ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ

ರಾಜ್ಯ

ಚಿತ್ರದುರ್ಗ ಲೋಕಸಭಾ ಚುನಾವಣೆಯ ಮತದಾನ ಆರಂಭವಾಗಿದ್ದು, ಬೆಳಗಿನಿಂದ ಬಿರುಸಿನ ಮತದಾನವನ್ನು ಮತದಾರರು ಮಾಡುತ್ತಿದ್ದಾರೆ. ಬೇಸಿಗೆಯ ಬಿಸಿಲಿಗೆ ಬೆಚ್ಚಿ ಬಿದ್ದಿರುವ ಜನರು, ಬೆಳ್ಳಂಬೆಳಗ್ಗೆ ಮತದಾನ ಮಾಡುತ್ತಿದ್ದಾರೆ. ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಗು ಮಠಾಧೀಶರುಗಳು  ಕೂಡ ಮತದಾನದಲ್ಲಿ ಭಾಗವಹಿಸಿದ್ದಾರೆ. ಚಿತ್ರದುರ್ಗದ ಎಪಿಎಂಸಿ ಭವನದಲ್ಲಿ ಮಾಜಿ‌ ಶಾಸಕ ಜಿ ಹೆಚ್  ತಿಪ್ಪಾರೆಡ್ಡಿ ಕುಟುಂಬ ಸಮೇತ   ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಇತ್ತ ಮಠದಕುರುಬರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಮಠಾಧೀಶರುಗಳು ಮತ ಚಲಾಯಿಸಿದರು. ಇನ್ನೊಂದೆಡೆ ಪಟ್ಟದ ಪರಮೇಶ್ವರಿ ಶಾಲೆಯಲ್ಲಿ ಹೊಳಲ್ಜೆರೆ ಶಾಸಕ ಎಂ.‌ಚಂದ್ರಪ್ಪ, ಬರಗೇರಿ ಸರ್ಕಾರಿ ಶಾಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಮತ ಚಲಾಯಿಸಿದರು.ಚಳ್ಳಕೆರೆಯಲ್ಲಿ ರಘುಮೂರ್ತಿಕೂಡ ಕುಟುಂಬ ಸಮೇತ ಹಕ್ಕನ್ನು ಚಲಾಯಿಸಿದರೆ, ಹಿರಿಯೂರಿನಲ್ಲಿ ಉಸ್ತುವಾರಿ ಸಚಿವ ಡಿ. ಸುಧಾಕರ್ ಮತದಾನ ಮಾಡಿದರು.ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಹಾಗೂ ಕುಟುಂಬದವರು ಮೆದೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಮತಚಲಾಯಿಸಿದರು.ಇನ್ನೊಂದು‌ ಕಡೆಗೆ ‌ಅಪರ‌ ಜಿಲ್ಲಾಧಿಕಾರಿ ಬಿ ಟಿ‌ ಕುಮಾರಸ್ವಾಮಿ ಕುಟುಂಬ ಸಮೇತ ಮತ ಚಲಾಯಿಸಿದರು. 9 ಗಂಟೆವೆರೆಗೆ ಜಿಲ್ಲೆಯಲ್ಲಿ 7.33% ರಷ್ಟು ಮತದಾನವಾಗಿದೆ.

 

 

 

Leave a Reply

Your email address will not be published. Required fields are marked *