ಅ.13 ರಿಂದ 15 ರವರೆಗೆ ಶಾಂತಿಸಾಗರ ನೀರು ಸರಬರಾಜು ಸ್ಥಗಿತ
ಶಾಂತಿಸಾಗರ ನೀರು ಸರಬರಾಜು ಮುಖ್ಯ ಕೊಳವೆ ಮಾರ್ಗ ಮಧ್ಯೆದಲ್ಲಿ ಪೈಪ್‍ಲೈನ್ ದುರಸ್ಥಿ ಕಾರ್ಯ ನಡೆಯುವುದರಿಂದ ಇದೇ ಅಕ್ಟೋಬರ್ 13 ರಿಂದ 15 ರವರೆಗೆ ಚಿತ್ರದುರ್ಗ ನಗರದ ಕುಡಿಯುವ ನೀರು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
ಸಾರ್ವಜನಿಕರು ತಮ್ಮ ತಮ್ಮ ಪ್ರದೇಶದಲ್ಲಿನ ಕೊಳವೆ ಬಾವಿಗಳ ನೀರನ್ನು ಮತ್ತು ಶುದ್ದ ಕುಡಿಯುವ ನೀರನ್ನು ಉಪಯೋಗಿಸಬೇಕು. ನೀರನ್ನು ಮಿತವಾಗಿ ಬಳಸಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ