Chitradurga cm yadiyurappa has to resign

ಬೇಕಾದರೆ ಯಡಿಯೂರಪ್ಪ ರಾಜೀನಾಮೆ ನೀಡಲಿ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಪಂಚಮ ಸಾಲಿ ಶಾಸಕರ ಒತ್ತಡಕ್ಕೆ ಮಣಿದು ಬೇಕಾದರೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಲಿ ಎಂದು ಕೂಡಲಸಂಗಮ ಪಂಚಮ ಸಾಲಿ ಪೀಠದ ಅಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Chitradurga cm yadiyurappa has to resign

 

 

 

ಅವರು ಐಮಂಗಲದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಮ್ಮ ಶಾಸಕರು ಯಾರೂ ರಾಜೀನಾಮೆ ನೀಡುವುದು ಬೇಡ. ದಿನ ಬೆಳಗಾದರೆ ನಿತ್ಯವೂ ಮೀಸಲಾತಿಗಾಗಿ ಪಂಚಮ ಸಾಲಿ ಶಾಸಕರು ಒತ್ತಡ ಹಾಕಲಿ. ಸಚಿವ ಬೊಮ್ಮಾಯಿ, ಮುರುಗೇಶ್ ನಿರಾಣಿ, ಸೇರಿ ಹಲವರು ಸಿಎಂಗೆ ಒತ್ತಡ ಹಾಕಿದ್ದಾರೆ. ಇದರಿಂದ ಇಂದು ಸಿಎಂ ಸಂದೇಶ ಕಳಿಸಿಕೊಟ್ಟಿದ್ದಾರೆ. ಸಂದೇಶ ಪೂರಕವೋ, ಭರವಸೆಯೋ ಸ್ಪಷ್ಟವಾಗಿ ತಿಳಿದಿಲ್ಲ. ನಮಗೆ ರಸ್ತೆಯೇ ಕ್ಯಾಬಿನೆಟ್, ರೈತರ ಮನೆಗಳೇ ವಿಧಾನ ಸೌಧ ಹೀಗಾಗಿ ನಮ್ಮ ಬಳಿ ಅವರು ಬರಬೇಕು. ಎಂದಿದ್ದಕ್ಕೆ ಸ್ವತಃ ಸರ್ಕಾರವೇ ಬರುತ್ತಿದೆ. ಇಂದು ಸಚಿವರುಗಳಾದ ಸಿಸಿ ಪಾಟೀಲ್, ಮತ್ತು ನಿರಾಣಿ ಬರುತ್ತಿದ್ದಾರೆ. ನಾವೆಲ್ಲಾ ಗಟ್ಡಿ ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ನಿರ್ಣಯಕ್ಕೆ ಪೂರಕವಾಗಿದ್ದರೆ, ನಾವು ವಿಜಯೋತ್ಸವ ಮಾಡುತ್ತೇವೆ. ಕವಲ ಭರವಸೆಯಾದರೆ ಬೆಂಗಳೂರುವರೆಗೂ ಪಾದಯಾತ್ರೆ ಮುಂದುವರೆಯುತ್ತದೆ. ಎಂದು ಮನೆ ಬಿಟ್ಟು ಬಂದಿಲ್ಲ. ಬಂದ ಮೇಲೆ ಮೀಸಲಾತಿ ಪಡೆದು ಹೋಗುತ್ತೆವೆ. ತುಮಕೂರು ತಲುಪುವ ವೇಳೆಗೆ ಗೆಜೆಟ್ ನೋಟೀಫೀಕೇಷನ್ ಬಂದರೆ ಸರಿ, ಸಿದ್ದಗಂಗಾ ಮಠದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇವೆ. ಬೆಂಗಳೂರು ಅರಮನೆಯಲ್ಲಿ ಸರ್ಕಾರಕ್ಕೆ ವಿಜಯೋತ್ಸವ ಸಲ್ಲಿಸುತ್ತೆವೆ. ನಮ್ಮ ಸಮೂದಾಯದ ಜನ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಹಾವೇರಿ, ಬಳ್ಳಾರಿ, ದಾರವಾಢದಿಂದ ಜನರು ಹರಿದು ಬರುತ್ತಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *