ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಫೂರ್ಣ ವಿಫಲವಾಗಿದೆ

ರಾಜ್ಯ

ಸಿಎಂ ಸಿದ್ದರಾಮಯ್ಯ ಹಾಗು ಕಾಂಗ್ರೆಸ್ ಸರ್ಕಾರ ಒಂದು ಸಮಾಜದ ಒಲೈಕೆಗಾಗಿ, ಹಿಂದೂ ವಿರೋಧಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಹರಪನಹಳ್ಳಿ ಶಾಸಕ ರಾಜೀವ್ ಅವರು ಆರೋಪಿಸಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ‌ ಮಾತಾಡಿದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೇಹ ಹತ್ಯೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ, ಸಿಎಂ ಹಾಗೂ ಗೃಹ ಸಚಿವರು ನಿಕೃಷ್ಟವಾದ ಹೇಳಿಕೆ ನೀಡುತ್ತಿದ್ದಾರೆ ಇದು ರಾಜ್ಯದ ದೌರ್ಭಾಗ್ಯ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಚೊಂಬು ಜಾಹೀರಾತು ನೀಡುತ್ತಿದ್ದಾರೆ. ರೈತರ ,ದಲಿತರ ಹಾಲು ಉತ್ಪಾದಕರ ಪ್ರೋತ್ಸಾಹ ಸೇರಿದಂತೆ ಅನೇಕ ಯೋಜನೆಗಳನ್ನು ಕತ್ತರಿಸಿ ಜಬರ ಕೈಗೆ ಚೊಂಬು ಕೊಟ್ಟಿದ್ದು, ಕಾಂಗ್ರೆಸ್ ಎಂದರು. ಬಂಜಾರ ಸಮಾಜವು ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ನಿಲ್ಲುತ್ತದೆ. ಸಚಿವ ಸಂಪುಟದಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಒಂದು ಟಿಕೆಟ್ ನೀಡಿಲ್ಲ. ಬಂಜಾರ ಭೋವಿ, ಕೊರಚ ಕೊರಮ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಇದು ಜನರಿಗೆ ಅರ್ಥವಾಗಿದೆ. ಇದೆಲ್ಲ ಬೆಳವಣಿಗೆ ಗಮನಿಸಿದ್ದು, ಕರ್ನಾಟಕದಿಂದ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಬೇಕು ಎಂದು ತೀರ್ಮಾನಿಸಿದೆ. 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ರಾಜ್ಯವನ್ನು ಶಾಂತಿ ತೋಟವನ್ನಾಗಿ ಮಾಡಲು ಬಿಜೆಪಿ ಸಿದ್ದವಿದ್ದು, ಅದಕ್ಕೆ ಜನರು ಬೆಂಬಲಿ ಗೆಲ್ಲಿಸುತ್ತಾರೆ ಎಂದರು. ಈ ಸಮಯದಲ್ಲಿ ಮಾಜಿ‌ ಶಾಸಕ ಬೆಳ್ಳುಬ್ಬಿ, ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ ಇದ್ದರು.

 

 

 

Leave a Reply

Your email address will not be published. Required fields are marked *