ಹೊಸದುರ್ಗ: ಲಂಚ ಪಡೆಯುತ್ತಿದ್ದ ಬೆಸ್ಕಾಂ ಸೆಕ್ಷನ್ ಆಫೀಸರ್ ಲೋಕಾ ಬಲೆಗೆ
ವಿದ್ಯುತ್ ಟ್ರಾನ್ಸಫಾರ್ಮರ್ ಬದಲಾಯಿಸಿಕೊಡಲು ನಾಲ್ಕು ಸಾವಿರ ಲಂಚ ಕೇಳಿದ ಬೆಸ್ಕಾಂ ಸೆಕ್ಷನ್ ಆಫೀಸ ರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆಯೊಂದು ಹೊಸದುರ್ಗದ ಮಾಡದಕೆರೆಯಲ್ಲಿಂದು ನಡೆದಿದೆ.
ಸೆಕ್ಷನ್ ಆಫೀಸರ್ ಮಧು, ಮಾಡದಕೆರೆ ನಾಗಯ್ಯನಹಟ್ಟಿ ಗ್ರಾಮದ ರಾಮಚಂದ್ರಪ್ಪ ತನ್ನ ಜಮೀನು ಸೇರಿ, ಸುತ್ತಲ ರೈತರು ಟ್ರಾನ್ಸ್ ಫಾರ್ಮರ್ ಹಾಕಿಕೊಂಡು ಬಳಸುತ್ತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಸುಟ್ಟು ಹೋಗಿದ್ದು, ಅದನ್ನು ಬದಲಿಸಿಕೊಡುವಂತೆ ಸೆಕ್ಷನ್ ಆಫೀಸರ್ ಮಧು ಅವರನ್ನು ಕೇಳಿದ್ದಾರೆ. ಮಧು ಬದಲಿಸಿಕೊಡಲು ನಾಲ್ಕು ಸಾವಿರ ಲಂಚ ಕೇಳಿದ್ದು, ರಾಮಚಂದ್ರಪ್ಪ ಲೋಕಾಯಿಕ್ತರಿಗೆ ದೂರು ನೀಡಿದ್ದಾರೆ.ಇಂದು ಲಂಚದ ಹಣ ಮೂರು ಸಾವಿರ ಪಡೆಯುವಾಗ ಲೋಕಾ ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.ಲೋಕಾಯುಕ್ತ ಪೊಲೀಸರು ಬಂಧಿಸಿಮುಂದಿನ ತನಿಖೆ ಕೈಗೊಂಡಿದ್ದಾರೆ.





