ಚಿತ್ರದುರ್ಗ: ಚಿತ್ರದುರ್ಗ ಪೋಲಿಸರು ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದು 60 ಲಕ್ಷ ರೂಪಾಯಿ ಹಾಗೂ 15 ಜನ ಅರೋಪಿಗಳನ್ನು ಬಂಧಿಸಿದ್ದಾರೆ.
ಹೊಳಲ್ಕೆರೆಯಲ್ಲಿ ಮಹಾರಾಷ್ಟ್ರದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರೈಸ್ ಪುಲ್ಲಿಂಗ್ ತಂಡವನ್ನು ಹಿಡಿದಿದ್ದು ಮಹಾ ರಾಷ್ಟ್ರ ಮೂಲದ ಆರು ಜನರನ್ನು ಬಂಧಿಸಿ 23 ಲಕ್ಷ ರೂಪಾಯಿಗಳು ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಳ್ಳಕೆರೆ ಪೋಲಿಸರು ಬೈಕ್ ಕಳವು ಮಾಡಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 2.5 ಲಕ್ಷದ ಬೈಕ್ ಗಳು, 1.45 ಲಕ್ಷ ಮೌಲ್ಯದ ಕುರಿಗಳು ಹಾಗೂ 5 ಲಕ್ಷ ಮೌಲ್ಯದ ಒಂದು ಕಾರು ಹಾಗೂ 5 ಲಕ್ಷ ಮೌಲ್ಯದ 25 ಮೋಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು ಚಳ್ಳಕೆರೆ ಪೋಲಿಸರು 14 ಲಕ್ಷ 95 ಸಾವಿರ ಮೌಲ್ಯದ ಬೆಲೆ ಬಾಳುವ ಕಾರು, ಬೈಕ್, ಮೊಬೈಲ್ ಮತ್ತು ಕುರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಬಾಲಚಂದ್ರ ನಾಯಕ್ ಹಾಗೂ ಪೋಲಿಸ್ ಸಿಬ್ವಂದಿ ಯು ಎರಡು ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯದ ಅಕ್ಕಿ ಎರಡು ಪ್ರಕರಣಗಳಲ್ಲಿ ಒಟ್ಟು 993 ಅಕ್ಕಿ ಚೀಲಗಳನ್ನು ಹಾಗೂ 40 ಲಕ್ಷ ಮೌಲ್ಯದ ಮೂರು ಕ್ಯಾಂಟರ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ರಾಧಿಕಾ ಪತ್ರಿಕಾ ಗೋಷ್ಟಿ ನಡೆಸಿ ಮಾಹಿತಿನೀಡಿದ್ದಾರೆ.
ಸಂಯುಕ್ತವಾಣಿ