ಮೀಟರ್ ಬಡ್ಡಿ ದಂಧೆಗೆ ಒಂದೆ ಕುಟುಂಬದ ಐವರು ಬಲಿ

ರಾಜ್ಯ

ಮೀಟರ್ ಬಡ್ಡಿ ದಂಧೆಗೆ ಒಂದೇ ಕುಟುಂಬದ ಐವರು ಬಲಿ

 

 

 

ಮೀಟರ್ ಬಡ್ಡಿ ದಂಧೆಗೆ ಒಂದೇ ಕುಟುಂಬದ ಐವರು ಬಲಿಯಾಗಿರುವ ಮನಕಲಕುವ ಘಟನೆ ತುಮಕೂರಿನ ಸದಾಶಿವನಗರದಲ್ಲಿ ನಡೆದಿದೆ.
ಮೂವರು ಮಕ್ಕಳನ್ನು ಕೊಂದು ಸಾವಿಗೆ ಶರಣಾದ ದಂಪತಿ
ಶಿರಾ ಮೂಲದ ಲಕ್ಕವನಹಳ್ಳಿ ಮೂಲಕ ಕುಟುಂಬ ಆತ್ಮಹತ್ಯೆಗೆ ಕಾರಣವನ್ನು
ಸೆಲ್ಪೀ ವಿಡಿಯೋ ಜೊತೆ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ‌. ಅದು ಕೇವಲ ಒಂದೂವರೆ ಲಕ್ಷ ಸಾಲ. ತೀರಿಸಲಾಗದಿರುವ ಮೊತ್ತದ ಸಾಲ ಅಲ್ಲವೇ ಅಲ್ಲ. ಆದರೆ ಆ ದಂಪತಿ ತಮ್ಮ ಮೂವರು ಮಕ್ಕಳನ್ನು ಕತ್ತು ಹಿಸುಕಿ ಸಾಯಿಸಿ ತಾವೂ ನೇಣಿಗೆ ಶರಣಾಗಿದ್ದಾರೆ.
ಏನೂ ಅರಿಯದ ಪುಟ್ಟ ಮಕ್ಕಳನ್ನು ದಾರದಿಂದ ಕತ್ತು ಹಿಸುಕಿ ಸಾಯಿಸಿದ ತಂದೆ, ಬಳಿಕ ಪತ್ನಿಯೊಂದಿಗೆ ತಾನೂ ನೇಣಿಗೆ ಶರಣಾಗಿದ್ದಾನೆ. ಇದರಿಂದ ಒಂದೇ ಕುಟುಂಬದ ಐವರು ಸಾಲದ ಶೂಲಕ್ಕೆ ಬಲಿಯಾಗಿದ್ದಾರೆ.ಪತಿ ಗರೀಬ್ ಸಾಬ್ (32), ಪತ್ನಿ ಸುಮಯ್ಯ (30) ,ಮಗಳು ಹಾಜಿರಾ (14), ಗಂಡು ಮಕ್ಕಳಾದ ಮೊಹ್ಮದ್ ಸುಭಾನ್ (10),ಮೊಹಮದ್ ಮುನೀರ್ (8)ಮೃತರು. ಶಿರಾ ತಾಲೂಕಿನ ಲಕ್ಕನಹಳ್ಳಿ ಮೂಲದವರು. ಗರೀಬ್ ಸಾಬ್ ತುಮಕೂರಿನಲ್ಲಿ ಕಬಾಬ್ ಅಂಗಡಿ ನಡೆಸುತಿದ್ದ. ಮೂವರು ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ಸಂಸಾರದ ಖರ್ಚಿಗೆ ಸಾಲ ಮಾಡಿಕೊಂಡಿದ್ದ. ಅದು ಕೇವಲ ಒಂದೂವರೆ ಲಕ್ಷ , ಇಷ್ಟು ಸಾಲದ ಹೊರೆಗೆ ಬೇಸತ್ತು ತಾನೂ ಆತ್ಮಹತ್ಯೆ ಮಾಡಿಕೊಂಡಿದಲ್ಲದೇ ಪತ್ನಿ ಮಕ್ಕಳನ್ನೂ ಸಾಯಿಸಿದ್ದಾನೆ. ಸಾವಿಗೂ ಮುನ್ನ ಗರೀಬ್ ಸಾಬ್ ಡೆತ್ ನೋಟ್ ಜೊತೆಗೆ ವೀಡಿಯೋ ಹೇಳಿಕೆ ಕೂಡ ಬಿಡುಗಡೆ ಮಾಡಿ ತನ್ನ ಸಂಬಂಧಿಕರಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಲದಿಂದ ಸಂಸಾರ ನೆಡೆಸಲು ಆಗುತ್ತಿಲ್ಲ ಸಾಯುತ್ತಿದ್ದೇನೆ ಎಂದು ಹೇಳಿದ್ದಾನೆ. ಜೊತೆ ಸಾಲ ನೀಡಿದ್ದ ಖಲಂದರ್ ಅವನ ಪತ್ನಿ ಮಗ, ಮಗಳು, ಮಹಡಿ ಮನೆ ಶಬಾನಾ ಕಿರುಕುಳ ನೀಡುತ್ತಿದ್ದರು. ಅವರಿಗೆ ಶಿಕ್ಷೆ ಯಾಗ ಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ವಿಷಯ ತಿಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಆಗಮಿಸಿ ಮೃತದೇಹಗಳನ್ನು ವೀಕ್ಷಿಸಿ,ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವರು, ಮೃತರು ಡೆತ್ ನೋಟ್ ಹಾಗೂ ಪತ್ರದಲ್ಲಿ ಉಲ್ಲೇಖಿಸಿರುವಂತೆ ಐವರ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಾಲದ ವಿಚಾರ ಪ್ರಸ್ತಾಪಿಸಿದ ಪರಮೇಶ್ವರ್ ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಕ್ರಮಕ್ಕೆ ಕಾನೂನು ಅಸ್ತ್ರದ ಕಟ್ಟುನಿಟ್ಟಿನ ಆದೇಶ ನೀಡಿದರು. ತಿಲಕ್ ಪಾರ್ಕ್ ಠಾಣೆಯಲ್ಲಿ ಈಸಂಬಂಧ ಎರಡು ಪ್ರಕರಣ ದಾಖಲಾಗಿದೆ. ಆರೋಪಿ ಖಲಂದರ್ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮೃತ ದೇಹವನ್ನು ಅವರ ಹುಟ್ಟೂರು ಶಿರಾದ ಲಕ್ಕನಳ್ಳಿಗೆ ಸಾಗಿಸಲಾಗಿದೆ. ಸಾಲದ ಶೂಲ, ಮಾನಸಿಕ ಕಿರುಕುಳದಿಂದ ಮೃತಪಟ್ಟ ಕುಟುಂಬವನ್ನು ಕಂಡು ಜನತೆ ಮಮ್ಮಲ ಮರುಗಿದ್ದಾರೆ.

Leave a Reply

Your email address will not be published. Required fields are marked *