ಇವಿಎಂ ಮಿಷನ್ ಹೊತ್ತೊಯ್ಯುತ್ತಿದ್ದ ಬಸ್ ತಡೆದ ಪ್ರತಿಭಟನೆ ನಡೆಸಿದ ಯರೆಹಳ್ಳಿ ಗ್ರಾಮಸ್ಥರು

ರಾಜ್ಯ

ಚಿತ್ರದುರ್ಗ ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿ ಇವಿಎಂ ಮಿಷತ್ ತೆಗೆದುಕೊಂಡು ಹೋಗುತ್ತಿದ್ದ ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಚಿತ್ರದುರ್ಗದ ಯರೇಹಳ್ಳಿಯಲ್ಲಿ ನಡೆದಿದೆ.

 

 

 

ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ನಾಳೆ ನಡೆಯಲಿರುವ ಮತದಾನಕ್ಕೆ ಇವಿಎಂ ಮಿಷತ್ ಗಳನ್ನು ತೆಗೆದುಕೊಂಡು, ಯರೇಹಳ್ಳಿ ಗ್ರಾಮಕ್ಕೆ ಪ್ರವೇಶ ಮಾಡುತ್ತಿದ್ದಂತೆ ಇಡೀ ಗ್ರಾಮದ ಜನತೆ ಒಂದಾಗಿ ಬಸ್ ಪ್ರವೇಶಿಸದೆ ತಡೆದು ಬಸ್ ಮುಂದೆ ಕುಳಿತು ಪ್ರತಿಭಟ‌ನೆ ‌ನೆಡೆಸಿದ್ದಾರೆ. ಇದನ್ನು ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿದ್ದಾಗ ಪೊಲೀಸರು, ಮತ್ತು ಗ್ರಾಮಸ್ಥರ ನಡುವೆ ಮಾತಿನ‌ಚಕಮಕಿ, ವಾಗ್ವಾದ ನಡೆದಿದೆ. ನಮ್ಮ ಗ್ರಾಮದಲ್ಲಿ ಕರೆಂಟ್ ಇಲ್ಲ, ನೆಟ್ವರ್ಕ್ ಇಲ್ಲ, ಹಾಗೂ ಬಾ್ ಸೌಲಭ್ಯವಿಲ್ಲ , ಮತ್ಯಾಕೆ ಚುನಾವಣೆ ನಡೆಯಬೇಕು.‌ಇದು ಬೇಡ ಎಂದು ಗ್ರಾಮಸ್ಥರು ತಡೆದಿದ್ದಾರೆ. ಇದರಿಂದ ಪೊಲೀಸರು ಅವರ ಮನವೊಲಿಸಲು ಹರಸಾಹಸ ಪಡೆಬೇಕಾಯಿತು.

Leave a Reply

Your email address will not be published. Required fields are marked *