ರಾಹುಲ್ ಗಾಂಧಿ, ಸಿದ್ದರಾಮಯ್ಯ ಇಬ್ಬರಿಗೂ ನೊಬೆಲ್ ಪ್ರಶಸ್ತಿ ನೀಡಬೇಕು

ರಾಜ್ಯ

 

 

 

 

ದೇಶವನ್ನು ಹೊಡೆಯುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸುತ್ತಿದೆ. ರಾಹುಲ್ ಗಾಂಧಿ ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಆಹ್ವಾನವಿರಲಿಲ್ಲ ಎಂದು ಹೇಳಿಕೆ ನೀಡಿದ್ದು, ರಾಹುಲ್ ಹಾಗೂ ಸಿದ್ದರಾಮಯ್ಯ ಅವರುಗಳಿಗೆ ಸುಳ್ಳು ಹೇಳುವ ವಿಚಾರಕ್ಕೆ  ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಗೇಲಿ ಮಾಡಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ರಾಮ ಮಂದಿರದ ಕಾರ್ಯಕ್ರಮ ಇಡೀ‌ ದೇಶವನ್ನು ಒಂದು ಗೂಡಿಸುವ ಕಾರ್ಯಕ್ರಮ. ಎಲ್ಲಾ ಸಮಾಜದ ಹಿಂದೂ ಶ್ರೀಗಳು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಹೋಗಿದ್ದರು.ಇಂತಹ ಸುಳ್ಳು ಹೇಳಿಕೆ ನೀಡಿರುವ ರಾಹುಲ್ ಗಾಂಧಿ‌ ದೇಶದ ಜನತೆಯ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಇನ್ನು ನಮ್ಮ ಸರ್ಕಾರದಲ್ಲಿ ಭ್ರಷ್ಠಾಚಾರ ಇಲ್ಲ ಎಂದು‌ನಾನು ಹೇಳಲ್ಲ, ಇದೆ ಎಂದು ಸಿಎಂ ಹೇಳಿದ್ದಾರೆ. ಆದ್ದರಿಂದ ಹಿಂದಯೇ ವರ್ಗಾವಣೆಯಲ್ಲಿ ಆಗಿದ್ದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವಂತೆ ಒತ್ತಾಯಿಸಿದ್ದೆ ಆದರೆ ಸಿಎಂ ರಚಿಸಲಿಲ್ಲ. ರಾಮ‌ಂಮದಿರದ ಬಗ್ಗೆ ಮಾತಾಡುವ ಯೋಗ್ಯತೆಯೇ ಸಂತೋಷ್ ಲಾಡ್ ಗಿಲ್ಲ. ವಸತಿ ಶಾಲೆಗಳಲ್ಲಿ ಕೈಗಿ ಮುಗಿದು ಬಾ ಜ್ಞಾನ ದೇಗುಲಕೆ ಎಂಬ ಬರಹ ಬದಲಾಯಿಸಿದ್ದು, ಸರ್ಕಾರದ ಭ್ರಷ್ಟಾಚಾರ ಪ್ರಶ್ನಿಸಬೇಕೆ ಎಂದರು. ಸರ್ಕಾರದಲ್ಲಿ ಸಿಎಂ ಡಿಸಿಎಂ ಹಾಗೂ ಸಚಿವರುಗಳಿಗೆ ಏನು ಆದೇಶ ಮಾಡುತ್ತೇವೆ ಎಂಬುದರ ಬಗ್ಗೆಯೇ ಗೊತ್ತಿಲ್ಲ, ಇಲ್ಲಿ ಒಬ್ಬರಿಗಿಬ್ಬರಿಗೆ ತಾಳ ತಂತಿಯೇ ಇಲ್ಲ. ಸುಳ್ಳು ಹೇಳುವುದರಲ್ಲಿ ರಾಹುಲ್ ಗಾಂಧಿ ಹಾಗು ಸಿದ್ದರಾಮಯ್ಯ ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ವ್ಯಂಗ್ಯವಾಡಿದರು. ಮಾದಾರ ಚನ್ನಯ್ಯ ಸ್ವಾಮೀಜಿ‌ಲೋಕಸಭಾ ಚುನಾವಣೆಯ ಚಿತ್ರದುರ್ಗದ ಅಭ್ಯರ್ಥಿಯಾಗುವ ಬಗ್ಗೆ ನನಗೆ ಗೊತ್ತಿಲ್ಲ. ಅವರಾದರೆ ನಾನು ಸಂತೋಷ ಪಡುತ್ತೇನೆ. ಕೇಂದ್ರದಲ್ಲಿ ಆಗಿದ್ದರೆ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಚರ್ಚೆ ಆಗಿಲ್ಲ. ಇನ್ನು ರಾಜಕೀಯ ಪಕ್ಷವೆಂದ ಮೇಲೆ ಸಮಸ್ಯೆಗಳಿರುತ್ತೇವೆ. ನಾನು ನಮ್ಮ ಪಕ್ಷದಲ್ಲಿಯೂ ಇಲ್ಲ ಎಂದು ಹೇಳಲ್ಲ. ಆದರೆ ಅವುಗಳನ್ನು ಸರಿಪಡಿಸಿಕೊಂಡು ಹೆಚ್ಚಿನ ಸ್ಥಾನ ಗೆಲ್ಲುವ ಕಡೆ ಗಮನ ಹರಿಸುತ್ತೇವೆ. ಡಿಕೆ ಸುರೇಶ್ ಅವರ ಹೇಳಿಕೆಯನ್ನು ನಾನು‌ ಒಪ್ಪಲ್ಲ ಎಂದು‌ ಖರ್ಗೆ, ಸಿದ್ದರಾಮಯ್ಯ ಹೇಳುತ್ತಾರೆ, ಆದರೆ ಡಿಕೆ‌ಶಿ ಅವರು ತಮ್ಮನನ್ನು ಬಿಟ್ಟು ಕೊಡಲ್ಲ,ಇದು ಅವರ ಶಿಸ್ತು ಎಂದು ಕಿಡಿ‌ಕಾರಿದರು. ಈ ಲೋಕಸಭಾ ಚುನಾವಣೆಯಲ್ಲಿ‌ ಮೋದಿ‌ ಆಡಳಿತ ಹಾಗೂ ರಾಮಮಂದಿರ ಎರಡೂ ಬಿಜೆಪಿಗೆ ಲಾಭವಾಗಲಿವೆ ಎಂದರು. ನನಗೆ ಆರ್ ಎಸ್ ಎಸ್ ತರಬೇತಿ ಆಗಿದೆ. ಸಿದ್ದರಾಮಯ್ಯ ಅವರಿಗೆ ತರಬೇತಿ ಆಗಬೇಕಿದೆ. ದೇಶವನ್ನು ತುಂಡ ಮಾಡಿದ್ದು ಕಾಂಗ್ರೆಸ್, ಜಿನ್ನಾ ಸಂಸ್ಕೃತಿಯನ್ನು ಕಾಂಗ್ರೆಸ್ ಮುಂದುವರೆಸುತ್ತಿದ್ದಾರೆ. ದೇಶ ವಿಭಜನೆ ಮಾಡುವಂತಹ ವ್ಯಕ್ತಿಗಳನ್ನು ಗುಂಡಿಟ್ಟು ಕೊಲ್ಲುವಂತಹ ಕಾನೂನನ್ನು ತನ್ನಿ ಎಂದು ಹೇಳಿದ್ದೇ, ನಾನು ಯಾರನ್ನು ಕಡಿಯಿರಿ ಬಡಿಯಿರಿ ಎಂದು ಹೇಳೆ ಇಲ್ಲ. ಭ್ರಷ್ಟಾಚಾರ ಜೈಲಿಗೊದವರು ಡಿಕೆ ಶಿವಕುಮಾರ್, ಇನ್ನು ನ್ಯಾಯಾಲಯದಲ್ಲಿ 10 ಸಾವಿರ ದಂಡ ಕಟ್ಟಿದವರು ಸಿದ್ದರಾಮಯ್ಯನವರು, ಕೋರ್ಟ್ ನಿಂದ ಆದೇಶ ಮಾಡಿಕೊಂಡು ದಂಡ ಕಟ್ಟಿದ್ದ ಸಿಎಂಗಳನ್ಯಾರನ್ನು ನಾವು ನೋಡಿಲ್ಲ ಎಂದು ವ್ಯಂಗ್ಯವಾಡಿದರು.
ಬೈಟ್: ಕೆ‌ಎಸ್ ಈಶ್ವರಪ್ಪ ಮಾಜಿ ಮಂತ್ರಿ

Leave a Reply

Your email address will not be published. Required fields are marked *