ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಕವಾಡಿಗರ ಹಟ್ಟಿಯಲ್ಲಿ ನಡೆದಿದೆ. ಕೊಲೆಗೀಡಾಗಿರುವ ವ್ಯಕ್ತಿಯನ್ನು ಹಮಾಲಿ ಕೆಲಸ ಮಾಡುತ್ತಿದ್ದ ಸತೀಶ್ ಎಂದು ಗುರುತಿಸಲಾಗಿದೆ.
ಐದು ಜನ ಸ್ನೇಹಿತರು ನಿರ್ಜನ ಪ್ರದೇಶದಲ್ಲಿ ಒಟ್ಟಿಗೆ ನಿರಂತರವಾಗಿ ಮದ್ಯಪಾನ ಮಾಡಿದ್ದು, ಜೂಜಾಟದಲ್ಲಿ ತೊಡಗಿದ್ದರು. ಗಂಗಾಧರೇಶ್ವರ ದೇವಾಲಯದ ಪುಷ್ಕರಣಿ ಬಳಿ ಕ್ಷುಲ್ಲಕ ಕಾರಣಕ್ಕೆ ಐದು ಜನರಲ್ಲಿ ಜಗಳವಾಗಿದೆ. ಇದರಲ್ಲಿ ಸತೀಶ್ ಎನ್ನುವವನ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸತೀಶ್ ನ ಪೋಷಕರು ಕೃಷ್ಣ ಎನ್ನುವ ವ್ಯಕ್ತಿ ಮೇಲೆ ದೂರು ನೀಡಿದ್ದು,ಕೋಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ನಾಲ್ಕು ಜನರಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದು, ಓರ್ವ ತಲೆ ಮರೆಸಿಕೊಂಡಿದ್ದಾನೆ. ವಿಚಾರಣೆ ಇನ್ನು ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.