ಶಾಸಕ ಚಂದ್ರಪ್ಪ ವೀರಶೈವ ಸಮಾಜದ ಕ್ಷಮೆ ಕೇಳಬೇಕು

ರಾಜ್ಯ

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಏನಾದರೂ ಶಾಸಕರಾಗಿದ್ದರೆ ಅದು‌ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಕೃಪಾಶೀರ್ವಾದದಿಂದ ಅದನ್ನು ಅವರು ಮನಗಾಣಬೇಕೆಂದು ಹೊಳಲ್ಕೆರೆಯ ಅಗ್ರಹಾರದ ಮಂಜುನಾಥ್ ಹೇಳಿದರು.‌ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಅದು‌ ಬಿಟ್ಟು ಲಿಂಗಾಯಿತ ಸಮುದಾಯದ ಬಗ್ಗೆ ಹಾಗೂ ಯಡಿಯೂರಪ್ಪ ಅವರ ಬಗ್ಗೆ ಕೀಳಾಗಿ ಮಾತಾಡುವುದು ಸರಿಯಲ್ಲ. ಕೂಡಲೇ ಕ್ಷಮೆ ಕೇಳಬೇಕು. ಇನ್ನು ಗೋವಿಂದ ಕಾರಜೋಳ ಅವರು ನಿರಾತಂಕವಾಗಿ ಚುನಾವಣೆಯನ್ನು‌ ಮಾಡಬಹುದು ನಾವು ಹೆಚ್ಚಿನ ಮತಗಳನ್ನು ಹಾಕಿಸುತ್ತೇವೆ ಎಂದರು.
ಹೊಳಲ್ಕೆರೆ ಶಾಸಕ ಚಂದ್ರಪ್ಪ‌ ತಮ್ಮ‌ ಚುನಾವಣೆ ಯನ್ನು ಮಾಡಿದ್ದಾರೆಯೇ ಹೊರೆತು ಬೇರ್ಯಾವ ಚುನಾವಣೆಯನ್ನು ಮಾಡಿಲ್ಲ. ಇಂದು ಕೂಡ ತಮಗೆ ಬೇಕಿರುವ ಕೆಲವು ಜನರನ್ನು ಇಟ್ಟುಕೊಂಡು ಸಭೆ ಮಾಡಿದ್ದಾರೆ. ಅವರಿಗೆ ತಾಕತ್ ಇದ್ದರೆ ಅವರಿಗೆ ಗಂಡಸುತನ ಇದ್ದರೆ ಅವರು ಒಂದು‌ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದು ಬರಲಿ, ಎಂಎಲ್ ಎ ನಿಗಮ‌ ಮಂಡಳಿ‌ ಸ್ಥಾನ ನಮಗೆ ಬೇಕು ಎಂದು ಹೇಳುತ್ತಾರೆ.‌ ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆಯೇ ಹೊರೆತು ಸಂಘ ಸಂಸ್ಥೆ ಪಕ್ಷಗಳಿಗಾಗಿ ಚುನಾವಣೆ ಮಾಡಿಲ್ಲ ಎಂದು ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಸದಸ್ಯ ಜಯಸಿಂಹ ಕಾಟ್ರೋತ್ ಹೇಳಿದರು.‌ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ‌ ಮಾತಾಡಿದರು. ಇಂತಹ ವ್ಯಕ್ತಿ ಬಿಜೆಪಿ ಯಡಿಯೂರಪ್ಪ ಅವರ ಬಗ್ಗೆ ಮಾತಾಡುತ್ತಾರೆ. ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 10 ಸದದಸ್ಯರನ್ನು ಗೆಲ್ಲಿಸಿಕೊಳ್ಳುವ ಗಂಡಸುತವಿರಲಿಲ್ಲವೇ? ಸದಾನಂದಗೌಡರು ಸಿಎಂ ಈಶ್ವರಪ್ಪ ಅವರಿಗೆ ಟಿಲೆಟ್ ಕೊಟ್ಟಿಲ್ಲ. ಅವರಿಗಿಂತ ಇವರು ದೊಡ್ಡವರಾ? ಪಕ್ಷ ಯಾರಿಗೆ ಟಿಲೆಟ್ ಕೊಟ್ಟಿದಿಯೋ ಅವರ ಪರ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪಾರ್ಟಿ‌ವಿಥ್ ಎ ಡಿಫರೆನ್ಸ್ ಗೊತ್ತಿಲ್ಲ.
‌ಇದರಿಂದ ಈ ರೀತಿ ಮಾತಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯ ನಿಷ್ಠಾವಂತರ ಶಾಪ ತಟ್ಟುತ್ತದೆ. ಕೂಡಲೇ ಚಂದ್ರಪ್ಪ ಬೇಷರತ್ ಕ್ಷಮೆ ಯಾಚಿಸಿ ಬಿಜೆಪಿ ಪರವಾಗಿ ಕೆಲಸ ಮಾಡಿದರೆ ಗೌರವ ಬರುತ್ತದೆ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಜಯಸಿಂಹ ಕಾಟ್ರೋತ್, ಅಗ್ರಹಾರ ಬಸವರಾಜ್ ತಿಪ್ಪೇಸ್ವಾಮಿ ಇದ್ದರು.

 

 

 

Leave a Reply

Your email address will not be published. Required fields are marked *