ದಲಿತರು ಹಿಂದುಗಳ ರಕ್ಷಣೆ ಮಾಡಲು ಆಗಿದಿದ್ದರೆ ಸರ್ಕಾರ ರಾಜೀನಾಮೆ ಕೊಟ್ಟು ಹೋಗಲಿ: ರವಿಕುಮಾರ್

ರಾಜ್ಯ

ಕಲ್ಬುರ್ಗಿಯ ಯಾದಗಿರಿಯಲ್ಲಿ ಮಾದಿಗ ಯುವಕನನ್ನು ಫಯಾಜ್ ಎನ್ನುವವನು ಮರ್ಮಾಂಗಕ್ಕೆ ಹೊಡೆದು ಕತ್ತು ಹಿಸುಕಿ ಕೊಲೆ  ಮಾಡಿದ್ದಾನೆ,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಧಾನಪರಿಷತ್ ಸಚೇತಕ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು
‌ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ‌ಮಾತಾಡಿದರು. ಹಸಿವಾಗಿದೆ ಎಂದು ರೊಟ್ಟಿ ತರಲು ಹೋದಾಗ, ರೊಟ್ಟಿ ಇಲ್ಲ ಎಂದು ಹೇಳಿ‌, ಕಳುಹಿಸಿ ನಂತರ ಬಂದು ಕೊಲೆ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದುಗಳು, ಎಸ್ಸಿ ಎಸ್ಟಿಗಳು, ಮಹಿಳೆಯರ ಹತ್ಯೆಯಾಗುತ್ತಿದೆ. ಇದರ ಬಗ್ಗೆ ಪ್ರಾಮಾಣಿಕ ತನಿಖೆಯಾಗಬೇಕು.‌ಇದರ ಬಗ್ಗೆ ಎಸ್ಸಿ ಎಸ್ಟಿ‌ ಮೋರ್ಚಾದಿಂದ ಹೋರಾಟಕ್ಕೆ ಕರೆ ಕೊಡುತ್ತಿದ್ದೇವೆ. ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸ್ ಇಲಾಖೆ ನಡೆಯುತ್ತಿದೆ.‌ ಘೋರ ಅನ್ಯಾಯ ನಡೆಯುತ್ತಿದೆ. ಕೂಡಲೇ ರಾಕೇಶ್ ನನ್ನು ಹತ್ಯೆ ಮಾಡಿದ ಫಯಾಜ್ ಮತ್ತು ಸಂಗಡಿಗರನ್ನು ಬಂಧಿಸಿ, ಕಠಿಣ ಶಿಕ್ಷೆ ಕೊಡಬೇಕು. ಅಲ್ಪ ಸಂಖ್ಯಾತ ಯುವಕ, ಅಥವ ಯುವತಿಗೆ ಆಗಿದ್ದರೆ, ಸಿದ್ದರಾಮಯ್ಯ ಅವರ ಮಾತುಗಳು ಹೇಗಿರುತ್ತಿತ್ತು ಎಂದು‌ ಪ್ರಶ್ನಿಸಿದರು. ರಾಜ್ಯದ ಜನತೆಗೆ ರಕ್ಷಣೆಗೆ ಕೊಡಲು ಆಗಿದಿದ್ದರೆ, ಎಸ್ಸಿ ಎಸ್ಟಿ ಗಳಿಗೆ ರಕ್ಷಣೆ ಕೊಡದೆ ಇದ್ದರೆ,ರಾಜೀನಾಮೆ ಕೊಟ್ಟು ಹೋಗಬೇಕು. ರಾಕೇಶ್ ಹತ್ಯೆಯ ಬಗ್ಗೆ ಪ್ರಾಥಮಿಕ ಜವಾಬ್ದಾರಿ ನಿರ್ವಹಿಸಲು ತಯಾರಿಲ್ಲ.‌ಆದ್ದರಿಂದ ನೇಹ ಹತ್ಯರ, ರಾಕೇಶ್ ಹತ್ಯೆ ಹಾಗೂ ಹಿಂದೂಗಳ ಮೇಲೆ ದೌರ್ಜನ್ಯದ ಘಟನೆಗಳಿವೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮಾತಾಡಿ, ಮೂರು ದಿನಗಳಲ್ಲಿ‌ ಎಂಟು‌ ಬರ್ಬರ ಕೊಲೆಗಳಾಗಿವೆ. ಈ ಸರ್ಕಾರ ರಾಜ್ಯದಲ್ಲಿ ತಾಲಿಬಾನ್ ಆಡಳಿತ ಜಾರಿಗೆ ತಂದಿದೆ. ಸಿಎಂ ಶಾಂತಿ ನಾಡು ಕರ್ನಾಟಕವನ್ನು ತಾಲಿಬಾನ್ ಗೆ ತೆಗೆದುಕೊಂಡು ಹೋಗಿದ್ದಾರೆ. ರಾಕೇಶ್ ಮನೆ ನುಗ್ಗಿ ಪೋಷಕರೆದರು,ಎಂಟು ಜನರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಿನ್ನೆ ರಾತ್ರಿ ಘಟನೆ ನಡೆದಿದೆ. ಆದರೆ ಎಫ್ ಐ ಆರ್ ಆಗಿದ್ದು, ಇಂದು ಮಧ್ಯಾಹ್ನ ,‌ಮಾನ ಗೆಟ್ಟ ,ನಾಚಿಕೆ ಇಲ್ಲದ ಸರ್ಕಾರ ಇದು.ಯಾರನ್ನೋ ಓಲೈಸುಲು ಪೊಲೀಸ್ ಇಲಾಖೆ ಪ್ರಕರಣ ಮುಚ್ಚಿ‌ ಇಲಾಖೆ ಮುಂದಾಗಿತ್ತು. ನಿಮಗೆ ನಾಚಿಕೆ ಆಗಲಿಲ್ವ? ದಲಿತ ಎನ್ನುವ ಮಾನವೀಯತೆ ನಿಮಗೆ ಇದ್ದರೆ ನೀವು ಕೂಡಲೇ ರಾಜೀನಾಮೆ ಕೊಟ್ಟು ಹೋಗಬೇಕು.‌ನೀವು ಅನ್ ಫಿಟ್ ಫಾರ್ ದ ಹೋಂ ಮಿನಿಸ್ಟರ್ ಪೋಸ್ಟ್ ಎಂದು‌ ಪರಮೇಶ್ವರ್ ವಿರುದ್ಧ ಕಿಡಿ ಕಾರಿದರು. ಈ ಸರ್ಕಾರ ದಲಿತರು ಮಹಿಳೆಯರು, ಹಿಂದೂಗಳು, ದಲಿತರಿಗೆ ರಕ್ಷಣೆ ಇಲ್ಲವಾಗಿದೆ. ಈ ಸರ್ಕಾರ ತುಷ್ಠಿಕರಣದ ಪರಾಕಾಷ್ಟೆಗೆ ಹೋಗಿದೆ. ಸಿಎಂ‌ ಸಿದ್ದರಾಮಯ್ಯ, ಹಾಗೂ ಗೃಹ ಸಚಿವ ಪರಮೇಶ್ವರ್ ಅವರೇ ನೀವು ದಲಿತರಿಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು. ಸಂತೋಷ್ ಲಾಡ್ ಅವರಿಗೆ ಯಾವ ದುಖಃ , ಸಂತೋಷ ಯಾವುದು ಎಂದು ಅರ್ಥ ಮಾಡಿಕೊಳ್ಳದೆ‌ ಇರುವ ಬೇಜಾಬ್ದಾರಿ ಮಂತ್ರಿ, ಅವರು ಜವಾಬ್ದಾರಿಯಿಂದ. ಉತ್ತರ ಕೊಡಬೇಕು. ಬಿಜೆಪಿ ಯಾವುದೇ ಹತ್ಯೆ ಆದರೂ ಖಂಡಿಸುತ್ತದೆ. ಈ ಸರ್ಕಾರದಲ್ಲಿ ಮಾನವ ಜೀವಿಗಳಿಗೆ ಬೆಲೆ‌ ಇಲ್ಲದಾಗಿದೆ. ಇದೊಂದು ಅಮಾನವೀಯ ಸರ್ಕಾರವಾಗಿದೆ. ಲಕ್ಷಾಂತರ ಜನ ವಿದ್ಯಾರ್ಥಿಗಳ ಬಗ್ಗೆ ಕಾಳಜಿ‌ ಇಲ್ಲ. ಸಿಎಂ ಯಾವುದಕ್ಕೂ ಕೇರ್ ಮಾಡಲ್ಲ, ಸರ್ಕಾರ ಕೂಡಲೇ ರಾಜೀನಾಮೆ ಕೊಟ್ಟು ಹೋಗಬೇಕು. ಇಲ್ಲದೆ ಹೋದರೆ 26 ರ ನಂತರ ಮತದಾನದ ಮೂಲಕ ಸರಿಯಾದ ಪಾಠ ಕಲಿಸುತ್ತಾರೆ. ಇದು ಎರಡನೇ ಟಿಪ್ಪು ಆಡಳಿತ ನಡೆಯುತ್ತಿದೆ. ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಎರಡನೇ ಅವತಾರ, ಅನ್ ಡೆಮೋಕ್ರಟಿಕ್ ಆಡಳಿತ ಮಾಡುತ್ತಿದ್ದಾರೆ.ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆಯನ್ನು ಇಂದು ರಾತ್ರಿ ಮತ್ತು ನಾಳೆ ರಾಜ್ಯದಾದ್ಯಂತ ಮಾಡುತ್ತೇವೆ ಎಂದರು.‌ಈ ಸಮಯದಲ್ಲಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜೀವ್,ರವಿಕುಮಾರ್, ರಾಜ್ಯ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ,ರಾಜ್ಯ ಮಾಧ್ಯಮ ಸದಸ್ಯ ಅವಿನಾಶ್, ಚಿತ್ರದುರ್ಗ ಬಿಜೆಪಿ ಮಂಡಲ ಉಪಾಧ್ಯಕ್ಷ ಸುರೇಶ್ ನಾಯ್ಕ್, ಎಸ್ಸಿ‌ಮೋರ್ಚಾದ ರಾಜ್ಯ ಕಾರ್ಯದರ್ಶಿ‌ಲಿಂಬಾ ನಾಯ್ಕ್, ಚಿತ್ರದುರ್ಗ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಜಯಸಿಂಹ ಕಾಟ್ರೋತ್,  ವಕ್ತಾರ ನಾಗರಾಜ್ ಬೇದ್ರೆ, ಸಂಚಾಲಕ ದಗ್ಗೆ ಶಿವ ಪ್ರಕಾಶ್ ಇದ್ದರು.

 

 

 

Leave a Reply

Your email address will not be published. Required fields are marked *