ಚಿತ್ರದುರ್ಗ ಲೋಕಸಭಾ ಟಿಕೆಟ್ ಗಾಗಿ ಹೈಕಮಾಂಡ್ ಬಾಗಿಲು ಎಡತಾಕುತ್ತಿರುವ ಆಕಾಂಕ್ಷಿಗಳು

ರಾಜ್ಯ

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಪಡೆಯಲು ಆಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದಾರೆ. ಚುನಾವಣೆಗೆ ನಾಲ್ಕು ತಿಂಗಳಿರುವಾಗಲೇ ಟಿಕೆಟ್ ಲಾಬಿ ನಡಯುತ್ತಿದೆ.
ಜಿಲ್ಲೆಯಲ್ಲಿ 24 ಜನ ಆಕಾಂಕ್ಷಿಗಳು ಇದ್ದು, ಅವರೆಲ್ಲರು ಒಂದಲ್ಲಾ ಒಂದು ರೀತಿಯಲ್ಲಿ ಟಿಕೆಟ್ ಗಾಗಲಿ ಲಾಬಿ ಮಾಡುತ್ತಿದ್ದಾರೆ. ಇದರ ನಡುವೆ ಈ ಬಾರಿ ಸ್ಥಳಿಯರಿಗೆ ಟಿಕೆಟ್ ನೀಡುವಂತೆ ಡಾ. ಬಿ.ತಿಪ್ಪೇಸ್ವಾಮಿ(ಜೆಜೆ ಹಟ್ಟಿ)ಹೈ ಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. 2014 ರಲ್ಲಿ ಬಿಎನ್ ಚಂದ್ರಪ್ಪ ಅವರು ಹೊರಗಿನಿಂದ ಬಂದು ಗೆಲುವು ಸಾಧಿಸಿದ್ದರು. ಆದರೆ 2018 ರಲ್ಲಿ ಎ.‌ನಾರಾಯಣಸ್ವಾಮಿ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಅವರೂ ಸೇರಿದಂತೆ ಹೊರಗಿನವರಿಗೆ ಟಿಕೆಟ್ ನೀಡದೆ ಸ್ಥಳಿಯರಿಗೆ ಟಿಕೆಟ್ ಕೊಡಬೇಕೆಂದು ಡಾ. ಬಿ. ತಿಪ್ಪೇಸ್ವಾಮಿ ಒತ್ತಡ ಹಾಕುತ್ತಿದ್ದಾರೆ. ಇಂದೂ ಕೂಡ ನವ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಭೇಟಿಯಾಗಿ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಿದ ಡಾ. ಬಿ. ತಿಪ್ಪೇಸ್ವಾಮಿ ತಮಗೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಓ. ಶಂಕರ್ ಲಿಡ್ಕರ್ ಮಾಜಿ ಅಧ್ಯಕ್ಷರು ,ಇವರು ಮಾದಿಗ ಎಡ ಸಮುದಾಯದ ಡಾ. ಬಿ ತಿಪ್ಪೇಸ್ವಾಮಿಗೆ ಟಿಕೆಟ್ ನೀಡಿದರೆ ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಸಾಧ್ಯತೆ ಮತ್ತು ಕ್ಷೇತ್ರದ ಎಲ್ಲಾ ಜಾತಿಯ ಸಮುದಾಯದ ಜನರು ನಾಯಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಡಾ. ಬಿ. ತಿಪ್ಪೇಸ್ವಾಮಿ ರವರ ಪರವಾಗಿ ಇದ್ದಾರೆ, ಮತ್ತು ಎಸ್. ಸಿ. ಎಡ ಸಮುದಾಯವು ಈ ಬಾರಿ ಲೋಕಸಭೆಗೆ ಡಾ. ಬಿ. ತಿಪ್ಪೇಸ್ವಾಮಿ ಎಂದು ಏಕೈಕ ಹೆಸರು ಹೇಳುತ್ತಿದ್ದಾರೆ ಎಂದು ಮಾನ್ಯ ರಣದೀಪ್ ಸಿಂಗ್ ಸುರ್ಜೆವಾಲಾ ರವರಿಗೆ ವಿವರಿಸಿದ್ದಾರೆ. ಆದರೆ ಕಾಂಗ್ರೆಸ್ ನ ಹೈ ಕಮಾಂಡ್ ಹೊರಗಿನವರಿಗೋ ಅಥವ ಸ್ಥಳಿಯರಿಗೆ ಮಣೆ ಹಾಕುತ್ತದೆಯೋ ಎಂದು ಕಾದು ನೋಡಬೇಕಿದೆ.

 

 

 

Leave a Reply

Your email address will not be published. Required fields are marked *