ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಎಸ್ ಆರ್ ಎಸ್ ವಿದ್ಯಾರ್ಥಿಗಳ ಸಾಧನೆ

ರಾಜ್ಯ

ಇದೇ ಜನವರಿಯಲ್ಲಿ ನೆಡೆದ ಜೆಇಇ ಮೈನ್ಸ್ ನ ಮೊದಲ ಸ್ಲಾಟ್ ಪರೀಕ್ಷೆಯಲ್ಲಿ ಚಿತ್ರದುರ್ಗ ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

 

 

 

34 ವಿದ್ಯಾರ್ಥಿಗಳು ಶೇಕಡ 90 ರಷ್ಟು ಅಂಕ ಗಳಿಸಿ ಇತಿಹಾಸ ಸೃಷ್ಠಿಸಿದ್ದಾರೆ. ಮನೋಜ್ ಎಸ್ ಎಂ ಎಂಬ ವಿದ್ಯಾರ್ಥಿಯು ಶೇ 98.23 ರಷ್ಟು ಅಂಕಗಳನ್ನು ಗಳಿಸಿ ಕಾಲೇಜ್ ಹಾಗು ಜಿಲ್ಲೆಗೆ ಗಿರಿಮೆಯನ್ನು ತಂದಿದ್ದಾನೆ. ಎಸ್ ಮದನ್ 97.93, ಜೀವಿಕ ಇ, 95.37 ಗಳಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ. 34 ವಿದ್ಯಾರ್ಥಿಗಳು ಶೇ 90 ಕ್ಕಿಂತ ಹೆಚ್ಚು ಅಂಕ ಗಳಿಸಿ ಎಸ್ ಆರ್ ಎಸ್ ಕಾಲೇಜಿನ ಉತ್ತಮ ಗುಣಮಟ್ಟದ ಶಿಕ್ಷಣ ತರಬೇತಿಗೆ ಸಾಕ್ಷಿಯಾಗಿದ್ದಾರೆ. ಒಟ್ಟು 70 ವಿದ್ಯಾರ್ಥಿಗಳು ಜೆಇಇ ಮೈನ್ಸ್ ಮೊದಲ‌ ಸ್ಲಾಟ್ ನಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜೆಇಇ ಅಡ್ವಾನ್ಸ್ ಗೆ ಅರ್ಹತೆ ಗಳಿಸಿದ್ದಾರೆ. ಎಸ್ ಆರ್ ಎಸ್ ಪಿಯು ಕಾಲೇಜ್ ಜೆಇಇ ಮೈನ್ಸ್ ಮತ್ತು ಅಡ್ವಾನ್ಸಡ್ ವಿದ್ಯಾರ್ಥಿಗಳಿಗೆ ವಿಶೇಷ ಸ್ಟಾರ್ ಬ್ಯಾಚ್ ಗಳನ್ನು ಹೊಂದಿದೆ. ಜೆಇಇ ನುರಿತ ಹಾಗೂ ಪರಿಣಿತ ಉಪನ್ಯಾಸಕರ ಮಾರ್ಗದರ್ಶನದಲ್ಲಿ ತರಬೇತಿ‌ ನೀಡಲಾಗಿದೆ. ಹೈದ್ರಾಬಾದ್ ಹಾಗೂ ಉತ್ತರ ಭಾರತದಿಂದ ಉಪನ್ಯಾಸಕರು ತರಬೇತಿ‌ ನೀಡಲು ಆಗಮಿಸುತ್ತಿದ್ದು, ಈ ಸಾಲಿನಿಂದ ಎಸ್ ಆರ್ ಎಸ್ ನಲ್ಲಿಯೇ ಪೂರ್ಣ ಪ್ರಮಾಣದಲ್ಲಿರುತ್ತಾರೆ. ಈ ಭಾಗದ ಜೆಇಇ ಆಸಕ್ತಿ‌ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಆಶಾದಾಯಕವಾಗಿದೆ. ಎಸ್ ಆರ್ ಎಸ್ ಕಾಲೇಜ್ ಸರ್ವ ರೀತಿಯಲ್ಲಿ ತರಬೇತಿ‌ ನೀಡಲು ತಯಾರಾಗಿದೆ. ಇದೇ ಸಂದರ್ಭದಲ್ಲಿ 22- 23 ನೇ ಸಾಲಿನಲ್ಲಿ ಫಲಿತಾಂಶವು ಉತ್ತಮವಾಗಿದ್ದು, ಎಸ್ ಆರ್ ಎಸ್ ಪಿಯು ಕಾಲೇಜಿನ ಒಟ್ಟು 8 ವಿದ್ಯಾರ್ಥಿಗಳು ಐಐಟಿ, ಐಐಐಟಿ ಮತ್ತು ಎನ್ ಐ ಟಿಗಳಿಗೆ ಹಾಗು ಪ್ರತಿಷ್ಠಿತ ಎ ಐ ಐ ಎಂ ಎಸ್ ಗೆ ಇಬ್ಬರು ಜೆಐಪಿಎಂಇಆರ್ ಗೆ ಒಬ್ಬ ವಿದ್ಯಾರ್ಥಿ ಹಾಗೂ ಮೆಡಿಕಲ್ ಗೆ ಆಯ್ಕೆ ಆಗಿದ್ದಾರೆ. ಈ ಬಾರಿಯ ಫಲಿತಾಂಶ ಕಳೆದ ಬಾರಿಯ ಫಲಿತಾಂಶಕ್ಕಿಂತ ಉತ್ತಮವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಐಐಟಿಗೆ ಆಯ್ಕೆಯಾಗುವುದರಲ್ಲಿ‌ ಸಂಶಯವಿಲ್ಲ. ಇದು ಶಿಕ್ಷಣದಲ್ಲಿ ಹಿಂದುಳಿದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಶಿಕ್ಷಣ ನೀಡುವಲ್ಲಿ ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆ ಹೆಸರು ಮಾಡಿದೆ. ಕಾಲೇಜ್ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಎಸ್ ಆರ್ ಎಸ್ ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿ ಶ್ರೀಮತಿ‌ಸುಜಾತ ಲಿಂಗಾ ರೆಡ್ಡಿ, ಆಡಳಿತಾಧಿಕಾರಿ ಡಾ. ಟಿಎಸ್ ರವಿ, ಪ್ರಾಂಶುಪಾಲ ಗಂಗಾಧರ್ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *