ಮಹಿಳಾ ಸಬಲೀಕರಣಕ್ಕಾಗಿ ಮತ ಚಲಾಯಿಸಿ: ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಕರೆ

ರಾಜ್ಯ

ಮಹಿಳಾ ಸಬಲೀಕರಣಕ್ಕಾಗಿ ಮತ ಚಲಾಯಿಸಿ: ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಕರೆ

ಮಹಿಳಾ ಸಬಲೀಕರಣಕ್ಕಾಗಿ ನನ್ನ ಮತ, ನನ್ನ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಎಲ್ಲಾ ಮಹಿಳೆಯುರು ತಪ್ಪದೇ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ.ಸಿಇಓ ಎಸ್. ಜೆ ಸೋಮಶೇಖರ್ ಕರೆ ನೀಡಿದರು.

 

 

 

ಶನಿವಾರ ನಗರದ ಭೀಮಸಮುದ್ರ ರಸ್ತೆಯಲ್ಲಿರುವ ಅರವಿಂದ ಗಾರ್ಮೆಂಟ್ಸ್‌ನಲ್ಲಿ ಏರ್ಪಡಿಸಲಾದ ಮತದಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯರು ಕಡ್ಡಾಯವಾಗಿ ಮತದಾನ ಮಾಡಬೇಕು ಜೊತೆಗೆ ಕುಟುಂಬದ ವರ್ಗದವರು ಪೋಷಕರು,ಸ್ನೇಹಿತರು, ಬಂಧುಗಳಿಗೆ ಮತದಾನ ಮಾಡುವಂತೆ ಪ್ರೇರೆಪಿಸಬೇಕು. ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಇದು ಪ್ರಜಾಪ್ರಭುತ್ವ ಹಬ್ಬವಿದ್ದಂತೆ ಎಲ್ಲರು ಪಾಲ್ಗೊಳ್ಳಬೇಕು. ಇದು ತಮ್ಮ ಮತದಾನ ಹಕ್ಕು ಚಲಾಯಿಸಲು ಸುವರ್ಣ ಅವಕಾಶ, ಪ್ರತಿ 5 ವರ್ಷಕೊಮ್ಮೆ ಬರುವ ಈ ಹಬ್ಬದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರುಳ್ಳ 18 ವರ್ಷ ತುಂಬಿದ ಪುರುಷ ಮತ್ತು ಮಹಿಳೆಯರು ಹಾಗೂ ಎಲ್ಲಾ ವರ್ಗದವರಿಗೂ ಲಿಂಗಭೇದ ಇಲ್ಲದೆ ಮತದಾನ ಮಾಡಲು ಅವಕಾಶವಿದೆ ಎಂದರು.

ಕುಟುಂಬದ ಮತದಾರರು ಮತ ಹಾಕುವಂತೆ ಜಾಗೃತಿ ಮೂಡಿಸುವುದು ಮಹಿಳಾ ಮತದಾರರ ಕೈಯಲ್ಲಿದೆ. ಯಾವುದೇ ಭಯ ಪಡೆದೇ ನಿರ್ಭಿತಿಯಿಂದ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡುವಂತೆಯುವ ಮಹಿಳಾ ಕಾರ್ಮಿಕರಿಗೆ ಜಾಗೃತಿಯನ್ನು ಮೂಡಿಸಿದರು. ನಂತರ ಮತದಾರ ಪ್ರತಿಜ್ಞಾ ವಿಧಿ ಭೋದಿಸಿದರು.

ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಕೆ. ತಿಮಪ್ಪ, ಗಾರ್ಮೆಂಟ್ಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು  ಗಾರ್ಮೆಂಟ್ಸ್‌‌ನಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *