ಮೋದಿ ಸುಳ್ಳಿನ ಸರಮಾಲೆಯನ್ನೆ ಪೋಣಿಸಿದ್ದಾರೆ: ಪ್ರಿಯಾಂಕ ಗಾಂಧಿ

ದೇಶ

ಪ್ರಚಾರದ ಬಹಿರಂಗ ಸಭೆ ಉದ್ಘಾಟಿಸಿ, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ‌ ಭಾಷಣ ಆರಂಭಿಸಿದ, ಪ್ರಿಯಾಂಕಗಾಂಧಿ, ದೇಶದ ನಿರ್ಮಾಣದಲ್ಲಿ‌ ಮಹಿಳೆಯರ ಕೊಡುಗೆ ಅಪಾರ. ದೇಶದ ಬಗ್ಗೆ ಭವಿಷ್ಯದ ಚಿಂತನೆ ಇದೆ. ದೇಶದಲ್ಲಿ ಎರಡು ಸತ್ಯಗಳಿವೆ. ಬಡತನ, ನಿರುದ್ಯೋಗದ ಸಮಸ್ಯೆವಿದೆ. ಇನ್ನೊಂದು ಪ್ರಧಾನಿಗಳ ವೈಭೋಗದ ಬಗ್ಗೆ ನೋಡುತ್ತಿರಾ, 45 ವರ್ಷಗಳಿಂದ ಇಲ್ಲದ ನಿರುದ್ಯೋಗ ಸಮಸ್ಯೆ ಇಂದು ಇದೆ. ಕೇಂದ್ರದಲ್ಲಿ‌ 30ಲಕ್ಷ ಉದ್ಯೋಗಗಳು ಖಾಲಿ ಇವೆ. ಎರಡು ಕೋಟಿ‌ ಕೆಲಸ ಕೊಡುತ್ತೇವೆ ಎಂದು ಮೋದಿ ಹೇಳಿದ್ದರು, ಆದರೆ ಕೊಡಲಿಲ್ಲ. ಬೆಲೆ ಏರಿಕೆಯಿಂದಾಗಿ ಜನರು ಬೇಸತ್ತಿದ್ದಾರೆ.ರೈತರಿಗೆ ಕನಿಷ್ಠ ಬೆಂಬಲ‌ ಸಿಗುತ್ತಿಲ್ಲ. ಮೋದಿ‌ಯವರು, ದೇಶದ ಸಂಪತ್ತನ್ನು, ಶ್ರೀಮಂತರಿಗೆ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಬಡವರ ಸಾಲ ಮನ್ನಾ ಮಾತ್ರ ಆಗುತ್ತಿಲ್ಲ.
ವಿರೋಧ ಪಕ್ಷದವರು, ಪ್ರತಿಭಟಿಸಿದರೆ, ಅವರ ಬಾಯಿ‌ ಮುಚ್ಚಿಸುತ್ತಿದ್ದಾರೆ. ಇಬ್ಬರು ಸಿಎಂ ಗಳನ್ನು ಜೈಲಿಗೆ ಕಳುಹಿಸಿದ್ದಾರೆ. ಪ್ರತಿಭಟಿಸುವವರ ಧ್ವನಿ ಅಡಗಿಸುತ್ತಿದ್ದಾರೆ. ಪ್ರಧಾನಿಗೆ ಎಲೆಕ್ಟ್ರೋಲ್ ಬಾಂಡ್, ಖರೀದಿಯಲ್ಲಿ ಯಾರು ಎಷ್ಟು ಹಣ ಕೊಟ್ಟಿದ್ದಾರೆಂದು ಬಹಿರಂಗ ಪಡಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ..‌ ಇದರಿಂದ ಮೋದಿ ಅವರು ಯಾರ್ಯಾರ ಹತ್ತಿರ ಚಂದಾ ವಸೂಲಿ‌ ಮಾಡಿದ್ದಾರೆ ಎಂದು ಬಹಿರಂಗವಾಗಿದೆ. ಕಂಪನಿಗಳಿಂದ ದುಡ್ಡು ತೆಗೆದುಕೊಂಡು, ಅವರ ಮೇಲಿನ ಕೇಸ್ ಮುಚ್ಚಿ ಹಾಕಿದೆ.ಭ್ರಷ್ಟ ಕಂಪನಿಗಳು ಮೋದಿಗೆ ಹಣ ಕೊಟ್ಟಿವೆ. ನೋಟು‌ ಅಮಾನ್ಯೀಕರಣ ಮಾಡಿದ್ದ ಸಮಯದಲ್ಲಿ ಕಪ್ಪು ಹಣವನ್ನು ವೈಟ್ ಮಾಡಿಕೊಂಡಿದೆ. ಭ್ರಷ್ಟಚಾರ ಮುಚ್ಚಿಹಾಕಲು ವಿರೋಧ ಪಕ್ಷದ ನಾಯಕರನ್ನು ಭ್ರಷ್ಟಾಚಾರಿಗಳು ಎಂದು‌ ಕರೆಯುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಧರ್ಮದ ಬಗ್ಗೆ ಮಾತಾಡಿ,ಜನರ ಗಮನ ಬೇರೆ ಕಡೆಗೆ ತಿರುಗಿಸ್ತಾರೆ. ಈ ಬಾರಿ 400 ಸ್ಥಾನಗಳನ್ನು ಕೊಡಿ‌ ಎಂದು‌ ಕೇಳುತ್ತಿದ್ದಾರೆ. ಸಂವಿಧಾನ ಬದಲು‌ ಮಾಡುವ ಮಾತು ಆಡುತ್ತಿದ್ದಾರೆ. ನಿಮ್ಮ ಕಷ್ಟಗಳು ತಿಳಿಯುತ್ತಿಲ್ಲ. ಅಂದು ರಾಜಕೀಯದಲ್ಲಿ‌ ನೈತಿಕತೆಯುಳ್ಳ‌ ಜನರನ್ನು ಆಯ್ಕೆ ಮಾಡುತ್ತಿದ್ದರು.‌ ಆದರೆ ಇಂದು‌ ದೇಶದ ಉನ್ನತ ವ್ಯಕ್ತಿ ನಾಟಕವಾಡುತ್ತಿದ್ದಾರೆ. ದೇಶದ ರಾಜಕೀಯ ನಾಯಕರು‌ ಸತ್ಯದ ದಾರಿಯಲ್ಲಿ‌ ನಡೆಯದೆ, ಐಷಾರಾಮಿ ಆಹಂಕಾರದ ಜೀವನ ನಡೆಸುತ್ತಿದ್ದಾರೆ. ಹಿಂದೂ, ಹಾಗೂ ರಾಜಕೀಯ ಪರಂಪರೆಯಲ್ಲಿ‌ ಸತ್ಯದ ಭಾವನೆಯಲ್ಲಿ‌ ನಡೆಯಬೇಕು ಎಂದು‌ ಹೇಳುತ್ತೇವೆ. ಅದರೆ ಇಂದು ನಾಯಕನಾದವರು ನೈತಿಕತೆ ಬಿಟ್ಟು ನಡೆಯುತ್ತಿದ್ದಾರೆ. ಮೋದಿ‌ ಅವರ ಹತ್ತು ವರ್ಷದ ಆಡಳಿತದಲ್ಲಿ ಸುಳ್ಳಿನ ಸರಮಾಲೆಯನ್ನೆ ಪೂಣಿಸಿದ್ದಾರೆ.‌ ಸರ್ಕಾರ ಬೀಳಿಸೋದು ಮೋದಿಯವರ ಮಾಸ್ಟರ್ ಸ್ಟ್ರೋಕ್ ಎನ್ನುತ್ತೆ ಮಾಧ್ಯಮಗಳು ಎಂದು‌ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರವ‌ನ್ನು‌ ಅನೈತಿಕತೆಯಿಂದ ಬೀಳಿಸಿದ್ದಾರೆ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ. ಚುನಾವಣೆ ಸಮಯದಲ್ಲಿ ಧರ್ಮ ಜಾತಿ ಬಗ್ಗೆ ಮಾತಾಡಿ, ಗಮನ ಸೆಳೆಯುತ್ತಾರೆ. ವಿಶ್ವ ನಾಯಕ ಮೋದಿ ಎಂದು ಹೇಳುತ್ತಾರೆ. ಮೋದಿ ಚಿಟಿಕೆ ಹೊಡೆದರೆ ವಿದೇಶಗಳು ಯುದ್ದವನ್ನೆ ನಿಲ್ಲಿಸುತ್ತವೆ ಎನ್ನುತ್ತಾರೆ‌. ಮೋದಿ ಬಲಿಷ್ಠ ನಾಯಕರಾಗಿದ್ದರೆ, ರೈತರ ಬಡವರ ನಿರುದ್ಯೋಗಿಗಳ ಕಷ್ಟ ನಿವಾರಿಸಲು ಯಾಕೆ ಆಗುತ್ತಿಲ್ಲ. ಇಬ್ಬರು ಬಂಡವಾಳ ಶಾಹಿಗಳು, ಮೋದಿ ಸ್ನೇಹಿತರ ಆಸ್ತಿ ಹೆಚ್ಚಾಗಿದೆ. ದೇಶದ ಗೌರವ ಹೆಚ್ಚಿದೆ ಎಂದು ಹೇಳುತ್ತಿದ್ದಾರೆ, ಆದರೆ 10 ವರ್ಷಗಳಲ್ಲಿ ನಿಮಗೇ‌ನು ಒಳ್ಳೆಯದಾಗಿದೆ. ಅವರು ಹೇಳುವ ರೀತಿ ಯಾವ ಕೆಲಸ ಆಗಿದೆ. ಕೆಲಸ ಆಗಿದ್ದರೆ ಅವರು ಧರ್ಮದ ಮೇಲೆ ಜಾತಿ ಮೇಲೆ ಯಾಕೆ ಮತ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಸಹಾಯವನ್ನು ಕೇಳಿದರೆ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ರಾಯಚೂರಿನಲ್ಲಿ ಏಮ್ಸ್ ಕಟ್ಟಿಸಿಲ್ಲ.‌ಕಳಸಾ ಬಂಡೂರಿ‌ ನಾಲೆಯಾಗಿಲ್ಲ.ಅಪ್ಪರ್ ಭದ್ರಾ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ತೆರಿಗೆ ಹಣದಲ್ಲಿ 62 ಸಾವಿರ ಕೋಟಿ ನಷ್ಟ ಮಾಡಿದ್ದಾರೆ. ರಾತ್ರಿ ಹಗಲು ಅಭಿವೃದ್ದಿ ಬಗ್ಗೆ ಕೆಲಸ ಮಾಡುತ್ತಿದ್ದರೆ, ಈ ತಾರತಮ್ಯ ಯಾಕೆ ಮಾಡುತ್ತಿದ್ದಾರೆ. ಎಲ್ಲಿ‌ ಅವರ ಸರ್ಕಾರವಿದೆ ಅಲ್ಲಿ‌ ಮಾತ್ರ ಕೆಲಸ ನಡೆಯುತ್ತಿದೆ. ಅಲ್ಲಿ ಹಣ ಬಿಡುಗಡೆ ಮಾಡುತ್ತಿದೆ. ಆದರೆ ನಮ್ಮ ರಾಜ್ಯಕ್ಕೆ‌ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ‌ ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಿದ್ದೀರಾ ನಿಮ್ಮ ಜೀವನ ಬದಲಾಗಿಲ್ವ? ಗೃಹ ಲಕ್ಷ್ಮಿ ಯೋಜನೆಯಿಂದ ಒಂದು ಕೋಟಿ ಜನರಿಗೆ ಸೌಲಭ್ಯ ಸಿಕ್ಕಿದೆ. ಭಾಗ್ಯಗಳಿಂದ ನಿಮಗೆ ಲಾಭವಾಗುತ್ತಿದೆಯೋ‌ ಇಲ್ವೋ? ಇದು ಕೇವಲ ಆರಂಭ, ಇಡೀ ದೇಶಕ್ಕೆ ಕಾಂಗ್ರೆಸ್ ಪಕ್ಷ ನ್ಯಾಯ ಪತ್ರವನ್ನು ಸಿದ್ದ ಮಾಡಿದೆ. ಕೇಂದ್ರದಲ್ಲಿ‌ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡತನ ರೇಖೆ ಕೆಳಗಿನವರಿಗೆ ಒಂದು‌ ಲಕ್ಷ ಕೊಡುತ್ತೇವೆ. ಎಲ್ಲಾ ಕಾರ್ಯಕರ್ತೆಯರಿಗು ಸಹಾಯಧನ ಹೆಚ್ಚಾಗುತ್ತದೆ. 25 ಲಕ್ಷದಷ್ಟು ಆರೋಗ್ಯ ‌ವಿಮೆ ಸಿಗುತ್ತದೆ. ಹತ್ತು ವರ್ಷದ ಆಡಳಿತದಲ್ಲಿ 30 ಲಕ್ಷ ಉದ್ಯೋಗ ಖಾಲಿ ಇದೆ. ಅವುಗಳನ್ನು ನಾವು ಅಧಿಕಾರಕ್ಕೆ ಬಂದರೆ ತುಂಬುತ್ತೇವೆ. ಐದು ಸಾವಿರ ಕೋಟಿ ಅನುದಾನವನ್ನು ಸ್ಟಾರ್ಟ್ ಆಪ್ ಗಾಗಿ ತೆಗೆದಿಡುತ್ತೇವೆ. ಇದರಿಂದ ಸ್ವ ಉದ್ಯೋಗ ಮಾಡಬಹುದು. ಹಿಂದಿನಂತೆ ಭಾರತೀಯ ಸೇನೆಯಲ್ಲಿ ನೇಮಕಾತಿ‌ ಮಾಡುತ್ತೇವೆ.ಗ್ರಾಮೀಣ ಭಾಗದಲ್ಲಿರುವಂತೆ ನಗರ ಭಾಗದಲ್ಲೂ ಮನ್ರೇಗಾ ಯೋಜನೆ ಜಾರಿಗೆ ತರುತ್ತೇವೆ. ಜಾತಿ ಜನಗಣತಿ ಪ್ರಕಾರ ಎಸ್ಟಿ ಎಸ್ಸಿಗೆ ಪ್ರತ್ಯೇಕ ಬಜೆಟ್ ಮಾಡುತ್ತೇವೆ.‌ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುತ್ತೇವೆ. ಜಿಎಸ್ಟಿ ರದ್ದು ಮಾಡುತ್ತೇವೆ. ಇಂದು‌ ದೇಶದಲ್ಲಿ‌ ನಡೆಯುತ್ತಿರುವ ಘಟನೆಗಳು ಸರಿಯಿಲ್ಲ. ಜನರ ಗಮನ ಬೇರೆಡೆಗೆ ಸೆಳೆದು ನಿಮ್ಮ ಮತಗಳನ್ನು ಬಿಜೆಪಿ ಸೆಳೆಯುತ್ತಿದೆ.‌ಇದು ಸರಿಯಲ್ಲ. ದೇಶವನ್ನು ಹಾಗೂ ಸಂವಿಧಾನ ರಕ್ಷಣೆ ಮಾಡಲು, ಸರಿಯಾದ ನಿರ್ಧಾರ ತೆಗೆದುಕೊಳ್ಳಿ, ಯಾರ ಮಾತು ಕೇಳಬೇಡಿ ಮತದಾನ ಮಾಡುವ ಮುನ್ನ ಯೋಚಿಸಿ ಮತದಾನ ಮಾಡಿ ಎಂದರು.ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು‌ ಮನವಿ‌ ಮಾಡಿದರು. ಇದೇ ಸಮಯದಲ್ಲಿ‌ ಮಾತಾಡಿದ, ಸಿಎಂ ಸಿದ್ದರಾಮಯ್ಯ,
ಇದೇ ತಿಂಗಳ 26 ರಂದು‌ ಲೋಕ‌ಸಭಾ ಚುನಾವಣೆ ನಡೆಯುತ್ತದೆ.‌ಎಲ್ಲರೂ ಕೂಡ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು ಎಂದು‌ ಮನವಿ ಮಾಡಿದರು. ಕೇಂದ್ರದಲ್ಲಿ ಕಳೆದ 10 ವರ್ಷ ಬಿಜೆಪಿ ಅಧಿಕಾರದಲ್ಲಿದೆ.‌‌ ಮೋದಿ ಪ್ರಧಾನಿಯಾಗಿದ್ದಾರೆ.10 ವರ್ಷಗಳಲ್ಲಿ ದಲಿತರು, ಬಡವರು ಮಹಿಳೆಯರ ಪರವಾಗಿ ಯಾವುದೇ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಅದು‌ ನಿಮಗೆ ಗೊತ್ತಿದೆ.ದೇಶದ ಜನತೆಗೆ ಭರವಸೆ ನೀಡಿ, ಭ್ರಮೆಯನ್ನು ಹುಟ್ಟಿಸಿದ್ದು, ಯಾವುದೇ ಭರವಸೆ ಈಡೇರಿಸಿಲ್ಲ, ಎನ್ನುವುದು ತಿಳಿದಿದೆ. ಕೊಟ್ಟ ಮಾತುಗಳನ್ನು ಹತ್ತು ವರ್ಷಗಳಾದರೂ ಈಡೇರಿಲ್ಲ.‌ಅವರಿಗೆ ಕರ್ನಾಟಕ ನೆನೆಪಿಗೆ ಬರುವುದು ಚುನಾವಣೆ ಸಮಯದಲ್ಲಿ‌ ಮಾತ್ರ, 2019 ರಲ್ಲಿ ಹಾಗೂ 23 – 24 ರಲ್ಲಿ ಬರ ಬಂದಿದೆ.‌ ಭೀಕರ ಪ್ರವಾಹ ಬಂದಾಗಲೂ ಜನರ ಕಷ್ಟ ಕೇಳಲಿಲ್ಲ.‌ಈಗ ಚುನಾವಣೆ ಬಂದಿದ್ದರಿಂದ ಮತ ಕೇಳಲು‌ ಬಂದಿದ್ದಾರೆ. ನರೇಂದ್ರ ಮೋದಿ‌ ಅವರ ಅಲೆ ರಾಜ್ಯದಲ್ಲಿ‌ ಎಲ್ಲೂ ಇಲ್ಲ. ಮೋದಿಯವರು ಹೇಳಿದ ಸುಳ್ಳು ಜನರಿಗೆ ಅರ್ಥವಾಗಿದೆ. ಇಡೀ‌ ದೇಶ ರಾಜ್ಯದಲ್ಲಿ ನರೇಂದ್ರ ಮೋದಿ‌ ಅಲೆ ಇಲ್ಲ.‌ಇಲ್ಲಿ ಇರುವುದು ಗ್ಯಾರಂಟಿಗಳ ಅಲೆ. 2013 ರಿಂದ 2014 ರಲ್ಲಿ 165 ಭರವಸೆಗಳನ್ನು ಕೊಟ್ಟಿದ್ದು, 158 ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಆದರೆ ಬಿಜೆಪಿ 600 ಭರವಸೆಗಳನ್ನು ಕೊಟ್ಟಿದ್ದು, 60 ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗಳನ್ನು ಹಾಕುತ್ತೇವೆ ಎಂದಿದ್ದರು.‌ ಆದರೆ ಹತ್ತು ಪೈಸೆಯೂ ಖಾತೆಗೆ‌ ಜಮಾ‌ ಆಗಿಲ್ಲ, ಎರಡು ಕೋಟಿ‌ ಉದ್ಯೋಗ್ಯ ಸೃಷ್ಠಿ‌ ಮಾಡಿ‌ ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದರು. ಕನಿಷ್ಠ 20ಲಕ್ಷ ಉದ್ಯೋಗ ಕೊಡಲಿಲ್ಲ. ರೈತರ ಆಧಾಯ ದುಪ್ಪಟ್ಟು ಮಾಡುತ್ತೇನೆ ಎಂದು‌ ಹೇಳಿದ್ದು, 10 ವರ್ಷಗಳಲ್ಲಿ ಹತ್ತು ಪೈಸೆಯನ್ನು ದುಪ್ಪಟ್ಟು ಮಾಡಲಿಲ್ಲ.‌ ರೈತರ ಸಾಲ ಮನ್ನಾ ಮಾಡಿ, ಸ್ವಾಮೀನಾಥನ್ ವರದಿ‌ ಜಾರಿ‌ ಮಾಡಿ‌ ಎಂದು ಒತ್ತಾಯ ಮಾಡಿದರೂ, ಕೂಡ ಅವರ ಬೇಡಿಕೆ‌ ಈಡೇರಿಸಲಿಲ್ಲ. 72 ಸಾವಿರ ಕೋಟಿ‌ ಸಾಲವನ್ನು ಮನಮೋಹನ್ ಸಿಂಗ್ ಮಾಡಿದ್ದರು. 8165 ಕೋಟಿ ಸಾಲವ‌ನ್ನು ನಾನು‌ ಸಿಎಂ‌ ಆಗಿದ್ದಾಗ ಮಾಡಿದ್ದೇ, 16 ಲಕ್ಷ ಕೋಟಿ‌ ರೂಪಾಯಿಗಳನ್ನು ಬಂಡವಾಳ‌ ಶಾಹಿಗಳ ಸಾಲ ಮನ್ನಾ ಮಾಡಿದರು. ಮೋದಿ ಬಂಡವಾಳ‌ ಶಾಹಿಗಳ ಪರ‌ ಇದ್ದಾರೆ. ಜನಸಾಮನ್ಯರು ಬಡವರು ಕೊಡುವ ತೆರಿಗೆ ಹೆಚ್ಚಾಗಿದೆ. ಆದರೆ ಬಂಡವಾಳ ಶಾಹಿಗಳು, ಕೈಗಾರಿಕೋದ್ಯಮಿಗಳ ಕೊಡುವ ತೆರಿಗೆ ಕಡಿಮೆ ಯಾಗಿದೆ. ಮೋದಿ ಒಳ್ಳೆ‌ ದಿನಗಳು ಬರುತ್ತದೆ ಎಂದು ಹೇಳಿದ್ದರು.ನರೇಂದ್ರ ಮೋದಿಜಿ, ಇವತ್ತಿನವರೆಗೂ ಅಚ್ಛೇ ದಿನ ಬರಲೆ ಇಲ್ಲ.‌ನೀವು ಕೊಟ್ಟ ಭರವಸೆಗಳು ವಿಫಲವಾಗಿವೆ. ರೈತರ, ಬಡವರ, ನಿರುದ್ಯೋಗಿಗಳ ಬಗ್ಗೆ ಮಾತನಾಡಿಲಿಲ್ಲ.‌ ಕರ್ನಾಟಕದ ಜನತೆಗೆ ಅವರು‌ ಕೊಟ್ಟ ಕೊಡುಗೆ ಖಾಲಿ‌ಚೊಂಬು, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಪವಿತ್ರ ಮೈತ್ರಿಯಾಗಿದೆ.‌ದೇವೇಗೌಡರು, ಮತ್ತೆ ಮೋದಿ‌ ಪ್ರಧಾನಿಯಾದರೆ ದೇಶ ಬಿಟ್ಟು‌ ಹೋಗುತ್ತೇನೆ. ಇನ್ನು‌ ಮುಂದೆ ಹೋಗಿ ನಾನು‌ ಮುಂದಿನ‌ ಜನ್ಮದಲ್ಲಿ ಮುಸ್ಲಿಂ ಅಗಿ‌ ಹುಟ್ಟುತ್ತೇನೆ ಎಂದಿದ್ದರು. ‌ಮೋದಿ‌ ಹಾಗೂ ದೇವೇಗೌಡರು ಪೈಪೋಟಿಗೆ ಬಿದ್ದು ಸುಳ್ಳು‌ ಹೇಳುತ್ತಿದ್ದಾರೆ. ರಾಜ್ಯದ ಜನತೆಯ ದಾರಿ‌ ತಪ್ಪಿಸುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ನಮ್ಮ ಸಮ್ಮ‌ಸ್ಯೆ ಬಗೆಹರಿಸಲು‌ ಸಾಧ್ಯವಾಗಲಿಲ್ಲ. ನಾವು ಐದು‌ ಗ್ಯಾರಂಟಿಗಳನ್ನು‌ ಅಧಿಕಾರಕ್ಕೆ ಬಂದ ಎಂಟು‌ ತಿಂಗಳಲ್ಲಿ‌ ಜಾರಿ‌ ಮಾಡಿದ್ದೇವೆ. ಕರ್ನಾಟಕ‌ ಅರ್ಥಿಕ‌ ದಿವಾಳಿಯಾಗಲಿಲ್ಲ. ಇಲ್ಲಿನ‌ ಬಿಜೆಪಿ‌ ಹೇಳುತ್ತಿದೆ ಲೋಕಸಭಾ ಚುನಾವಣೆ‌ ನಂತರ ಗ್ಯಾರಂಟಿಗಳನ್ನು‌ ನಿಲ್ಲಿಸುತ್ತಾರೆಂದು, ಆದರೆ ನಾವು ಬಿಜೆಪಿಯಲ್ಲ. ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಕೇಂದ್ರದವರು, 25 ಗ್ಯಾರಂಟಿಗಳ ನ್ಯಾಯ ಪತ್ರ ಬಿಡುಗಡೆ ಮಾಡಿದ್ದಾರೆ.
ಬಡ ಕುಟುಂಬದ ಮಹಿಳೆಗೆ 1 ಲಕ್ಷ ರಾಜ್ಯದ ನಾವು 24 ಲಕ್ಷ ಕೇಂದ್ರದ 1 ಲಕ್ಷ, ಒಟ್ಟು 1.24 ಲಕ್ಷ ಒಂದು‌ ಕುಟುಂಬಕ್ಕೆ ಬರುತ್ತದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ, ಎಂದಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ, ಕೇಂದ್ರದ 27 ಸಂಸದರು ರಾಜ್ಯದ ಅನ್ಯಾಯದ ಬಗ್ಗೆ ಮಾತಾಡಿಲ್ಲ.
ಗೋವಿಂದ ಕಾರಜೋಳ‌ ಅವರನ್ನು ಯಾಕೆ ಗೆಲ್ಲಿಸುತ್ತಿರಾ? ನೀವು ಬಿಜೆಪಿಗೆ ಮತ ಹಾಕಲು ಗೋಬ್ಯಾಕ್ ಕಾರಜೋಳ ಎಂದು‌ ಹೇಳಬೇಕು. ಅಪ್ಪರ್ ಭದ್ರಾ ಯೋಜನೆಗೆ 5300 ಕೋಟಿ‌ ಘೋಷಣೆ ಮಾಡಿದ್ದರು.‌ಆದರೆ ಒಂದು‌ ರೂಪಾಯಿ‌ ಕೊಡಲಿಲ್ಲ. ಆದರೆ ಅವರು ಹಣ ಕೊಡದೆ ಹೋದರೂ ನಾವು ಹಣ ಹಾಕಿ‌ ಯೋಜನೆ ಮುಗಿಸಿ ರೈತರಿಗೆ ನೀರು ಕೊಡುತ್ತೇವೆ. ಬರಗಾರಲದ ಪರಿಹಾರ ನೀಡಲಿಲ್ಲ‌ ಎಂದು ಕೋರ್ಟ್ ಗೆ ಹೋಗಿದ್ದು, ಇದೀಗ ಕೇಂದ್ರಕ್ಕೆ ಕೋರ್ಟ್ ಒಂದು ವಾರದಲ್ಲಿ ಬಗೆಹರಿಸುವಂತೆ ಸೂಚನೆ ನೀಡಿದೆ. ಜಿಲ್ಲೆಯ ಗೊಲ್ಲ‌ ಸಮುದಾಯವ‌ನ್ನು ಎಸ್ಟಿಗೆ ಸೇರಿಸಿ ಎಂದು ಪ್ರಸ್ತಾವನೆ ನೀಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೊಲ್ಲರನ್ನು ಎಸ್ಟಿ ಗೆ ಸೇರಿಸುತ್ತೇವೆ ಎಂದರು.‌ ಸಭೆಯಲ್ಲಿ‌ ಕಾಂಗ್ರೆಸ್ ನಾಯಕಿ ಪ್ರಿಯಾಂಕ‌ ಗಾಂಧಿ ಸಿಎಂ ಸಿದ್ದರಾಮಯ್ಯ,ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ‌ ಸಚಿವ, ಸಲೀಂ‌ ಅಹಮದ್,.ಮಾಜಿ ಸಚಿವರಾದ ಜಯಚಂದ್ರ, ಹೆಚ್. ಆಂಜನೇಯ ಜಿಲ್ಲಾಧ್ಯಕ್ಷ ತಾಜ್ ಪೀರ್ ಇನ್ನಿತರರಿದ್ದರು.

 

 

 

Leave a Reply

Your email address will not be published. Required fields are marked *