ಶ್ರಿಗಂಧ ಬೆಳೆದ ರೈತನ ಬೆಳೆ ಕಳವು ರಕ್ಷಣೆ ಕೊಡದ ಪೋಲಿಸ್ ಅರಣ್ಯ ಇಲಾಖೆ ಮೇಲೆ ಆಕ್ರೋಶ ತರಾಟೆ

ಕ್ರೈಂ ಜಿಲ್ಲಾ ಸುದ್ದಿ ರಾಜ್ಯ

ಶ್ರಿಗಂಧ ಬೆಳೆದ ರೈತನ ಬೆಳೆ ಕಳವು ರಕ್ಷಣೆ ಕೊಡದ ಪೋಲಿಸ್ ಅರಣ್ಯ ಇಲಾಖೆ ಮೇಲೆ ಆಕ್ರೋಶ ತರಾಟೆ

ಚಿತ್ರದುರ್ಗ,ನ04(ಸಂವಾ)-ಮೊದಲು ಯಾರೇ ಶ್ರೀಗಂಧ ಬೆಳೆದರೆ ಅದು ಕಾನೂನು ಬಾಹಿರವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರವೇ ಶ್ರೀಗಂಧ ಬೆಳೆಯಲು ಅನುನತಿ‌ನೀಡಿದ್ದು, ಅದರಂತೆ ಇಲ್ಲೊಬ್ಬ ರೈತ ಬೆಳೆದು ಹೈರಾಣಾಗಿರುವ ಘಟನೆ ಬೆಳಕಿಗೆ ಬಂದಿದೆ.

Chitradurga no security for sandle

 

 

 

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮದ ರೈತ ದಿನೇಶ್ ತನ್ನ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆದಿದ್ದಾನೆ. ಈ ರೀತಿ ಬೆಳೆಯುವವರಿಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಾ ಬಂದಿದೆ. ಶ್ರೀಗಂಧ ಬೆಳೆದರೆ ಅದಕ್ಕೆ ಸಬ್ಸಿಡಿ ನೀಡಿ ಖರೀದಿಸುವ ಕೆಲಸವನ್ನು ಮಾಡುತ್ತದೆ. ಆದರೆ ಇಲ್ಲಿ ಸರ್ಕಾರವನ್ನು ನಂಬಿ ಶ್ರೀಗಂಧ ಬೆಳೆದ ರೈತ ದಿನೇಶ್ ಗೋಳು ಕೇಳೋರಿಲ್ಲದಾಗಿದೆ. ತಾನು ವರ್ಷಗಳಿಂದ ಬೆಳೆದಿರುವ ಶ್ರೀಗಂಧದ ಮರಗಳಿಗೆ ಕಳ್ಳರು ಕೊಡಲಿ ಮಚ್ಚು ಹಾಕಿ ಕಳವು ಮಾಡುತ್ತಿದ್ದಾರೆ. ಇದರ ಬಗ್ಗೆ ಪೋಲಿಸ್ ಠಾಣೆಗೆ ಹೋಗಿ ಶ್ರೀಗಂಧದ ಮರಗಳನ್ನು ರಕ್ಷಿಸಿ ಕೊಡಿ ಎಂದು ದೂರು ಕೊಟ್ಟರೆ ಅಲ್ಲಿನ ಪೋಲಿಸರು ಅರಣ್ಯ ಇಲಾಖೆಗೆ ಹೋಗಿ ಇದು ನಮಗೆ ಬರುವುದಿಲ್ಲ ಎಂದು ಕೈ ಚಲ್ಲಿದ್ದಾರೆ.

Chitradurga no security for sandle

ಅರಣ್ಯ ಇಲಾಖೆಗೆ ಹೋದರೆ ಪೋಲಿಸ್ ದೂರು ನೀಡಿ ಎಂದು ಅವರೂ ಕೂಡ ಸಬೂಬು ಹೇಳಿ ಕಳಿಸಿದ್ದಾರೆ. ಇದರಿಂದ ರೈತ ಕಂಗಾಲಾಗಿ ಹೋಗಿದ್ದಾನೆ. ಕಷ್ಟ ಬಿದ್ದು ಶ್ರೀಗಂಧದ ಮರಗಳನ್ನು ಬೆಳೆದು ಕಳ್ಳರ ಪಾಲು ಮಾಡವಂತಾಗಿದೆ. ಪೋಲಿಸ್ ಹಾಗೂ ಅರಣ್ಯ ಇಲಾಖೆಗಳಿಗೆ ದೂರು ನೀಡಿದರು ಪ್ರಯೋಜನ ಆಗಿಲ್ಲ. ಹಾಗಿದ್ದರೆ ನಾವೇಕೆ ಬೆಳೆಯಬೇಕು ಅರಣ್ಯ ಹಾಗೂ ಪೋಲಿಸ್ ಇಲಾಖೆ ಬೇಜವಾಬ್ದಾರಿತನದ ಉತ್ತರ ನೀಡಿ ಕಳುಹಿಸಿದ್ದು ರೈತ ಪರದಾಡುವಂತಹ ಸ್ಥಿತಿ ಎದುರಾಗಿದೆ ಎಂದು ಬೆಳೆಗಾರ ದಿನೇಶ್ ಆಕ್ರೋಶ ವ್ಯಕ್ರಪಡಿಸುತ್ತಾರೆ.

ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *