ವಿವಾದಿತ ಜಮೀನಿನ ಸಮಸ್ಯೆ ಬಗೆ ಹರಿಸಿ ರಸ್ತೆ ನಿರ್ಮಿಸಿದ ತಹಶೀಲ್ದಾರ್ ರಘುಮೂರ್ತಿ

ರಾಜ್ಯ

ಕೆಲವೊಂದು ದಾರಿ ವಿವಾದಗಳು ಸಾರ್ವಜನಿಕರ ಪ್ರಾಣ ಹಾನಿಗೆಕಾರಣವಾಗಿರುವುದನ್ನು ಸಮಾಜದಲ್ಲಿ ನಾವು ಕಾಣಬಹುದಾಗಿದೆ ಹಾಗಾಗಿ ಸಾಮರಸ್ಯದ ಬದುಕನ್ನು ಕಟ್ಟಿಕೊಂಡು ನೆಮ್ಮದಿಯಿಂದ ಜೀವನ ಮಾಡಲು ಸಹಕಾರಿಯಾಗುವಂತ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕು ಎಲ್ಲ ಸಮಸ್ಯೆಗಳನ್ನು ಕೂಡ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಬಗೆಹರಿಸುವುದಿಲ್ಲ ಎಂದು ಚಳ್ಳಕೆರೆ ತಹಶೀಲ್ದಾರ್ ರಘು ಮೂರ್ತಿ‌ಹೇಳಿದರು.
ಅವರು ಚಳ್ಳೆಕೆರೆಯ ಬೊಮ್ಮನಕುಂಟೆ ಗ್ರಾಮದಲ್ಲಿ ವಿವಾದಕ್ಕೀಡಾಗಿದ್ದ ಜಮೀನಿನಲ್ಲಿ ರಸ್ತೆ ನಿರ್ಮಿಸಿ ಮಾತನಾಡಿದರು. ಹೊಂದಾಣಿಕೆ ಮತ್ತು ಸಹಮತದ ಮೂಲಕ ಸ್ಥಳೀಯವಾಗಿ ಗ್ರಾಮಸ್ಥರೇ ಬಗೆಹರಿಸಿಕೊಳ್ಳಬೇಕಾಗುತ್ತದೆ ಆದ್ದರಿಂದ ಸಾರ್ವಜನಿಕರು ತಮ್ಮ ಔದಾ ರ್ಯತೆ ತೋರಿ ಸಾಮರಸ್ಯದ ಜೀವನಕ್ಕೆ ಮುಂದಾಗಬೇಕು ಬೊಮ್ಮನ ಕುಂಟೆ ಗ್ರಾಮದಲ್ಲಿ ಸರ್ವೆ ನಂಬರ್ 65 ಮತ್ತು 68ರ ಬಾರಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪೊಲೀಸ್ ನಿರೀಕ್ಷಕರಾದ ಕಾಂತರಾಜು ಅವರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತಾಲೂಕು ಸರ್ವೇಯರ್ ಅವರಿಂದ ಅಳತೆ ಮಾಡಿಸಿ ಸಾರ್ವಜನಿಕ ದಾರಿಗೆ ಅಡ್ಡಿಪಡಿಸುತ್ತಿದ್ದ ವ್ಯಕ್ತಿಗಳೊಂದಿಗೆ ಚರ್ಚಿಸಿ ಜೆಸಿಬಿಯಿಂದ ವಿವಾದಿತ ಜಮೀನಿನನ್ನು ಸಮತಟ್ಟು ಮಾಡಿಸಿ ರಸ್ತೆ ನಿರ್ಮಾಣ ಮಾಡಿಸಿದರು. ಈಗ ನಿರ್ಮಾಣ ಮಾಡುತ್ತಿರುವ ರಸ್ತೆಗೆ ಗ್ರಾಮ ಪಂಚಾಯಿತಿಯ ಎನ್ ಆರ್ ಇ ಜಿ ಅನುದಾನದಲ್ಲಿ ಪಕ್ಕ ರಸ್ತೆಯನ್ನು ನಿರ್ಮಾಣ ಮಾಡಿಕೊಳ್ಳಲು ಗ್ರಾಮಸ್ಥರಿಗೆ ಸೂಚಿಸಿದರು ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಯಾವುದೇ ಸ್ವತ್ತುಗಳನ್ನು ಒಂದು ವೇಳೆ ಗ್ರಾಮಕ್ಕೆ ಜಮೀನು ಬೇಕಾದಲ್ಲಿ ಸರ್ಕಾರದ ವತಿಯಿಂದಲೇ ಗುರುತಿಸಿ ಸಂಬಂಧಿಸಿದ ಪಂಚಾಯಿತಿಗೆ ಜಮೀನನ್ನು ಹಸ್ತಾಂತರ ಮಾಡಲಾಗುವುದು ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಪರಶುರಾಂಪುರ ಪಿಎಸ್ಐ ಕಾಂತರಾಜು ತಾಲೂಕ್ ಸರ್ವೆಯರ್ ಪ್ರಸನ್ನ ಕುಮಾರ್ ಗ್ರಾಮ ಲೆಕ್ಕಾಧಿಕಾರಿ ಬಸವರಾಜು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು

 

 

 

Leave a Reply

Your email address will not be published. Required fields are marked *