ಚಿತ್ರದುರ್ಗ ಜಿಲ್ಲೆಯ ಪೊಲೀಸರು ಒಟ್ಟು 68 ಪ್ರಕರಣಗಳಲ್ಲಿ ಕಳುವಾಗಿದ್ದ 1 ಕೋಟಿ 63 ಲಕ್ಷದ 81 ಸಾವಿರದ299 ರೂಪಾಯಿ ವಸ್ತುಗಳನ್ನು ವಶಪಡಿಸಿಕೊಂಡಿದ್ದ ಅವುಗಳನ್ನು ವಾರಸುದಾರರಿಗೆ ಪೊಲೀಸ್ ಕವಾಯತು ಮೈದಾನದಲ್ಲಿ ವಾಪಾಸ್ಸು ನೀಡಲಾಗಿದೆ ಎಂದು ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
2023ರಲ್ಲಿ68 ಕಳವು ಪ್ರಕರಣಗಳು ನೆಡೆದಿದ್ದು, ಅದರಲ್ಲಿ ನಗದು ಚಿನ್ನ ಬೆಳ್ಳಿ ಆಭರಣಗಳು ವಾಹನಗಳು, ಮೊಬೈಲ್ ಹಾಗೂ ಇತರೇ ವಸ್ತುಗಳು ಮತ್ತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಸಿಇಐಆರ್ ಪೋರ್ಟಲ್ ಸಹಾಯದಿಂದ 6ಲಕ್ಷದ 24 ಸಾವಿರ ಮಾಲ್ಯದ 52 ಮೊಬೈಲ್ ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದು,ಅವುಗಳನ್ನು ನ್ಯಾಯಾಲಯದ ಆದೇಶದಂತೆ ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.