ಓಬವ್ವ ಮಾಡಿದ ತ್ಯಾಗ ಎಲ್ಲರಿಗೂ ಆದರ್ಶಪ್ರಾಯ

ರಾಜ್ಯ

ಕನ್ನಡನಾಡಿನ ಸಂಸ್ಕೃತಿಯ ಕನ್ನಡಿ ಕನಕ. ಕನಕದಾಸರ ಸಾಹಿತ್ಯ ದೀನ ದಲಿತರ ನಿಮ್ನಾತಿನಿಮ್ನ ವರ್ಗದ ಜನರಿಂದ ಹಿಡಿದು ಮೇಲ್ವರ್ಗ ಜನರ ಸಮುದಾಯಗಳಲ್ಲಿ, ಮಠ-ಮಾನ್ಯಗಳಲ್ಲಿ, ಗುಡಿ-ಗುಂಡಾರಗಳಲ್ಲಿ ದಾಸ ಸಾಹಿತ್ಯ ಸ್ವೀಕಾರವಾಗಿದೆ. ವಿದ್ವತ್ ಪಂಡಿತರ ಶಾಸ್ತ್ರೀಯ ಸಂಗೀತದಿಂದ ಹಿಡಿದು ಜನಸಾಮಾನ್ಯರ ಜಾನಪದರ ಭಜನೆಗಳವರೆಗೂ ಕನಕ ಸಾಹಿತ್ಯ ತುಂಬಿಕೊಂಡಿದೆ ಎಂದು ಜಗದ್ಗುರು ಶ್ರೀ ಕುಂಚಿಟಿಗ ಗುರುಪೀಠದ ಜಗದ್ಗುರು ಡಾ.ಶ್ರೀ ಶಾಂತವೀರ ಸ್ವಾಮೀಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರು
ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಕನಕಜಯಂತಿ ಹಾಗೂ ಒನಕೆ ಓಬವ್ವ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೂಡಿಬಂದ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಜನಸಾಮಾನ್ಯರ ಸಾಹಿತ್ಯವಾಗಿ ಹಾಸುಹೊಕ್ಕಾಗಿದೆ. ಈ ಎರಡು ಸಾಹಿತ್ಯ ಜೀವನವನ್ನು ಆನಂದಮಯವಾಗಿ ಪರಿವರ್ತಿಸುವ ವಿಚಾರಧಾರೆಗಳು. ನಾವು ಸಮಾಜದಲ್ಲಿ ಜೀವನೋತ್ಸಾಹದಿಂದ ಸಂತೋಷದಿಂದ ಬಾಳಬೇಕೆಂಬ ದಿಕ್ಸೂಚಿಯನ್ನು ರೂಪಿಸಿದ ಸಾಹಿತ್ಯ. ವಚನ ಮತ್ತು ಕೀರ್ತನೆಗಳ ಸಂದೇಶ ನೇರ, ನಿಷ್ಠೂರ, ಸ್ಪಷ್ಟ, ವಿಡಂಬನೆಯಿಂದ ಸಮಾಜನ್ನು ಜಾಗೃತಿಗೊಳಿಸಿದ್ದಾರೆ.
ಜ್ಞಾನ ಹಾಗೂ ಭಕ್ತಿ ಸಾಹಿತ್ಯ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಅವರವರ ಧರ್ಮದ ಅಸ್ತಿತ್ವವನ್ನು, ಅವರವರ ನಂಬುಗೆಗಳನ್ನು, ಶ್ರದ್ಧೆಯನ್ನು ಉಳಿಸಿ ಜನರ ಮನಸ್ಸನ್ನು ಧರ್ಮದಲ್ಲಿ ನಡೆಯುವಂತೆ ಮಾಡಿ, ಅರ್ಥವಿಲ್ಲದ ಆಚಾರ ವಿಚಾರಗಳನ್ನು, ಅಂಧಾನುಕರಣೆಯನ್ನು ಖಂಡಿಸುತ್ತ ಮುಕ್ತಿಗೆ ಸಾಧನೆಯಾಗಿ, ಆಧ್ಯಾತ್ಮದ ಪಥವನ್ನು ಒದಗಿಸಿ ಕೊಡುವಲ್ಲಿ ಕೊಡುಗೆ ಅಪಾರ. ಹಾಗೂ ಆತ್ಮಭಾವವರಿತ ದಾಸವರೇಣ್ಯರಾಗಿದ್ದಾರೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮಿಗಳು, ಗೌರವ ಉಪಸ್ಥಿತರಿದ್ದರು.
ಹಡಪದ ಗುರುಪೀಠದ ಶ್ರೀ ಅನ್ನದಾನೀ ಭಾರತೀ ಅಪ್ಪಣ್ಣ ಸ್ವಾಮೀಜಿ ಮಾತನಾಡಿ ಒನಕೆ ಓಬವ್ವ ರಾಜಮನೆತನದಲ್ಲಿ ಜನಿಸದೇ ಇದ್ದರೂ ವೀರರಾಣಿಯರ ಸಾಲಲ್ಲಿ ನಿಂತು ಗೌರವ ಪಡೆಯುತ್ತಿರುವವಳು. ತನ್ನ ರಾಜ್ಯವನ್ನು ಉಳಿಸಲು ಓಬವ್ವ ಮಾಡಿದ ತ್ಯಾಗ ಎಲ್ಲರಿಗೂ ಆದರ್ಶಪ್ರಾಯವಾದದ್ದು, ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಅವರು ನಮ್ಮ ನಾರಿ ಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿ ನೀಡುತ್ತಾರೆ ಎಂದು ಹೇಳಿದರು. ಹಡಪದ ಗುರುಪೀಠದ ಶ್ರೀ ಅನ್ನದಾನೀ ಭಾರತೀ ಅಪ್ಪಣ್ಣ ಸ್ವಾಮೀಜಿ ಮಾತನಾಡಿ ಒನಕೆ ಓಬವ್ವ ರಾಜಮನೆತನದಲ್ಲಿ ಜನಿಸದೇ ಇದ್ದರೂ ವೀರರಾಣಿಯರ ಸಾಲಲ್ಲಿ ನಿಂತು ಗೌರವ ಪಡೆಯುತ್ತಿರುವವಳು. ತನ್ನ ರಾಜ್ಯವನ್ನು ಉಳಿಸಲು ಓಬವ್ವ ಮಾಡಿದ ತ್ಯಾಗ ಎಲ್ಲರಿಗೂ ಆದರ್ಶಪ್ರಾಯವಾದದ್ದು, ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಅವರು ನಮ್ಮ ನಾರಿ ಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿ ನೀಡುತ್ತಾರೆ ಎಂದು ಹೇಳಿದರು.

 

 

 

Leave a Reply

Your email address will not be published. Required fields are marked *