ಕೋಟೆ ನಾಡಿನಲ್ಲಿ ನಡೀತು ವಿಶೇಷ ಮಂತ್ರ ಮಾಂಗಲ್ಯ ವಿವಾಹ
ಚಿತ್ರದುರ್ಗ,27: ಒಂದು ಮದುವೆ ನಡೆಯಬೇಕಾದರೆ, ಅದಕ್ಕೊಂದು ಮುಹೂರ್ತ ಇಡಬೇಕು. ಆ ಮೂಹೂರ್ತದಲ್ಲಿಯೇ ಮಂತ್ರ ಹೇಳಿ, ಮಂಗಳವಾದ್ಯಗಳೊಂದಿಗೆ ವರ ವಧುವಿಗೆ ಮಾಂಗಲ್ಯಧಾರಣೆ ಮಾಡಬೇಕು,ಮದುವೆಗೆ ಬಂದವರು ಅಕ್ಷತೆ ಹಾಕುವ ಮೂಲಕ ಹರಸಬೇಕು. ಆಗ ಮದುವೆಯಾಯಿತು ಎಂಬುದು ನಮ್ಮ ಸಂಪ್ರದಾಯವಾಗಿದೆ. ಆದರೆ ಇಲ್ಲೊಂದು ಮದುವೆ ಪುರೋಹಿತರಿಲ್ಲ ಅಕ್ಷತೆಯಿಲ್ಲ ಮಂಗಳವಾದ್ಯಗಳಿಲ್ಲದೆ, ನಾಡು ಕಂಡ ದಾರ್ಶನಿಕ ಕವಿ ಕುವೆಂಪು ಅವರ ಆಶಯದಂತೆ ವಿವಾಹ ಸಂಹಿತೆಯನ್ನು ಬೋಧಿಸುವ ಮೂಲಕ ವಧು ಚೇತನ್ ಎನ್ ಮತ್ತು ಭವ್ಯಶ್ರೀಎಂ. ಇವರಿಬ್ಬರು ಭಾನುವಾರ ಚಿತ್ರದುರ್ಗದ ನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ಅಂತರ್ಜಾತಿ ವಿವಾಹವಾಗುವ ಮೂಲಕ ಸತಿಪತಿಗಳಾದರು. ಇದಕ್ಕೆ ಸಾಹಿತಿ ಮತ್ತು ಸಂಶೋಧಕ ಡಾ. ವಡ್ಡಗೆರೆ ನಾಜರಾಜಯ್ಯ ಅವರು ಮಂತ್ರ ಮಾಂಗಲ್ಯ ವಿವಾಹ ಸಂಹಿತೆಯನ್ನು ಬೋಧಿಸಿದರು.ಹಿರಿಯ ಚಿಂತಕ ಫ್ರೋ, ಸಿಕೆ ಮಹೇಶ್ವರಪ್ಪ ಅವರು ಸಂವಿಧಾನ ಪ್ರಸ್ತಾವನೆಯನ್ನು ವಧು ವರ ಹಾಗೂ ವಿವಾಹಕ್ಕೆ ಬಂದಿದ್ದವರಿಗೆ ಬೋಧಿಸಿದರು.ಕವಿ ಶಿವಶಂಕರ್ ಸೀಗೇಹಟ್ಟಿ ಹಾಗು ಡಾ. ಪ್ರದೀಪ್ ಎಸ್ ವೇದಿಕೆ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಮಯದಲ್ಲಿ ಅರ್ಥವಿಲ್ಲದ ಆಚರಣೆಗಳನ್ನು ಬದಿಗೊತ್ತಿ ಮಾಡಿದ ಸಾಮಾಜಿಕ ಕ್ರಾಂತಿಯೇ ಮಂತ್ರ ಮಾಂಗಲ್ಯ ಎಂದು ಮದುವೆಯಲ್ಲಿ ನೆರೆದಿದ್ದವರಿಗೆ ತಿಳಿಸಿಕೊಡಲಾಯ್ತು. ಇದೇ ಸಮಯದಲ್ಲಿ ಬುದ್ದ ಬಸವ ಅಂಬೇಡ್ಕರ್ ಹಾಗೂ ರಾಷ್ಟ್ರಕವಿಕುವೆಂಪು ಅವರ ಭಾವಚಿತ್ರಗಳಿಗೆ ಪೂಜಿಸಿಗೌರವಿಸಲಾಯಿತು.