Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ಜಿಲ್ಲಾ ಸುದ್ದಿ»ರೈತರು ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕು
ಜಿಲ್ಲಾ ಸುದ್ದಿ

ರೈತರು ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕು

D KumaraswamyBy D KumaraswamyJanuary 1, 2023No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ತಾಲೂಕಿನ ಎಲ್ಲಾ ರೈತರು ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕು ಗ್ರಾಮಾಂತರ ಪ್ರದೇಶದಲ್ಲಿರುವ ತಮ್ಮ ಹೊಲಗಳಲ್ಲಿ ರೂಢಿ ದಾರಿಗಳ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಷ್ಠೆ ಮತ್ತು ಪಣಗಳನ್ನು ಬಿಟ್ಟು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೊಂದಾಣಿಕೆ ಜೀವನ ನಡೆಸಬೇಕೆಂದು ತಹಶೀಲ್ದಾರ್ ರಘುಮೂರ್ತಿ ಹೇಳಿದರು. ಅವರು ತಾಲೂಕ ಚೇರಿಯಲ್ಲಿ ಸೋಮ ಗುದ್ದು ರಂಗಸ್ವಾಮಿ ಅವರ ರೈತ ಬಣದ ನೂರಾರು ಕಾರ್ಯಕರ್ತರೊಂದಿಗೆ ರೈತರ ಸಮಸ್ಯೆಗಳ ಕುರಿತಾದ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಈಗಾಗಲೇ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ 52,636 ಹೇಕ್ಟರ್ ಬೆಳೆಗಳಿಗೆ ಪರಿಹಾರದ ಮೊತ್ತ ಆನ್ಲೈನ್ ದತ್ತಾಂಶದಲ್ಲಿ ದಾಖಲಿಸಲಾಗಿದೆ. ಇದರಲ್ಲಿ ಈಗಾಗಲೇ 82 ಶೇಕಡವಾರು ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗಿದೆ,ಇನ್ನುಳಿದ ಹಣ ಮುಂದಿನ ದಿನಗಳಲ್ಲಿ ಜಮಾ ಆಗಲಿದೆ ರೈತರು ಇದಕ್ಕಾಗಿ ಆತಂಕಗೊಂಡು ಪ್ರತಿದಿನ ತಾಲೂಕು ಕಚೇರಿ ಅಲೆಯುವುದು ಆತಂಕ ಪಡುವುದನ್ನು ಬಿಡಬೇಕು. ಸರ್ಕಾರದ ಮಾನ ದಂಡದಲ್ಲಿ ನಿರ್ದಿಷ್ಟವಾಗಿ ಅವರವರ ಖಾತೆಗಳಿಗೆ ಪರಿಹಾರದ ಹಣ ಜಮಾ ಆಗುತ್ತದೆ ಕೆಲವೊಂದು ರೈತರಿಗೆ ಮೂರು ಬಾರಿ ನಾಲ್ಕು ಬಾರಿ ಹಣ ಹಂತ ಹಂತವಾಗಿ ಜಮಾ ಆಗುತ್ತದೆ ರೈತರು ಇದನ್ನು ಮನಗಾಣದೆ ಸುಖಾ ಸುಮ್ಮನೆ ಆತಂಕ ಗೊಳ್ಳುವುದು ಬೇಡ ರೈತ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಬಗ್ಗೆ ರೈತರನ್ನು ಮನವೊಲಿಸಬೇಕು. ಈಗಾಗಲೇ ತಾಲೂಕಿನಲ್ಲಿ 132 ರಸ್ತೆಗಳ ವಿವಾದವನ್ನು ಬಗೆಹರಿಸಲಾಗಿದೆ. ಕೆಲವೊಂದು ತೊಂದರೆ ಕೊಡುತ್ತಿದ್ದ ರೈತರಿಂದಲೂ ಕೂಡ ರೂಢಿ ದಾರಿಯನ್ನು ಬಿಡಿಸಲಾಗಿದೆ. ಇನ್ನೂ ಕೆಲವು ದಾರಿಗಳು ನ್ಯಾಯಾಲಯದಲ್ಲಿ ಇರುವುದರಿಂದ ಬಗೆಹರಿಸಲಾಗಿಲ್ಲ, ಮುಂದಿನ ದಿನಗಳಲ್ಲಿ ಸರ್ಕಾರದಿಂದ ನಿರ್ದಿಷ್ಟ ನಿಯಮಾವಳಿ ರೂಪಿತವಾದಲ್ಲಿ ತಕ್ಷಣವೇ ಇಂಥ ದಾರಿ ವಿವಾದಗಳನ್ನು ಬಗೆಹರಿಸಲಾಗುವುದು, ಹಾಗೆ 82 ಗ್ರಾಮಗಳಲ್ಲಿ ರೈತರ ಜ್ವಾಲಂತ ಸಮಸ್ಯೆಗಳಾದ ದರ್ಕಾಸ್ ತ್ತು ಜಮೀನಿನ ಪೋಡಿ ಪಾವತಿ ಖಾತೆ ಪಿಂಚಣಿ ದಾರಿ ವಿವಾದ ನೈರ್ಮಲ್ಯ ಸೇರಿದಂತೆ ಗ್ರಾಮಗಳಿಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಸರ್ಕಾರಿ ಎಲ್ಲ ಸವಲತ್ತುಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಉಳಿದ ಗ್ರಾಮಗಳನ್ನು ಕೂಡ ವಿಶೇಷ ಆಂದೋಲನ ರೂಪದಲ್ಲಿ ತೆಗೆದುಕೊಂಡು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು ರೈತರ ಹಿತವನ್ನು ಮುಂದಿಟ್ಟುಕೊಂಡು ಅದೆಷ್ಟೇ ಕಷ್ಟ ಬಂದರೂ ಕೂಡ ಕಂದಾಯ ಇಲಾಖೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಈ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು ರೈತ ಸಂಘದ ಅಧ್ಯಕ್ಷರಾದ ಸ್ವಾಮದ್ದು ರಂಗಸ್ವಾಮಿ ಮಾತನಾಡಿ ರೈತರಿಗೆ ಅಗತ್ಯವಿರುವ ದಾರಿ ವಿವಾದಗಳ ಪರಿಹಾರ ಮತ್ತು ಬ್ಯಾಂಕ್ ಗಳಿಂದ ರೈತರಿಗೆ ಸರಿಯಾದ ಸಮಯಕ್ಕೆ ಹಣವನ್ನು ನೀಡಿ ಸಹಕರಿಸುತ್ತಿಲ್ಲ ಮತ್ತು ವಿಮಾ ಕಂತಿನ ಹಣವನ್ನು ಸರಿಯಾಗಿ ಜಮಾ ಮಾಡುವಂತೆ ಕೋರಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ರೈತರ ಬೆಳೆಗಳು ನಷ್ಟವಾದ ಬಗ್ಗೆ ಪರಿಪೂರ್ಣವಾಗಿ ದತ್ತಾಂಶದಲ್ಲಿ ವಿವರವನ್ನು ದಾಖಲಿಸಲಾಗಿದೆ ರೈತರು ಆತಂಕ ಗೊಳ್ಳುವುದು ಬೇಡ ಎಂದು ಹೇಳಿದರು ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು

 

 

Share. Facebook Twitter Pinterest LinkedIn Tumblr WhatsApp Email
Previous Articleಶಾಂತಿ ಸಾಗರದಿಂದ 200 ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ
Next Article ಎಸ್ಸಿ ಎಸ್ಟಿ ಸಮುದಾಯಗಳನ್ನು‌ ಬಿಜೆಪಿ ಅಪಹರಿಸಿದೆ
D Kumaraswamy
  • Tumblr

Related Posts

ಆಹಾರ ದಾನ ಸಮಾಜ ಸೇವೆ ಸಂಕೇತ:ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

June 25, 2025

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಗೆ ಅತ್ಯುತ್ತಮ ಫಲಿತಾಂಶ : ಅಭಿನಂದಿಸಿದ ಆಡಳಿತ ವರ್ಗ

May 14, 2025

ಮಲ್ಟಿ ಕ್ಯೂಸಿನ್ ಕುಕ್ ಅಭ್ಯರ್ಥಿಗಳಿಂದ ಮರು ಅರ್ಜಿ ಆಹ್ವಾನ

March 20, 2025

ಸಕಾಲ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

March 20, 2025
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.