ಉದ್ಯೋಗಕ್ಕಾಗಿ ವಾಹನಗಳ ಸದ್ಬಳಕೆ‌ ಮಾಡಿಕೊಳ್ಳಿ

ಜಿಲ್ಲಾ ಸುದ್ದಿ

 ಸರ್ಕಾರ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ದೊರಕಿಸುವ  ಸಲುವಾಗಿ  ದ್ವಿಚಕ್ರ ವಾಹನಗಳ ನೆರವು ನೀಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿ  ಮಂದಿರದಲ್ಲಿ ಗುರುವಾರದಂದು ಡಾ.ಬಿ.ಆರ್.ಅಂಬೇಡ್ಕರ್  ಅಭಿವೃದ್ಧಿ ನಿಗಮ,  ಆದಿಜಾಂಬವ ಅಭಿವೃದ್ಧಿ ನಿಗಮ,ಮಹರ್ಷಿ  ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ  ನಿಗಮ,  ಬೋವಿ ಅಭಿವೃದ್ಧಿ ನಿಗಮ, ತಾಂಡ  ಅಭಿವೃದ್ಧಿ ನಿಗಮಗಳ  ವತಿಯಿಂದ   ಅರ್ಹ ಫಲಾನುಭವಿಗಳಿಗೆ  ದ್ವಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.
ರಾಜ್ಯ ಸರ್ಕಾದ  ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕು ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತಿದೆ.ಇಂದು ನನ್ನ ಕ್ಷೇತ್ರದಲ್ಲಿ ವಾಲ್ಮೀಕಿ ನಿಗಮ 20, ಅಂಬೇಡ್ಕರ್ ನಿಗಮ 20, ಆದಿಜಾಂಬವ ನಿಗಮ 20, ತಾಂಡ ನಿಗಮ 10 , ಬೋವಿ ನಿಗಮ -10 ಸೇರಿ ಒಟ್ಟು  80 ಫಲಾನುಭವಿಗಳಿಗೆ  56  ಲಕ್ಷ ವೆಚ್ಚದಲ್ಲಿ   ದ್ವಿಚಕ್ರ ವಾಹನಗಳನ್ನು ನೀಡಲಾಗಿದೆ‌. ಪ್ರತಿ ದ್ವಿಚಕ್ರ ವಾಹನಕ್ಕೆ 70 ಸಾವಿರ ರೂ ನಿಗದಿ ಮಾಡಲಾಗಿದ್ದು, 50 ಸಾವಿರ ಸಬ್ಸಿಡಿ ಹಾಗೂ 20 ಸಾವಿರ ರೂ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲಾಗಿದೆ..
ಯುವ ಸಮೂಹ ಬಟ್ಟೆ ವ್ಯಾಪರ, ಮೀನು ವ್ಯಾಪರ, ತರಕಾರಿ ವ್ಯಾಪರ, ಅನ್ ಲೈನ್ ಮಾರ್ಕೆಟಿಂಗ್ ಸರಕುಗಳ ಸರಬರಾಜು, ಖಾಸಗಿ ಮತ್ತು  ಫೈನಾನ್ಸ್ ಕಂಪನಿಗಳಲ್ಲಿ ಉದ್ಯೋಗಕ್ಕೆ ದ್ವಿಚಕ್ರ ವಾಹನಗಳು ಅತ್ಯಗತ್ಯವಾಗಿದ್ದು  ಸದುಪಯೋಗ ಮಾಡಿಕೊಳ್ಳಬೇಕು.
ಸರ್ಕಾರ ನೀಡಿದ  ದ್ವಿಚಕ್ರ ವಾಹನಗಳನ್ನು  ಶೋಕಿಗಾಗಿ ಬಳಸದೇ ಸ್ವಯಂ ಉದ್ಯೋಗಕ್ಕೆ ಬಳಸಿದರೆ ಮಾತ್ರ ಸರ್ಕಾರ  ಯೋಜನೆ ಫಲಪ್ರದವಾಗುತ್ತದೆ‌. ಎಷ್ಟೋ ಸಂಸ್ಥೆಗಳಲ್ಲಿ ದ್ವಿಚಕ್ರ ವಾಹನ ಇಲ್ಲದೇ ಉದ್ಯೋಗವನ್ನು ನಿರಾಕರಿಸಿರುವ ಉದಾರಣೆಗಳಿವೆ‌ ಎಂದರು.
ಸಾವಿರಾರು ಯುವಕರು ಬೈಕ್ ಪಡೆಯಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಆದರೆ ಆರ್ಥಿಕವಾಗಿ ಸಬಲರಲ್ಲದೇ ಕಾರಣ ಒಂದು ಬೈಕ್ ಖರೀದಿ ಮಾಡಲು ಆಗಿರುವುದಿಲ್ಲ.ಆದರೆ ಸರ್ಕಾರ ಇಂತಹ ಯೋಜನೆ ಮೂಲಕ‌ ಬಡವರಿಗೆ ತಲುಪಿಸಿ ಅವರನ್ನು  ಸಹ ಸಮಾಜದ ಮುಂಚೂಣಿಗೆ ಬರಲಿ ಮತ್ತು ಆರ್ಥಿಕವಾಗಿ ಸಬಲರಾಗಿಸುವ  ಆಶಯದಿಂದ ನಮ್ಮ ಸರ್ಕಾರ ಈ ಯೋಜನೆ ತಂದಿದ್ದು ಇದು ಉತ್ತಮ ಯೋಜನೆಯಾಗಿದೆ.
ಎಲ್ಲಾರೂ ಸಹ ಕಡ್ಡಾಯವಾಗಿ ಲೈಸೆನ್ಸ್ , ಹೆಲ್ಮೆಟ್ ಬಳಸಿ ವಾಹನ‌ ಚಲಾಯಿಸಬೇಕು‌. ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕು. ದ್ವಿಚಕ್ರ ವಾಹನಗಳು ಪಡೆದ ಎಲ್ಲಾರಿಗೂ ಶುಭಾವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಎಸ್ಟಿ ನಿಗಮ ತಾಲೂಕು ಅಧಿಕಾರಿ ಮಹೇಶ್, ಆದಿಜಾಂಬವ ನಿಗಮ ತಾಲೂಕು ಅಧಿಕಾರಿ ತಿರುಮಲೇಶ್, ಅಂಬೇಡ್ಕರ್ ನಿಗಮದ ಮುರುಳಿ , ಶ್ರೀಅಹೋಬಲ ಟಿವಿಎಸ್ ಮಾಲೀಕ ಅರುಣ್  ಮತ್ತು  ಫಲಾನುಭವಿಗಳು ಹಾಜರಿದ್ದರು‌.

 

 

 

Leave a Reply

Your email address will not be published. Required fields are marked *