ಶಾಂತಿ ಸಾಗರದಿಂದ 200 ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ

ಜಿಲ್ಲಾ ಸುದ್ದಿ

*ಶಾಂತಿ ಸಾಗರದಿಂದ 200 ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ*

ಗಾರೇಹಟ್ಟಿಯ ಸುಮಾರು 200  ಮನೆಗಳಿಗೆ ಶಾಂತಿ ಸಾಗರದಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ‌ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

 

ನಗರದ ಗಾರೇಹಟ್ಟಿಯ ಜಯಲಕ್ಷ್ಮಿ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ಚಾಲನೆ  ಮತ್ತು ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕವನ್ನು ಉದ್ಘಾಟಿಸಿ ಮಾತನಾಡಿದರು‌.
ಗಾರೇಹಟ್ಟಿಗೆ ಜನರಿಗೆ  ಶಾಂತಿ ಸಾಗರದಿಂದ ಸುಮಾರು 12 ಲಕ್ಷ ವೆಚ್ಚದಲ್ಲಿ  ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ವ್ಯವಸ್ಥೆ  ಮಾಡಲಾಗಿದೆ. ಪ್ರತಿ ಮನೆಗೆ ಪತ್ಯೇಕ ಪೈಪ್ ಲೈನ್ ಮೂಲಕ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ.
ಜನರ ಆರೋಗ್ಯದ ದೃಷ್ಟಿಯಿಂದ  ಕುಡಿಯುವ ನೀರು ಶುದ್ದವಾಗಿರಬೇಕು  ಎಂದರು. ಗಾರೇಹಟ್ಟಿಯ ಜನರಿಗೆ ಸ್ವಲ್ಪ ಸಮಯ  ನೀಡಿ ಕುಡಿಯುವ ನೀರಿನ  ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿದ್ದೇ ಅದರಂತೆ  ಕುಡಿಯುವ ನೀರಿನ ವ್ಯವಸ್ಥೆ ಮಾಡದ್ದೇನೆ. ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯು ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು. ನೀರು ಹೆಚ್ಚು ಇದೆ ಎಂದು ಸರಿಯಾಗಿ ಬಳಸದಿದ್ದರೆ ಮುಂದೆ ಪರಿತಪಿಸಬೇಕಾಗುತ್ತದೆ‌. ಹಾಗಾಗಿ ನೀರನ್ನು ಬಳಸಿದ ನಂತರ ನೀರಿನ ನಲ್ಲಿ ಬಂದ್ ಮಾಡಬೇಕು ಎಂದು ಜನರಿಗೆ ಸಲಹೆ ನೀಡಿದರು.
 
 ಸಿ.ಸಿ.ರಸ್ತೆ  ಕಾಮಗಾರಿಗೆ ಚಾಲನೆ 
ಗಾರೇಹಟ್ಟಿಯಲ್ಲಿ ಈಗಾಗಲೇ ರಸ್ತೆಗಳನ್ನು ಮಾಡಿದ್ದೇವೆ. ಇನ್ನು ವಾಕಿ ಇರುವ ರಸ್ತೆಗಳಿಗೆ ಹಣ ನೀಡುತ್ತಿದ್ದು ಇಂದು ಸಹ 18 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು‌. ಸಮಯ ಹೆಚ್ಚ ಪಡೆದುಕೊಳ್ಳದೇ ಅದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು‌.
ಈ ಸಂದರ್ಭದಲ್ಲಿ  ನಗರಸಭೆ ಜಯ್ಯಣ್ಣ,    ನಗರಸಭೆ ಪ್ರಭಾರ ಆಯುಕ್ತ ಸತೀಶ್ ರೆಡ್ಡಿ, ಮುಖಂಡರಾದ ಸುರೇಶ್ ಬಾಬು, ಶಂಕರ್ ಮೂರ್ತಿ, ಪ್ರಕಾಶ್,ಮಂಜಣ್ಣ,  ನಗರಸಭೆ ಇಂಜಿನಿಯರ್ ಕಿರಣ್ ಇದ್ದರು.‌

Leave a Reply

Your email address will not be published. Required fields are marked *