ಸಂಘಟಿತ ಹೋರಾಟದ ಫಲ ಹೋರಾಟ ಯಶಸ್ವಿಯಾಗಿದೆ

ರಾಜ್ಯ

ವಾಲ್ಮೀಕಿ ನಾಯಕ ಸಂಘಟಿತ ಹೋರಾಟದ ನಿರಂತರ ಪರಿಶ್ರಮದ ಫಲ ಹಾಗೂ ಸರ್ಕಾರದ ಮೇಲೆ ಒತ್ತಡ ಏರಿದ್ದರಿಂದ 30 ವರ್ಷಗಳ ಹೋರಾಟಕ್ಕೆ ಪರಿಶಿಷ್ಟ ಪಂಗಡದ ವರಿಗೆ ಶೇಕಡಾ ಏಳು ರಷ್ಟು ಮೀಸಲಾತಿಯನ್ನು ಪಡೆಯಲು ಸಾಧ್ಯವಾಯಿತು ಎಂದು ವಾಲ್ಮೀಕಿ ಬೃಹನ್ ಮಠದ ಶ್ರೀ ಶ್ರೀ ಪ್ರಸಾರಾನಂದಪುರಿ ಸ್ವಾಮೀಜಿಗಳು ಹೇಳಿದರು ಅವರು ಇಂದು ಚಳಿಕೆರೆ ನಗರದ ವಾಲ್ಮೀಕಿ ಮಂಟಪದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ವಾಲ್ಮೀಕಿ ಸಂಘದ ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮುಂದೆಯೂ ಕೂಡ ಸಮಾಜದ ಪ್ರಮುಖರು ಇಂತಹ ಸನ್ನಿವೇಶಗಳಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ವಾಲ್ಮೀಕಿ ಸಮಾಜದ ಇನ್ನು 20 ಬೇಡಿಕೆಗಳಿವೆ. ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗಿದೆ ಇದರಲ್ಲಿ ಪ್ರಮುಖವಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಪಿಟಿಸಿಎಲ್ ಕಾಯ್ದೆಯ ದುರ್ಬಳಿಕೆ ಮತ್ತು ಇನ್ನೂ 10 ಹಲವು ಜ್ವಲಂತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಿದೆ. ಈ ನಿಟ್ಟಿನಲ್ಲಿ ಫೆಬ್ರವರಿ 9 ಮತ್ತು 10ರಂದು ನಡೆಯುವ ವಾಲ್ಮೀಕಿ ಜಾತ್ರೆಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನಾಂಗದ ಬಂಧುಗಳು ಆಗಮಿಸಿ ಈ ಸಂದರ್ಭದಲ್ಲಿ ಜಾತ್ರೆಗೆ ಸಿದ್ದಪಡಿಸಿರುವಂತಹ ಹೊಸ ತೇರನ್ನು ಲೋಕಾರ್ಪಣೆ ಮಾಡಲಾಗುವುದು. ಆದುದರಿಂದ ಜಾ ತ್ರೆಯನ್ನು ಯಶಸ್ವಿ ಮಾಡಬೇಕಾಗಿ ವಿನಂತಿಸಿದರು .ಇದೇ ಸಂದರ್ಭದಲ್ಲಿ ಹಾಜರಿದ್ದ ತಹಸಿಲ್ದಾರ್ ರಘುಮೂರ್ತಿ ತಾಲೂಕು ಆಡಳಿತದ ವತಿಯಿಂದ ಪರಮಪೂಜ್ಯ ಶ್ರೀಗಳನ್ನು ಗೌರವ ಸಮರ್ಪಣೆ ಮಾಡಿ ನಂತರ ಮಾತನಾಡಿದರು, ಪರಮಪೂಜ್ಯರು 247 ದಿನ ಸತತವಾಗಿ ಮುಷ್ಕರದಲ್ಲಿ ನಿರತರಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಜನಾಂಗೋಸ್ಕರ ಮತ್ತು ಸಮಾಜಕ್ಕೊಸ್ಕರ ಬಹು ದಿನಗಳ ಬೇಡಿಕೆಯಾದ ಮೀಸಲಾತಿಯನ್ನು ಸರ್ಕಾರದಿಂದ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆನೇ ನಮ್ಮ ರಾಜ್ಯ ಸರ್ಕಾರದ ಸಾರಿಗೆ ಹಾಗೂ ಬುಡಕಟ್ಟು ಕಲ್ಯಾಣ ಮಂತ್ರಿಗಳಾದ ಶ್ರೀರಾಮುಲು ರವರ ಪರಿಶ್ರಮದಿಂದ ಇಡೀ ತಾಲೂಕಿನ ಜನಾಂಗದ ಪರವಾಗಿ ಅವರನ್ನು ಈ ದಿನ ಅಭಿನಂದಿಸಬೇಕು ಕ್ಷೇತ್ರದ ಶಾಸಕರೊಂದಿಗೆ ಸಮಸ್ತ ನಾಗರಿಕ ಬಂಧುಗಳು ವಿಸ್ತೃತವಾದ ಚರ್ಚೆ ನಡೆಸಿ ವಾಲ್ಮೀಕಿ ಜಾತ್ರೆಯ ಆ ಯೋಜನೆ ಬಗ್ಗೆ ವಿಸ್ತೃತಗೊಳಿಸಬೇಕು ಶರಣರ ಹಾದಿಯಲ್ಲಿ ಪೂಜ್ಯ ಶ್ರೀಗಳು ಸಾಗಿದ್ದು ಅವರ ಸಮಾಜ ಸೇವೆ ಅನುಕರಣೆಯ ಮತ್ತು ಅನನ್ಯವಾದದ್ದು ಸಮಾಜದ ಬಂಧುಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡಬೇಕೆಂದು ವಿನಂತಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ರಾಮದಾಸ್ ನಿವೃತ್ತ ಅಧಿಕಾರಿ ಭಕ್ತರಮೇಗೌಡ ವಾಲ್ಮೀಕಿ ಸಮಾಜದ ಅಧ್ಯಕ್ಷ ಮಲ್ಲಪ್ಪ ನಾಯಕ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪಿ ಜೆ ತಿಪ್ಪೇಸ್ವಾಮಿ ವಾಲ್ಮೀಕಿ ಮಹಿಳಾ ಸಂಘದ ಅಧ್ಯಕ್ಷ ಮಂಗಳಮ್ಮ ತಾಲೂಕು ವಾಲ್ಮೀಕಿ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *