ಮುರುಘಾ ಶ್ರೀಗಳಿಂದ ಮಠದ ಸ್ಥಿರಾಸ್ತಿಗಳ ಅಕ್ರಮ ಮಾರಾಟ: ಮಾಜಿ ಸಚಿವ ಹೆಚ್. ಏಕಾಂತಯ್ಯ ಆರೋಪ

ರಾಜ್ಯ

ಬೆಂಗಳೂರಿನ ಸೋಲಿಕೆರೆ ಗ್ರಾಮದಲ್ಲಿ ಸರ್ವೆ ನಂಬರ್ 34ರಲ್ಲಿ 7 ಎಕರೆ, 18 ಗುಂಟೆ ಜಮೀನನ್ನ ಆನಂದ್ ಕುಮಾರ್ ಎಂಬುವರಿಗೆ 79 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದಾರೆ. ಆದರೆ ಇದು ಸಬ್ ರಿಜಿಸ್ಟರ್ ಕಚೇರಿ ಯ ಮಾರ್ಗಸೂಚಿಯಂತೆ 3 ಕೋಟಿ 59 ಲಕ್ಷದ 50,000 ಬೆಲೆ ಬಾಳುತ್ತದೆ ಆದರೆ ಶ್ರೀಗಳು ಹಣ ಪಡೆದಿರುವುದು ಕೇವಲ 49 ಲಕ್ಷಗಳು ಮಾತ್ರ ಎಂದು ಮಾಜಿ‌ ಸಚಿವ ಹೆಚ್. ಏಕಾಂತಯ್ಯ ಆರೋಪಿಸಿದರು.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಗರದ ಹೊರ ವಲಯದಲ್ಲಿರುವ ಮುರು ಘಾ ಮಠದ ಡಾ. ಶಿವ ಮೂರ್ತಿ ಸ್ವಾಮೀಜಿ ಅವರು ನೈತಿಕ ಹೊಣೆ ಹೊತ್ತು ಪೀಠ ತ್ಯಾಗ ಮಾಡಲಿ ಎಂದು ಮಾಜಿ ಸಚಿವ ಎಚ್ ಏಕಾಂತ ಯ್ಯಆಗ್ರಹಿಸಿದ್ದಾರೆ.
ಮುರುಘಾ ಶ್ರೀಗಳು ಸಬ್ ರಿಜಿಸ್ಟರ್ ಕಚೇರಿ ಯ ಮಾರ್ಗಸೂಚಿ ಬೆಲೆಗಿಂತ ಕಡಿಮೆ ಬೆಲೆಗೆ ಮಠದ ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
ಇದಲ್ಲದೆ ಹಾವೇರಿಯಲ್ಲಿ ಸರ್ವೆ ನಂಬರ್ 229ರಲ್ಲಿ 21 ಎಕರೆ 12 ಗುಂಟೆ ಜಾಗವನ್ನು 3 ಎಕರೆ 25 ಗುಂಟೆಯಂತೆ ಒಂದೊಂ ದು ಬ್ಲಾಕ್ ಗಳಾಗಿ ವಿಂಗಡಿಸಿ 4, 75,000 ಗಳಿಗೆ ಮಾರಾಟ ಮಾಡ ಲಾಗಿದೆ ಇದರ ನಿಜವಾದ ಬೆಲೆ 10 ಲಕ್ಷದ 65,000 ಆಗಿದೆ ಎಂದು ತಿಳಿಸಿ ದರು.ಇನ್ನು ಎಸ್ ಜೆ ಎಂ ಕಾಲೇಜು ಪಕ್ಕದ ಸರ್ವೆ ನಂಬರ್ ಸರ್ವೆ ನಂಬರ್ 9ರಲ್ಲಿ 6 ಎಕರೆ 20 ಗುಂಟೆ ಜಮೀನನ್ನ 1990ರಲ್ಲಿ ಕಾಲೇಜು ಕಟ್ಟಡ ನಿರ್ಮಾ ಣ ಮತ್ತು ಆಟದ ಮೈದಾ ನಕ್ಕಾಗಿ ಅಲಿನೇಷಶನ್ ಮಾಡಿಸಿಕೊಂಡ ಶ್ರೀಗಳು 10-10-1990 ರಲ್ಲಿ 1ಎಕರೆ 22ಗುಂಟೆ ಆಟದ ಮೈದಾನವನ್ನು 21 ಸೈಟ್ಗ ಳಾಗಿ ಮಾರಾಟ ಮಾಡಿ ದ್ದಾರೆ. ಹೀಗೆ ಶ್ರೀಗಳು ಹಂತ ಹಂತವಾಗಿ ಪ್ರತಿ ಯೊಂದು ವ್ಯವಹಾರವನ್ನ ಯಾರ ಗಮನಕ್ಕೆ ತರದೆ ಅಥವಾ ತಿಳಿಸದೆ ಗೌಪ್ಯ ವಾಗಿ ನಡೆಸಿದ್ದಾರೆ ಎಂದು ಹೇಳಿದರು.ಇತ್ತ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದಲ್ಲಿರುವ ಮುರುಘಾ ಶರಣರ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಬಹುತೇಕ ಫಲಾನುಭವಿಗಳು ಸ್ವಾ ಮೀಜಿಯ ಶಿಷ್ಯರಾಗಿದ್ದಾರೆ ಎಂದು ಅವರು ಆರೋ ಪಿಸಿದರು. ಹಾಗಾಗಿ ಇಂತಹ ಅನ್ಯಾಯದ ವಿರುದ್ಧ ನಾನು ಹೋರಾಟಕ್ಕೆ ಇಳಿದಿದ್ದೇನೆ, ಎಂದು ಮಾಜಿ ಸಚಿವ ಹೆಚ್ ಏಕಾಂತಯ್ಯ ತಿಳಿಸಿದರು.

 

 

 

Leave a Reply

Your email address will not be published. Required fields are marked *