ಇದು ಸ್ವಾಮೀಜಿಯಾಗಿದ್ದವ ವಂಚಕನಾದ ರೋಚಕ ಸ್ಟೋರಿ..

ಕ್ರೈಂ ಜಿಲ್ಲಾ ಸುದ್ದಿ ರಾಜ್ಯ

ಚಿತ್ರದುರ್ಗ: ಆಗ ಸಂಗನ ಬಸವಶ್ರೀ ಯಾಗಿದ್ದ ರಮೇಶ ಯುವರಾಜನಾದ ಮೇಲೆ ಮಾಡಬಾರದ್ದು ಮಾಡಿ ಸಿಸಿಬಿಗೆ ತಗಲಾಕಿಕೊಂಡಿದ್ದಾನೆ.Chitradurga vanchaka yvarajana rochaka kate

 

 

 

ಕೋಟೆನಾಡು ಚಿತ್ರದುರ್ಗವನ್ನ ಮಠಗಳ ಬೀಡು ಎಂದು ಹೇಳಲಾಗುತ್ತದೆ. ಅಂತಹ ಮಠಗಳ ಬೀಡಿನ ಚಿತ್ರದುರ್ಗ ತಾಲೂಕಿನ ದೇವಪುರದಹಟ್ಟಿ ರಮೇಶ ಬಂಜಾರ ಗುರುಪೀಠಕ್ಕೆ ಮೊದಲು ಸೇವಾಲಾಲ್ ಸ್ವಾಮೀಜಿಯಾಗಿ ಧೀಕ್ಷೆಯನ್ನು ಮುರುಘಾ ಶ್ರೀಗಳಿಂದ ಪಡೆದಿರುತ್ತಾನೆ. 96/97 ರಲ್ಲಿ ಧೀಕ್ಷೆ ಪಡೆದು ಅಲ್ಲಿಂದ ಎರಡು ವರ್ಷಗಳ ಕಾಲ ಸ್ವಾಮೀಜಿಯಾಗಿ ನಂತರ ಗುರುಪೀಠವನ್ನು ತ್ಯಜಿಸಿ ಬೆಂಗಳೂರು ಸೇರುತ್ತಾನೆ. ಅಲ್ಲಿಂದ ತಾನು ರಾಷ್ಡ್ರೀಯ ಸ್ವಯಂ ಸೇವಕ ಸಂಘದ ಮೂಲದವನು ಎಂದು ಹೇಳಿಕೊಂಡು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವರ ಜೊತೆಯಲ್ಲಿ ಫೋಟೋಗಳನ್ನು ತೆಗೆಸಿಕೊಂಡು ಅವುಗಳನ್ನು ಬಂಡವಾಳ‌ಮಾಡಿಕೊಂಡು ಜನರನ್ನು ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹಾಗೂ ನಿಗಮ‌ಂಮಡಳಿಗಳ ಆಸೆಅಮಿಷ ತೋರಿಸಿ ಯಾಮಾರಿಸುತ್ತಿದ್ದ. ಹೆದಲಿಯ ಕರ್ನಾಟಕ ಭವನದಲ್ಲಿ ಎಲ್ಲರನ್ನು ಪರಿಚಯ ಮಾಡಿಕೊಂಡು ಅವರಿಂದಲೇ ರಾಜಾಥಿತ್ಯ ಅನುಭವಿಸಿದ್ದಾನೆ. ಇತ್ತೀಚಿಗೆ ಸುಧೀಂದ್ರ ರೆಡ್ಡಿ ಎನ್ನುವ ಉದ್ಯಮಿ ವಂಚನೆ ಪ್ರಕರಣ ದಾಖಲಿಸಿದ್ದು ಅದರ ಬೆನ್ನು ಹತ್ತಿರುವ ಸಿಸಿಬಿ ಅಧಿಕಾರಿಗಳು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಸಮಯದಲ್ಲಿ 26 ಲಕ್ಷ ಹಣ ಹಾಗೂ 91 ಕೋಟಿ ಮೌಲ್ಯದ ಚಕ್ ಗಳು ಪತ್ತೆಯಾಗಿವೆ. ಯುವರಾಜನನ್ನು ವಶಕ್ಕೆ ಪಡೆದು ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಮತ್ತೆ ವಶಕ್ಕೆ ಕೇಳುವ ಮಾಹಿತಿ ಸಿಕ್ಮಿದೆ. ಸಂಗನಬಸವಶ್ರೀಯಾಗಿದ್ದ ರಮೇಶ ಯುವರಾಜನಾಗಿ ವಂಚನೆ ಮಾಡಿರುವುದು ಇದೀಗ ಬಟಾ ಬಯಲಾಗಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *