ಯಾರ ಹೆಸರು ಬಿಡದಂತೆ ಪಟ್ಟಿಯಲ್ಲಿ ಸೇರಿಸಿ: ಶಾಸಕ ರಘುಮೂರ್ತಿ

ಜಿಲ್ಲಾ ಸುದ್ದಿ

ಮತದಾರರ ಪಟ್ಟಿಯಲ್ಲಿರುವ ಲೋಪ ದೋಷಗಳನ್ನು ಪೂರ್ಣ ಪ್ರಮಾಣದಲ್ಲಿ ಕಾಲಮಿತಿಯೊಳಗೆ ಸರಿಪಡಿಸಬೇಕೆಂದು  ಜಿಲ್ಲಾಧಿಕಾರಿಗಳು ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ನೀಡಿದ್ದು ಅದರಂತೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 158 ಮತಗಟ್ಟೆಗಳಲ್ಲಿನ ಸೇರ್ಪಡೆ, ತೆಗೆದು ಹಾಕುವ ಮತ್ತು ತಿದ್ದುಪಡಿ ಮಾಡುವ ಎಲ್ಲಾ ಪ್ರಕರಣಗಳನ್ನು ಕೂಡ ಸ್ಥಳೀಯ ಬಿ ಎಲ್ ಓ ಗಳು ಮಾಡುತ್ತಿದ್ದು ಇವರುಗಳಿಗೆ ಪೂರಕವಾಗಿ ಕಂದಾಯ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ರಾಜಶ್ವನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಪಿಡಿಒಗಳು ಖುದ್ದಾಗಿ ಪರಿಶೀಲಿಸಿ ಸಹಕರಿಸಬೇಕು ಮೃತಪಟ್ಟ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳನ್ನು ಕೈ ಬಿಡುವಾಗ ಜಾಗರೂಕತೆಯಿಂದ ಸಂಬಂಧಿಸಿದ ಪರಿಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ನಮೂನೆ ಏಳರಲ್ಲಿ ವಿವರ ದಾಖಲಿಸಬೇಕು ಎಂದು ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು . ತಾಲೂಕು ಕಚೇರಿಯಲ್ಲಿ ಮತದಾರರ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತ ಕಂದಾಯ ಶಿಕ್ಷಣ ಮತ್ತು ಸ್ಥಳೀಯ ಸಂಸ್ತೆಗಳ ಅಧಿಕಾರಿ ನೌಕರರುಗಳ ಪ್ರಗತಿ ಪರಿಶೀಲನಾ ಸಭೆಯಯಲ್ಲಿ ಮಾತನಾಡಿದರು.
ಆ ಮತಗಟ್ಟೆಯಲ್ಲಿರುವ ಗಣ್ಯ ವ್ಯಕ್ತಿಗಳ ಹೆಸರುಗಳು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಇನ್ನು ಸೇರ್ಪಡೆಗೆ ಸಂಬಂಧಿಸಿದಂತೆ ಎಲ್ಲೆಲ್ಲಿ ಅಂಗವಿಕಲರ ಮತದಾರರು ಗಿರಿಜನ ಪ್ರದೇಶದ ಹಾಡಿಗಳಲ್ಲಿರುವ ಜನರು ಗಿರಿಜನ ಪ್ರದೇಶದಲ್ಲಿರುವಂತ ಹಾಡಿಗಳಲ್ಲಿರುವ ತೃತೀಯ ಲಿಂಗಿಗಳು ಇರುವ ಮತ್ತು  ರೆಬೆಲ್ ಏರಿಯಾದಲ್ಲಿ ಇರುವ ಮತದಾರರುಗಳನ್ನು ಖುದ್ದಾಗಿ ಪರಿಶೀಲಿಸಿ ಇವರ ಹೆಸರುಗಳು ಮತದಾರ ಪಟ್ಟಿಯಲ್ಲಿ ನೋಂದಣಿ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು ಸೇರ್ಪಡೆಯಾಗಿಲ್ಲದ್ದಿದ್ದಲ್ಲಿ ತಕ್ಷಣ ಇವರುಗಳಿಂದ ದಾಖಲೆಗಳನ್ನು ಪಡೆದು ಸೇರ್ಪಡೆಗೆ ಕ್ರಮವಹಿಸು ತಕ್ಕದ್ದು ವಿಶೇಷ ಪರಿಷ್ಕರಣೆ ಮುಗಿಯುವವರೆಗೆ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಎಲ್ಲಾ ಅಧಿಕಾರಿ ನೌಕರರು ಕೂಡ ಈ ಒಂದು ಕಾರ್ಯದಲ್ಲಿ ಭಾಗಿಯಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗಳು ಪರಿಪೂರ್ಣವಾಗಿ ಮತ್ತು ದೋಷ ರಹಿತವಾಗಿ ಪ್ರಕಟಿಸಲು ಎಲ್ಲರೂ ಸಹಕಾರಿಯಾಗಬೇಕೆಂದು ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಚುನಾವಣಾ ಶಿರಸ್ತೆದಾರ ಶಕುಂತಲಾ ಮತ್ತು ಎಲ್ಲ ರಾಜಸ್ವನಿರೀಕ್ಷಕರು ಉಪಸ್ಥಿತರಿದ್ದರು

 

 

 

Leave a Reply

Your email address will not be published. Required fields are marked *