ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಅ.21 ಗಡುವು: ನಂತರ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

ರಾಜ್ಯ

ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಅ.21 ಗಡುವು: ನಂತರ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

ಚನ್ನಗಿರಿ. ಅ18: ಇಡೀ ಜಗತ್ತಿಗೆ ರಾಮ ಲಕ್ಷ್ಮಣರನ್ನು ಪರಿಚಯಿಸಿದ್ದು ಆದಿಕವಿ ಮಹರ್ಷಿ ವಾಲ್ಮಿಕಿ, ಎರಡು ದಶಕಗಳಿಂದ ಈ ಸರ್ಕಲ್ ನಲ್ಲಿ ವಾಲ್ಮಿಕಿ ಸರ್ಕಲ್ ಎಂದು ಬೋರ್ಡ್ ಇತ್ತು. ಆದರೆ ಈಗ ಅಧಿಕಾರಿಗಳು ಏಕಾಎಕಿ ವಾಲ್ಮೀಕಿ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ. ಈ ಸಮಯದಲ್ಲಿ ಇಡೀ ನಾಯಕ ಸಮಾಜ ಒಟ್ಟಾಗಬೇಕು ಎಂದು ರಾಮಲಿಂಗೇಶ್ವರ ಮಠದ ಶ್ರೀ ರಾಮಲಿಂಗೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಚೆನ್ನಗಿರಿಯ ಎನ್.ಎಚ್.13 ರಲ್ಲಿ ಇರುವ ವೃತ್ತದಲ್ಲಿ ವಾಲ್ಮೀಕಿ ನಾಯಕ ಸಮಾಜ ಹಾಗೂ ಸ್ವಾಭಿಮಾನಿ ನಾಯಕರ ಯುವ ವೇದಿಕೆ ನಡೆಸುತ್ತಿರುವ 7ನೇ ದಿನ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲೊ ಭಾಗವಹಿಸಿ ಅವರು ಮಾತನಾಡಿದರು.

ನಾವು ಇಡೀ ದೇಶವನ್ನು ಆಳಿದ ಮಹಾಚೇನತರ ಬಂಧುಗಳು. ಅ.21 ರ ವರೆಗೆ ಶಾಂತಿಯುತ ಹೋರಾಟ ನಡೆಯಲಿ. ನಂತರ ಅವರು ವಾಲ್ಮೀಕಿ ಪ್ರತಿಮೆ ಮಾಡದೆ ಹೋದ್ರೆ ಹೋರಾಟದ ಸ್ವರೂಪ ಬದಲಾಗುತ್ತೆ. ನಾವು ಕಾಗೆಗಳ ಹಾಗೆ ಒಟ್ಟಾಗಿ ಬದುಕಬೇಕು. ಖಂಡಿತಾ ಮತ್ತೆ ಇಲ್ಲಿಗೆ ವಾಲ್ಮೀಕಿ ಪ್ರತಿಮೆ ಬಂದೇ ಬರುತ್ತೆ‌ ಎಂದು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

ದಾರ್ಶನಿಕರು ಎಂದು ಜಾತಿಗಾಗಿ ಇದ್ದವರಲ್ಲ.‌ ವಾಲ್ಮೀಕಿ, ಅಂಬೇಡ್ಕರ್, ಬಸವಣ್ಣರ ಪ್ರತಿಮೆ ತೆರವುಗೊಳಿಸುದು ಭಾಲಿಷತನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚೆನ್ನಗಿರಿಯ ದಾವಣಗೆರೆ ರಸ್ತೆಯ ಹೊದಿಗೆರೆಯಿಂದ ವಾಲ್ಮೀಕಿ ಸರ್ಕಲ್ ವರೆಗೆ
ಬೈಕ್ ರ‌್ಯಾಲಿ ನಡೆಸಲಾಯಿತು. ಈ ವೇಳೆ ಚನ್ನಗಿರಿಯ ವಾಲ್ಮೀಕಿ ವೃತ್ತದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಅ.21ರೊಳಗೆ ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕುತ್ತದೆ ಎಂದು ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು ಎಚ್ಚರಿಕೆ ನೀಡಿದರು.

 

 

 

ವಾಲ್ಮೀಕಿ ಕೇವಲ ಒಂದು ಸಮುದಾಯದವರಲ್ಲ. ಇಡೀ ನಾಡಿಗೆ ರಾಮಾಯಣ ಮಹಾಗ್ರಂಥವನ್ನು ನೀಡಿದವರು. ಆ ಗ್ರಂಥವನ್ನು ಎಲ್ಲ ಸಮುದಾಯಗಳು ಪೂಜಿಸುತ್ತವೆ, ಆರಾಧಿಸುತ್ತವೆ. ಆದರೆ ವಾಲ್ಮೀಕಿ ಪ್ರತಿಮೆಯನ್ನು ಮಾತ್ರೋರಾತ್ರಿ ಎತ್ತಂಗಡಿ ಮಾಡಿದ್ದಾರೆ. ಇದು ಸರಿಯಲ್ಲ. ಅ.21 ರೊಳಗೆ ವಾಲ್ಮೀಕಿ ಪ್ರತಿಮೆಯನ್ನು ಇದೇ ಜಾಗದಲ್ಲಿ ತಂದು ಇಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ನೇರ ಎಚ್ಚರಿಕೆ ನೀಡಿದರು.

ರಾಮನನ್ನು ಸೃಷ್ಟಿ ಮಾಡಿದ್ದು ವಾಲ್ಮೀಕಿ. ಆದರೆ ವಾಲ್ಮೀಕಿಯನ್ನು ಇವತ್ತು ಎತ್ತಂಗಡಿ ಮಾಡಿದ್ದ ಬಗ್ಗೆ ಎಲ್ಲ ಸಮುದಾಯಗಳೂ ಧ್ವನಿ ಎತ್ತಬೇಕು. ನಾವು ವಾಲ್ಮೀಕಿ ಕುಲದಲ್ಲಿ ಹುಟ್ಟಿದವರು ನಮ್ಮ ಧ್ವನಿ ಇನ್ನೂ ಗಟ್ಟಿಯಾಗಬೇಕು. ಇಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಮರು ಸ್ಥಾಪನೆ ಮಾಡಬೇಕು. ಇಲ್ಲದಿದ್ದರೆ ಚೆನ್ನಗಿರಿಯಿಂದಲೇ ವಿಧಾನ ಸೌಧ ಚಲೋ ಶುರುವಾಗುತ್ತೆ. ಅಧಿಕಾರಿಗಳ ಲಾಲಸೆ, ಜನಪ್ರತಿನಿಧಿಗಳ ಬೇಜವಾಬ್ದಾರಿತನ ಈ ಕಿಡಿಗೇಡಿತನಕ್ಕೆ ಕಾರಣವಾಗಿ. ಒಬ್ಬ ದಾರ್ಶನಿಕನ ಪ್ರತಿಮೆಯನ್ನು ನಿರ್ಮಾಣಕ್ಕೆ 2017 ರಂದಲೂ ಮನವಿ ನೀಡುತ್ತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನಾಯಕ ಸಮುದಾಯದ ಯುವಕರು ಆದಿಕವಿ‌ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ. ವಿಶ್ವಕವಿ ವಾಲ್ಮೀಕಿಗೆ ಗೌರವ ನೀಡಿದ್ದಾರೆ. ಇದು ಆದಿಕಾರಿಗಳು, ಜ‌ನಪ್ರತಿನಿಧಿಗಳು ಮಾಡಬೇಕಾಗಿದ್ದ ಕೆಲಸ. ಆದರೆ ಅದನ್ನು ಸಮುದಾಯದ ಯುವಕರು ಮಾಡಿದ್ದಾರೆ. ಅದನ್ನು ನಾವು ಗೌರವಿಸಬೇಕಿತ್ತು. ಆದರೆ ಅದನ್ನು ಉಡಾಫೆಯಿಂದ ತೆರವುಗೊಳಿಸಿದ್ದಾರೆ. ಅ.21ರ ನಂತರ ಹೀಗೇ ಮುಂದುವರಿದರೆ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ರಮೇಶ್ ಹಿರೇಜಂಬೂರು ಹೇಳಿದರು.

ಕಾಂಗ್ರೆಸ್ ಮುಖಂಡರು, ನಾಯಕ ಸಮಾದ ಮುಖಂಡರಾದ ಹೊದಿಗೆರೆ ರಮೇಶ್ ಮಾತನಾಡಿ,
ರಾಜಕಾರಣ ಬೇರೆ ಸಮುದಾಯದ ಹಿತ ಬೇರೆ. ನಾವು ಕಾನೂನು ಕೃಗೆತ್ತಿಕೊಳ್ಳುವುದು ಬೇಡ ಎಂದು ಸುಮ್ಮನಿದ್ದೇವೆ. ನಮ್ಮ ಒಗ್ಗಟ್ಟಿನ ಬಗ್ಗೆ ಅನುಮಾನ ಬೇಡ. ಸಮುದಾಯ ಇಲ್ಲಿ ಅಷ್ಟು ಒಗ್ಗಟ್ಟಿದೆ. ಬೇರೆ ಸಮುದಾಯಗಳು ಕೂಡ ಈ ಹೋರಾಟಕ್ಕೆ ಬೆಂಬಲ ನೀಡುತ್ತಿದೆ ಎಂದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲೋಹಿತ್ ಕುಮಾರ್ ಮಾತನಾಡಿ, ಇದು ಶಾಂತಿಯುತ ಹೋರಾಟ. ವಾಲ್ಮೀಕಿ ಪ್ರತಿಮೆಯನ್ನು ವಾಪಸ್ ತಂದು ಕೂರಿಸದೆ ಹೋದ್ರೆ ಹಳ್ಳಿ ಹಳ್ಳಿಯಿಂದ ನಮ್ಮ ಸಮುದಾಯದ ಜನ ಹರಿದು ಬರ್ತಾರೆ. ತೀವ್ರ ಹೋರಾಟ ಕೈಗೆತ್ತಿಕೊಳ್ಳುವ ಮುನ್ನ ತಾಲೂಕು ಆಡಳಿತ ವಾಲ್ಮೀಕಿಯನ್ನು ವಾಪಸ್ ತಂದು ಕೂರಿಸಬೇಕು ಎಂದು ಹೇಳಿದರು.

ಸಿಪಾಯಿ ದಂಗೆ ರೀತಿ 21 ರ ನಂತರ ಹೋರಾಟ ನಡೆಯುತ್ತೆ.‌ ಆ ರೀತಿಯ ಹೋರಾಟವೇ ಈಗ ಅಗತ್ಯ ಇದೆ ಎಂದು ಸ್ವಾಭಿಮಾನಿ ಯುವ ವೇದಿಕೆಯ ಅಧ್ಯಕ್ಷರಾದ ಚೆನ್ನಗಿರಿ ನವೀನ್ ಹೇಳಿದರು.

ಪುರಸಭೆ ಸದಸ್ಯರಾದ ಲಕ್ಷ್ಮಣ್, ಹೊದಿಗೆರೆ ಅಣ್ಣಪ್ಪ, ಕರ್ನಾಟಕ ನಾಯಕರ ಒಕ್ಕೂಟದ ಸದಸ್ಯರಾದ ರಜನಿ ಎಂ.ಆರ್., ವೆಂಕಟೇಶ್, ಪುರಸಭೆ ಮಾಜಿ ಸದಸ್ಯರಾದ ಬಾಬಣ್ಣ, ಸ್ಥಳೀಯ ಮುಖಂಡರಾದ ಜಯರಾಮಣ್ಣ, ಮಂಜು, ರಂಗಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಕುಬೇರಪ್ಪ, ಜ್ಞಾನೇಶ್ ಮೌರ್ಯ ಮತ್ತಿತರು ಅತ್ಯಾಗ್ರಹದಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *