ಮೊಟ್ಟೆ ಎಸೆತ ಪ್ರಕರಣ ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮ

ಜಿಲ್ಲಾ ಸುದ್ದಿ

ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿರುವುದು ಬಿಜೆಪಿ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿದೆ ಎಂದು ಕೆಪಿಸಿಸಿ ಮಾಧ್ಗಮ ವಕ್ತಾರ ಜಿಬಿ  ಬಾಲಕೃಷ್ಣ ಯಾದವ್  ಆರೋಪಿಸಿದ್ದಾರೆ. ಅವರು ಚಿತ್ರದುರ್ಗದಲ್ಲಿ ಹೇಳಿದರು.ಅನ್ನಭಾಗ್ಯ ಕ್ಷೀರಭಾಗ್ಯ ಕೊಟ್ಟ ನಾಯಕರಿಗೆ ಈ ರೀತಿ ಮೊಟ್ಟೆಯನ್ನು ಎಸೆದಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಯಾಗಿದೆ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಬಹಳ ಮುಖ್ಯವಾಗಿರುತ್ತದೆ ಅಂತಹ ವಿರೋಧ ಪಕ್ಷದ ನಾಯಕರ ಮೇಲೆ ಮೊಟ್ಟೆ ಎಸೆಯುವ ಸಂಸ್ಕೃತಿ ಬಿಜೆಪಿ ಮಾಡುತ್ತಿರುವುದನ್ನು ನೋಡಿದರೆ ಅವರ ಏಕಚಕ್ರಾಧಿಪತ್ಯ ದ ಸಿದ್ದಾಂತ ಜನರಿಗೆ ಅರ್ಥವಾಗುತ್ತದೆ ಅಪೌಷ್ಟಿಕತೆಯಿಂದ ಮಕ್ಕಳು ಮೊಟ್ಟೆ ಇಲ್ಲದೆ ಪರದಾಡುತ್ತಿದ್ದರೆ ಬಿಜೆಪಿಯವರು ಅದೇ ಮೊಟ್ಟೆಯನ್ನು ವಿರೋಧ ಪಕ್ಷದ ನಾಯಕರ ಮೇಲೆ ಎಸೆಯುವುದು ವಿರೋಧಪಕ್ಷದ ಅವರನ್ನು ಹತ್ತಿಕ್ಕಲು ಕಾನೂನು ಅಸ್ತ್ರ ಗಳಾದ ಇಡೀ ಸೇವೆಯನ್ನು ಬಳಸುತ್ತಿರುವುದು ಇವರಿಗೆ ಪ್ರಜಾಪ್ರಭುತ್ವದ ಬದಲಿಗೆ ಏಕಚಕ್ರಾಧಿಪತ್ಯ ಪ್ರಭುತ್ವ ಇವರಿಗೆ ಬೇಕಾಗಿದೆ ಇದನ್ನು ಜನತೆ ಅರ್ಥಮಾಡಿಕೊಂಡು ಮುಂಬರುವ ದಿನಗಳಲ್ಲಿ ಚುನಾವಣೆಗಳಲ್ಲಿ ಬಿಜೆಪಿ ನಾಯಕರುಗಳಿಗೆ ಮತಪೆಟ್ಟಿಗೆಯಲ್ಲಿ ಮೊಟ್ಟೆ ಎಸೆದು ತೋರಿಸುತ್ತಾರೆ ಬಿಜೆಪಿಯವರು ಅಶಾಂತಿ ಮೂಡಿಸುವುದು ಗೊಂದಲ ಸೃಷ್ಟಿಸುವುದು ಮಾಡಿ ಈ ಕಾರ್ಯಕ್ಕೆ ಬರುವ ಕನಸನ್ನು ಕಾಣುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಕರ್ನಾಟಕದಲ್ಲಿ ಅದರ ಆರಂಭವಾಗಿ 150ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಪಡೆಯುತ್ತೇವೆ ಸಾರ್ವಜನಿಕರು ಕೂಡ ಈ ಪ್ರಕರಣವನ್ನು ಖಂಡಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರರಾದ ಜಿಬಿ ಬಾಲಕೃಷ್ಣ ಯಾದವ್ ಮನವಿ ಮಾಡಿದ್ದಾರೆ.

 

 

 

Leave a Reply

Your email address will not be published. Required fields are marked *