ಸರ್ಕಾರ ಕೋವಿಡ್ ನಿಂದ ಮೃತಪಟ್ಟ ವಕೀಲರಿಗೆ ಹಾಗೂ ಇತರೇ ವಕೀಲರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿ

ಜಿಲ್ಲಾ ಸುದ್ದಿ

ಚಿತ್ರದುರ್ಗ:: ಕರೋನಾ ಸೋಂಕಿನಿಂದ ಮೃತಪಟ್ಟವರಿಗೆ ಹಾಗೂ ಸಂಕಷ್ಟದಲ್ಲಿರುವ ಅವರ ಕುಟುಂಬಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನ್ನು ಸರ್ಕಾರ ಘೋಷಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಶ್ಲೇಷಕರಾದ ಬಿಜಿ ಬಾಲಕೃಷ್ಣಸ್ವಾಮಿ ಯಾದವ್ ಒತ್ತಾಯಿಸಿ ದ್ದಾರೆ.

Chitradurga govt should announce pkg to lwyers

ರಾಜ್ಯದಲ್ಲಿ ಸುಮಾರು 218 ವಕೀಲರು ಕೋವಿಡ್ ಗೆ ಬಲಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 6 ಜನ ವಕೀಲರು ಮೃತಪಟ್ಟಿದ್ದಾರೆ. ವಕೀಲಿಕೆ ನೆಡೆಸುವವರು ಸಾರ್ವಜನಿಕರ ಸಂಪರ್ಕದಲ್ಲಿ ಇರಬೇಕಾಗುತ್ತದೆ. ವಕೀಲರ ಬಳಿ ಸಾಕಷ್ಟು ಜನ ಕಕ್ಷಿದಾರರು ನ್ಯಾಯಕ್ಕಾಗಿ ಬರುತ್ತಾರೆ. ಇವರನ್ನು ವಕೀಲರು ಅಷ್ಟೆ ಅಲ್ಲ ಕೋರೋನಾ ವಾರಿಯರ್ ಎಂದು ಗುರುತಿಸಲಾಗಿದೆ. ಇಂತಹ ಕೆಲ ವಕೀಲರು ಕೋರೋನಾ ಸೋಂಕು ತಗುಲಿ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ನಿಂದಾಗಿ ಅನೇಕ ಯುವ ವಕೀಲರು ಕೆಲಸವೂ ಇಲ್ಲದೆ ಅರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಇಂತವರನ್ನು ವಕೀಲ ಸಂಘಗಳ ಮೂಲಕ ಗುರುತಿಸಿ ಸರ್ಕಾರ ಅರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಬಿಜಿ ಬಾಲಕೃಷ್ಣಸ್ವಾಮಿ ಯಾದವ್ ಒತ್ತಾಯಿಸಿದ್ದಾರೆ. ಹಾಗೆಯೇ ಮೃತಪಟ್ಟಿರುವ ವಕೀಲರ ಕುಟುಂಬಗಳಿಗೆ 30 ಲಕ್ಷ ರೂಪಾಯಿ ಹಣವನ್ನು ಪರಿಹಾರದ ಮೊತ್ತವಾಗಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

 

 

 

 

ಸಂಯುಕ್ತವಾಣಿ

 

Leave a Reply

Your email address will not be published. Required fields are marked *