿಗೆ50 ಸಾವಿರ,3 ಲಕ್ಷ ವೆಚ್ಚದ ಅಲ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಒಟ್ಟು 50 ಲಕ್ಷ ವೆಚ್ಚದಲ್ಲಿ ಶಾಲೆಯ ಸಂಪೂರ್ಣ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಭವಿಷ್ಯದ ಮಕ್ಕಳ ಶಿಕ್ಷಣ ಒತ್ತು ನೀಡುವ ಜೊತಗೆ ಸರ್ಕಾರ ಶಾಲೆಗಳನ್ನು ಖಾಸಗಿ ಶಾಲೆಗಿಂತ ಏನು ಕಮ್ಮಿ ಇಲ್ಲದಂತೆ ಸಕಲ ವ್ಯವಸ್ಥೆ ಮಾಡಲು ಸರ್ಕಾರ ಪಣ ತೊಟ್ಟಿದ್ದು ಅದನ್ನು ಹಂತ ಹಂತವಾಗಿ ಮಾಡಿ ಎಲ್ಲಾ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಲಾಗುತ್ತದೆ. ಶಿಕ್ಷಕರ ಕೊರತೆಯಿಂದ ಮಕ್ಕಳು ಶಿಕ್ಷಣಕ್ಕೆ ಪೆಟ್ಟು ಬಿಳಬಾರದೆಂದು ಹೊಸದಾಗಿ ಶಿಕ್ಷಕರ ನೇಮಕವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.
ರಾಜ್ಯಾದ್ಯಂತ ರಾಜ್ಯ ಸರ್ಕಾರ ಅಮೃತ ಶಾಲಾ ಸೌಲಭ್ಯ ಯೋಜನೆಯಲ್ಲಿ 750 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆಕ ಕ್ರಮ, ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿಗೆ 46.50 ಕೋಟಿ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೌಚಾಲಯ ನಿರ್ಮಾಣ ಮತ್ತು ದುರಸ್ತಿ 250 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ಪೀಠೋಪಕರಣಗಳ ಸರಬರಾಜು ಮಾಡಲು 100 ಕೋಟಿ ನೀಡಿದ್ದು ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರ್ಕಾರ ಒತ್ತು ನೀಡಲಾಗುತ್ತಿದೆ ಎಂದರು.
ಕಳ್ಳಿಹಟ್ಟಿ ಗೊಲ್ಲರಹಟ್ಟಿ ರಸ್ತೆಗಳ ಅಭಿವೃದ್ಧಿ: ಈ ಗ್ರಾಮದ ಕಳೆದ ಬಾರಿ 50 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಮಾಡಲಾಗಿದೆ.ಜೊತೆಗೆ ಈಗ ಮತ್ತೆ 40 ಲಕ್ಷ ಹಣ ನೀಡಿದ್ದು ಟೆಂಡರ್ ಹಂತದಲ್ಲಿದ್ದು 2-3 ತಿಂಗಳಲ್ಲಿ ರಸ್ತೆಗಳನ್ನು ಮಾಡಲಾಗುತ್ತದೆ. 200 ಮನೆಗಳನ್ನು ಗ್ರಾಮ ಪಂಚಾಯತಿಗೆ ನೀಡಿದ್ದು ಅಗತ್ಯ ಇರುವ ಎಲ್ಲಾರೂ ಮನೆ ಕಟ್ಟಿಕೊಳ್ಳಬಹುದು. ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಅಂತರ್ಜಲ ಹೆಚ್ಚಿಸುವುದಕ್ಕಾಗಿ 5 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ಗಳನ್ನು ನಿರ್ಮಾಣ ಮಾಡಲಾಗಿದ್ದು ಎಲ್ಲಾವೂ ಸಹ ಭರ್ತಿ ಆಗಿವೆ.ಕುಡಿಯುವ ನೀರು ಒದಗಿಸಲು 3.5 ಕೋಟಿ ವೆಚ್ಚದಲ್ಲಿ ಶಾಂತಿ ಸಾಗರ ನೀರಿನ ವ್ಯವಸ್ಥೆ ಮಾಡಲಾಗಿದ್ದು.ಇದರ ಜೊತೆಗೆ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಡಿಡಿಪಿಐ ರವಿಶಂಕರ್ ರೆಡ್ಡಿ, ಬಿಇಓ ತಿಪ್ಪೇಸ್ವಾಮಿ, ಪಿಆರ್ಇಡಿ ಇಇ ಹನುಮಂತಪ್ಪ, ಪಿಆರ್ಇಡಿ ಪಾತಪ್ಪ,ಪಿಡಿಓ ದೀಪಾ, ಗ್ರಾಮ ಪಂಚಾಯತಿ ಅಧ್ಯಕ್ಷ ವಿಷ್ಣುವರ್ದನ್, ಉಪಾಧ್ಯಕ್ಷೆ ರತ್ನಮ್ಮ, ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜಪ್ಪ, ರಂಗಸ್ವಾಮಿ, ತಿಪ್ಪಮ್ಮ, ರೇಖಾ, ಮುಖಂಡರಾದ ಹುಚ್ಚಪ್ಪ, ಅಣ್ಣಪ್ಪ, ವೆಂಕಟಪ್ಪ,ಎಸ್ ಡಿಎಂಸಿ ಅಧ್ಯಕ್ಷ ಪರಶುರಾಮ್ , ಮುಖ್ಯೋಪಾಧ್ಯಾ ರಾಜಪ್ಪ ಮತ್ತು ಮಕ್ಕಳು , ಗ್ರಾಮಸ್ಥರು ಇದ್ದರು.
Post Views:
334