ಅಭಿವೃದ್ದಿ ಕಾರ್ಯವಾಗಿಲ್ಲ ಎಂಬ ಕಾರಣಕ್ಕೆ ಮತದಾನ ಬಹಿಷ್ಕರಿಸಬೇಡಿ: ಡಿಸಿ ವೆಂಕಟೇಶ್

ರಾಜ್ಯ

ಮುಕ್ತ ನಿರ್ಭೀತವಾಗಿ ಮತದಾನ ಮಾಡಲು ಅವಕಾಶ ಮಾಡಿಕೊಡುವ ಉದ್ದೇಶವೇ ಈ ಮಾದರಿ‌ ನೀತಿ ಸಂಹಿತೆಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು. ಅವರು ಪತ್ರಿಕಾ ಭವನದಲ್ಲಿ‌ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು. ಮಾದರಿ‌ ನೀತಿ‌ ಸಂಹಿತೆ ಅರಂಭವಾದ ದಿನದಂದಲೇ ನಮ್ಮ ಟೀಂಗಳು ಕಾರ್ಯ ನಿರ್ವಹಿಸಲು ಶುರು ಮಾಡಿವೆ. ಜಿಲ್ಲೆಯಾದ್ಯಂತ ಫ್ಲೈಯಿಂಗ್ ಸ್ಕ್ವಾಡ್ ಗಳು, ಅಧಿಕಾರಿಗಳ ತಂಡಗಳು ಕೆಲಸ ಮಾಡುತ್ತಿವೆ. ನಮಗೆ ಬರ ನಿರ್ವಹಣೆ, ಚುನಾವಣೆ ಕೆಲಸಗಳನ್ನು ಮಾಡಿಕೊಂಡು ಹೋಗುವುದು ನಮಗೆ ಬಹಳಷ್ಟು ಸವಾಲಾಗಿದೆ.‌ಅದನ್ನು ಸಮರ್ಥವಾಗಿ‌ ನಿರ್ವಹಿಸುವ ಕೆಲಸ ಮಾಡುತ್ತೇವೆ ಎಂದರು. ಅಭಿವೃದ್ದಿ‌ಕಾರ್ಯ ಮಾಡಿಲ್ಲ ಎಂದು ಮತದಾನ ಬಹಿಷ್ಕಾರ ಮಾಡಬಾರದು, ಇದರಿಂದ ತಮ್ಮ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ. ಮತದಾನ ಮಾಡಿ,, ಕೆಲಸ ಮಾಡಲು ಅಧಿಕಾರಿಗಳು ಜನ ಪ್ರತಿನಿಧಿಗಳ ಮೇಲೆ ಒತ್ತಡ ಹಾಕಬೇಕು. ಪ್ರತೀ ಬಾರಿಯೂ ಕೂಡ ಮತದಾನದ ಅಂಕಿ‌ ಅಂಶಗಳು ಹೆಚ್ಚಾಗುತ್ತಿದೆ. ಶಿಕ್ಷಿತರು ಮತದಾನ ಮಾಡಲು ಮುಂದೆ ಬರಬೇಕು. ಇದರಿಂದ ಉತ್ತಮ‌ ನಾಯಕನ ಆಯ್ಕೆಗೆ ಸಹಕಾರಿಯಾಗುತ್ತದೆ. ಅಭಿವೃದ್ದಿ ಕೆಲಸಗಳು ಆಗದೆ ಇರುವ ಗ್ರಾಮಗಳಿಗೆ ನಾವು ಭೇಟಿ ನೀಡಿ ಸಮಸ್ಯೆ ಅರಿತು ಪರಿಹರಿಸುವ ಕೆಲಸ ಮಾಡುತ್ತೇವೆ. ಮತದಾನ ಪರಿಷ್ಕರಣೆ ನಿರಂತರವಾಗಿರುತ್ತದೆ. ಆದರೆ ಈ ಚುನಾವಣೆಯಲ್ಲಿ ಮತದಾನ ಮಾಡಲು 10 ದಿನಗಳ ಮುಂಚೆ ನೋಂದಣಿ ಮಾಡಿಕೊಂಡಂತವರಿಗೆ ಇಲ್ಲಿ ಅವಕಾಶ ಸಿಗುತ್ತದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರೂ ಅಂತಹ ಅಧಿಕಾರಿಗಳು ನಿತ್ಯದ ಕಚೇರಿ ಕೆಲಸಗಳನ್ನು ಮಾಡಬೇಕು ಎಂದು‌ ಸೂಚಿಸಲಾಗಿದೆ. ಇನ್ನು ನೀತಿ ಸಂಹಿತೆ ಸಮಯದಲ್ಲಿ ಹೊಸ ಕಾಮಗಾರಿಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದರು. ಇದೇ ಸಮಯದಲ್ಲಿ ಮಾತಾಡಿದ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ಗ್ರಾಮೀಣ ಭಾಗದ ಬೀಟ್ ಪೊಲೀಸರ ಮೇಲೆ ಅವಲಂಬಿತವಾಗಿರಾಗೋದು ಬೇಡ 24 ಗಂಟೆಗಳು ಕೂಡ 112 ಸಿಬ್ಬಂದಿ‌ ಕೆಲಸ ಮಾಡುತ್ತಿದೆ. ಅದಕ್ಕೆ ನೀವು ಕರೆ ಮಾಡಿದರೆ 12 ನಿಮಿಷದಲ್ಲಿ ಸ್ಥಳಕ್ಕೆ ಬಂದು‌ ಸಮಸ್ಯೆ ಬಗೆಹರಿಸುತ್ತಾರೆ. ಇದಕ್ಕೂ ಸಮಸ್ಯೆ ಬಗೆ ಹರಿಸಲು ಸಾಧ್ಯವಾಗಾದೆ ಹೋದರೆ ನನಗೆ ಕರೆ ಮಾಡಿ ಎಂದು ಎಸ್ಪಿ ಹೇಳಿದರು. ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಮಾರುತಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗೌಡಗೆರೆ ಹಾಗೂ ಪ್ರಧಾನ ಕಾರ್ಯದರ್ಶಿ‌ ಇದ್ದರು.

 

 

 

Leave a Reply

Your email address will not be published. Required fields are marked *