ಮೂರೇ ವಾರದಲ್ಲಿ ಸಿಗಲಿದೆ ಕರೊನಾ ಲಸಿಕೆ; ತುರ್ತು ಬಳಕೆಗೆ ಕಾಯ್ದೆ ತಿದ್ದುಪಡಿ; ಭಾರತಕ್ಕೂ ಇದೆ ಅವಕಾಶ

ದೇಶ

ಲಂಡನ್​:- ಅತ್ಯುತ್ಕೃಷ್ಠ ಸುರಕ್ಷತಾ ಮಾನದಂಡ ಹಾಗೂ ಪರಿಣಾಮಕಾರಿಯಾಗಬಲ್ಲ ಕರೊನಾ ವೈರಸ್​ ನಿಗ್ರಹ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವುದಾಗಿ ಬ್ರಿಟನ್​ ಸರ್ಕಾರ ಘೋಷಿಸಿದೆ.ಇದರಿಂದಾಗಿ ಲಸಿಕೆಯು ಎಲ್ಲ ಸಾಮಾನ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಯುರೋಪಿಯನ್​ ರಾಷ್ಟ್ರಗಳ ಪರವಾನಗಿ ಪಡೆಯುವ ಮುನ್ನವೇ ಬ್ರಿಟನ್​ ಅದರ ತುರ್ತು ಬಳಕೆಗೆ ಅನುಮತಿ ನೀಡಲು ಸಾಧ್ಯವಾಗಲಿದೆ.

 

 

 

ಮಾನವ ಬಳಕೆಗೆ ಸುರಕ್ಷಿತ ಹಾಗೂ ಕೋವಿಡ್​ ವಿರುದ್ಧ ಪರಿಣಾಮಕಾರಿ ಎನಿಸಿದ ಲಸಿಕೆಗಷ್ಟೇ ವೈದ್ಯಕೀಯ ಹಾಗೂ ಆರೋಗ್ಯ ಉತ್ಪನ್ನಗಳ ನಿಯಂತ್ರಣಾ ಮಂಡಳಿ ತುರ್ತು ಪರವಾನಗಿ ನೀಡಬಹುದು ಎಂದು ಸರ್ಕಾರ ಮಾಹಿತಿ ನೀಡಿದೆ. ಇದಲ್ಲದೇ, ಲಸಿಕೆ ನೀಡಲು ಹೆಚ್ಚು ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಲಾಗುತ್ತದೆ. ಇದರಿಂದ ಎಲ್ಲ ಜನರಿಗೆ ಆದಷ್ಟೂ ಬೇಗ ಲಸಿಕೆ ನೀಡಲು ಸಾಧ್ಯವಾಗಲಿದೆ ಎಂದು ಗಾರ್ಡಿಯನ್​ನಲ್ಲಿ ಪ್ರಕಟಿಸಲಾಗಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *