ಸಮಸ್ಯೆ ಬಗೆ ಹರಿಸದೇ ಹೋದರೆ ಸಾಮೂಹಿಕ ರಜೆ ಹೋಗುವ ಎಚ್ಚರಿಕೆ ನೀಡಿದ ಆರೋಗ್ಯ ಕವಚ ಸಿಬ್ಬಂದಿ

ರಾಜ್ಯ

ಚಿತ್ರದುರ್ಗ ಜಿಲ್ಲೆಯಾದ್ಯಂತ ಆರೋಗ, ಕವಚ 108ರ ಅಡಿಯಲ್ಲಿ ಸುಮಾರು 24 ಅಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದು ಈ ಸೇವೆಯಲ್ಲಿ ಇಎಂ.ಟಿ ಪೈಲಟ್ ೧೨೮ ಚಾಲಕರು ಸುಮಾರು 127 ಸಿಬ್ಬಂದಿಗಳು ಹಗಲಿರುಳು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಡಿ.23 ರಿಂದ ಮಾ.24 ವರೆಗೆ ವೇತನ ಪಾವತಿಯಾಗಿಲ್ಲದೆ  ಸಿಬ್ಬಂದಿಗಳ ಕುಟುಂಬ ನಿರ್ವಹಣೆ ತುಂಬ ಕಷ್ಟಕರವಾಗಿದೆ. ಈ ಹಿಂದೆ ಸರ್ಕಾರದ ಅಧಿಕಾರಿಗಳು ಮತ್ತು ಸಂಸ್ಥೆಯ ಅಧಿಕಾರಿಗಳಿಗೆ ಹಲವು ಬಾರಿ ನಮ್ಮ ಅಳಲನ್ನು ತೋಡಿಕೊಂಡಿದ್ದು ನಮ್ಮ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘದ ಉಪಾಧ್ಯಕ್ಷರಾದ ಮಂಜುನಾಥ್ ದೂರಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು 5 ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರೆಯುತ್ತಿದ್ದು, 3ರಿಂದ4 ತಿಂಗಳಿಗೆ ಒಂದು ಸಾರಿ ವೇತನ ಪಡೆಯಲು ಪರದಾಡುವಂತಾಗಿದೆ. ಈ ಮೊದಲು ಆ.22ರ ವರೆಗೆ ಇ.ಎಂ.ಟಿಗೆ ರೂ.15509 ಮತ್ತು ಪೈಲಟ್‌ಗೆ ರೂ 15731 ರೂಪಾಯಿಗಳನ್ನು ವೇತನ ರೂಪದಲ್ಲಿ ನೀಡಲಾಗುತ್ತಿತ್ತು. ನಂತರ 20 22ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಾಕಿ ಇದ್ದ 3 ವರ್ಷಗಳ ಹೆಚ್ಚುವರಿ ವೇತನ (ಇಂಕ್ರಿಮೆಂಟ್ 45%) ಸೇರಿ ಇ.ಎಂ.ಟಿಗೆ 36608 ರೂ ಮತ್ತು ಪೈಲಟ್‌ಗೆ 35605 ರೂಪಾಯಿಗಳು ವೇತನ ರೂಪದಲ್ಲಿ ನೀಡಲಾಗುತ್ತಿತ್ತು. ಈ ಹೆಚ್ಚುವರಿ ಹೊಸ ವೇತನವನ್ನು ಕೇವಲ 6 ತಿಂಗಳುಗಳ ಕಾಲ ಮಾತ್ರ ನೀಡಿ ಏಕಾಏಕಿ ಕಡಿತಗೊಳಿಸಿದ್ದಾರೆ. ಸೆ-2022 ರಿಂದ ಫೆ-2023ರವರೆಗೆ ನೀಡಿ ಯಾವುದೇ ಕಾರಣ ನೀಡದೇ ಇ.ಎಂ.ಟಿಗೆ 4000 ರೂಗಳು ಪೈಲಟ್ 6000 ರೂಗಳನ್ನು  ಕಡಿತಗೊಳಿಸಿ ಮಾ-2023 ರಿಂದ ಇ.ಎಂ.ಟಿಗೆ 32774 ರೂಗಳು ಮತ್ತು ಪೈಲಟ್ 29221 ರೂಗಳನ್ನು ನೀಡುತ್ತಿದ್ದಾರೆ ಎಂದರು.

 

 

 

ನಮಗೆ ಬರಬೇಕಾಗಿರುವ ಎರಡು ವರ್ಷದ  ಹೆಚ್ಚುವರಿ ವೇತನವನ್ನು ಸಹ ಪಾವತಿ ಮಾಡಿರುವುದಿಲ್ಲ. ಈ ಎಲ್ಲಾ ಗೊಂದಲಗಳಿಗೂ ಆರೋಗ್ಯ ಸಚಿವರು. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರು ಮತ್ತು ಉಪನಿರ್ದೇಶಕರು ಹಾಗೂ ಸಂಸ್ಥೆಯ ಮುಖ್ಯಸ್ಥರು ಮತ್ತು ನಮ್ಮ ರಾಜ್ಯ ಪದಾಧಿಕಾರಿಗಳನ್ನೊಳಗೊಂಡಂತೆ ಒಂದು ಸಭೆಯನ್ನು ಆಯೋಜಿಸುವುದರ ಮುಖಾಂತರ ಎಲ್ಲಾ ಗೊಂದಲಗಳಿಗೆ ಇತಿಶ್ರೀ ಹಾಡಿ ಮುಂದಿನ ದಿನಮಾನಗಳಲ್ಲಿ ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ವೇತನ ಪಾವತಿಯಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು,10 ದಿನದೊಳಗಾಗಿ ಈ ಸಮಸ್ಯೆಗೆ ಪರಿಹಾರ ಸಿಗದಿದ್ದ ಪಕ್ಷದಲ್ಲಿ ಈ ಸೇವೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಸಾಮೂಹಿಕ ರಜೆ ಪಡೆದುಕೊಳ್ಳುವುದರ ಮುಖಾಂತರ ಸೇವೆಯನ್ನು ಸ್ಥಗಿತಗೊಳಿಸಲಾಗುವುದು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾದ ಪಕ್ಷದಲ್ಲಿ ಸಂಸ್ಥೆಯ ಅಧಿಕಾರಿ ವರ್ಗದವರು ನೇರ ಹೊಣೆಯಾಗಿರುತ್ತಾರೆಂದು ಎಂದು ಎಚ್ಚರಿಸಿದ್ದಾರೆ.

ಸುವರ್ಣ ಕರ್ನಾಟಕ ಆರೋಗ್ಯ ಕವಚ(೧೦೮) ನೌಕರರ ಸಂಘದ ಜಿಲ್ಲಾಧ್ಯಕ್ಷ ಕರಿಯಪ್ಪ, ಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಚಿತ್ರಲಿಂಗಪ್ಪ. ಗೌರವಾಧ್ಯಕ್ಷ ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ಶಿವಮೂರ್ತಿ, ಜಂಟಿ ಕಾರ್ಯದರ್ಶಿ ಸುಂದರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *