11 ಲಕ್ಷ ಮೌಲ್ಯದ ತಾಮ್ರ ತಂತಿ ಕಳ್ಳರ ಬಂಧನ

ಕ್ರೈಂ

ಪವನ ವಿದ್ಯುತ್ ಯಂತ್ರಗಳಿಗೆ ಹಾಕಿದ್ದ ತಾಮ್ರದ ತಂತಿ‌ ಸೇರಿದಂತೆ ತಂತಿ ಸಾಗಿಸಲು ಬಳಸಿದ್ದ ವಾಹನಗಳು ಸೇರಿ ಒಟ್ಟು 11 ಲಕ್ಷದ 92 ಸಾವಿರದ 125 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಆರು ಜನ ಆರೋಪಿಗಳನ್ನು‌ ಹೊಳಲ್ಕೆರೆಯ ಚಿತ್ರಹಳ್ಳಿ‌ ಗೇಟ್ ಠಾಣೆ ಬಂಧಿಸಿದ್ದಾರೆ.
ಬಂಧಿತರನ್ನು ಹೊಳಲ್ಕೆರೆಯ ಗುರುಮೂರ್ತಿ, ಸಣ್ಣ ಕೆಂಚಪ್ಪ, ಸಂತೋಷ್, ರಾಘವೇಂದ್ರ ವೆಂಕಟೇಶ್ ಡಿ. ರಾಜು ಅವರನ್ನು ಬಂಧಿಸಿದ್ದು, ಕೃಷ್ಣ ಮತ್ತು ಚಂದ್ರು ಎಂಬ ಆರೋಪಿಗಳು ತಲೆ ತಪ್ಪಿಸಿಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಹೊಳಲ್ಕೆರೆಯ ತೇಕಲವಟ್ಟಿಯ ಗುಡ್ಡದಲ್ಲಿ 8 ಪಚನ ವಿದ್ಯುತ್ ಕೇಂದ್ರಗಳಿಗೆ ಅಳವಡಿಸಿದ್ದ 300 sq mm ಅಳತೆಯ 700 ಮೀಟರ್ ಉದ್ದದ 7 ಲಕ್ಷ ಮೌಲ್ಯದ ತಾಮ್ರದ ತಂತಿಯನ್ನು ಕಳವು ಮಾಡಿಕೊಂಡು ಹೋಗಿದ್ದರ ಬಗ್ಗೆ ಚಿತ್ರದುರ್ಗದ ಜೋಗಿ ಮಟ್ಟಿ ರಸ್ತೆ ವಿಂಡ್ ವರ್ಲ್ಡ್ ಕಂಪನಿಯ ಮಾಲೀಕ‌ ನವೀನ್ ಕುಮಾರ್ ಚಿತ್ರಹಳ್ಳಿ‌ ಗೇಟ್ ಠಾಣೆಯಲ್ಲಿ ದೂರು‌ ನೀಡಿದ್ದು, ಅದರಂತೆ ತನಿಖೆ ಆರಂಭಿಸಿ ಆರೋಪಿಗಳ ಪತ್ತೆ ಹಚ್ಚಿರುವ ಚಿತ್ರಹಳ್ಳಿ ಗೇಟ್ ಠಾಣೆ ಪೊಲೀಸರು,ಆರೋಪಿಗಳು ಹಿರಿಯೂರು ಮತ್ತು ಜಗಳೂರಿನ ಗುಜರಿ‌ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ ತಾಮ್ರದ ತಂತಿಯನ್ನು ಒಟ್ಟು 6 ಲಕ್ಷ ಮೌಲ್ಯದ ತಂತಿಯನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮತ್ತು ತನಿಖೆ ಮುಂದುವರೆದಿದ್ದು, ಪತ್ತೆ ಕಾರ್ಯದಲ್ಲಿ‌ ಭಾಗವಹಿಸಿದ್ದ ಹೊಳಲ್ಕೆರೆ ಸಿಪಿಐ ಎಂಬಿ ಚಿಕ್ಕಣ್ಣನವರ್ ಹಾಗೂ ಪಿಎಸ್ಐ ಕಾಂತರಾಜು, ಪೊಲೀಸ್ ಸಿಬ್ಬಂದಿಗಳಾದ ಆರ್ ಡಿ‌ ರಮೇಶ್ ಕುಮಾರ್, ತಿಮ್ಮಣ್ಣ, ರುದ್ರೇಶ್, ಸನಾವುಲ್ಲ, ರವಿಕುಮಾರ್,ಕುಬೇರಪ್ಪ, ನೂರ್ ಆಹಮದ್ ನದಾಫ್, ಸಿದ್ದನಗೌಡ ಇವರನ್ನು‌ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಶ್ಲಾಘಿಸಿದ್ದಾರೆ.

 

 

 

Leave a Reply

Your email address will not be published. Required fields are marked *