ಹಿರಿಯೂರಿನಲ್ಲಿ ಭರ್ಜರಿ ಬೇಟೆ: 5 ಕೇಜಿ ಚಿನ್ನ 6.80 ಲಕ್ಷ ನಗದು ವಶ

ರಾಜ್ಯ

 

 

 

 

BREKING NEWS

ಹಿರಿಯೂರಿನ ಎರಡು ಕಡೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸ್ ಮತ್ತು ಎಫ್ ಎಸ್ಟಿ ತಂಡದ ಅಧಿಕಾರಿಗಳು ದಾಳಿ‌ ನಡೆಸಿ ಅಧಿಕೃತ ದಾಖಲೆ ಇಲ್ಲದ 3.55 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನದ ಒಡವೆಗಳು ಹಾಗೂ 6.80 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
ಹಿರಿಯೂರಿನ ನಗರದಲ್ಲಿ ಪೊಲೀಸರು ಅನುಮಾನಸ್ಪದವಾಗಿ ಚೀಲವಿಡಿದು ಓಡಾಡುತ್ತಿದ್ದವರನ್ನು ವಿಚಾರಿಸಿ ಬ್ಯಾಗ್ ನ್ನು ಪರಿಶೀಲಿಸಿದಾಗ ಬ್ಯಾಗಿನಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿದ್ದ 3.55 ಕೋಟಿಗೂ ಹೆಚ್ಚಿನ ಮೌಲ್ಯದ ಚಿನ್ನದ ಒಡವೆಗಳು ಸಿಕ್ಕಿವೆ. ದಾವಣಗೆರೆಯಿಂದ ಹಿರಿಯೂರಿನ ರಂಗನಾಥ ಜೂಯೆಲರ್ಸ್ ಗೆ ಕೊಡಲು ತಂದಿರುವುದಾಗಿ ಹೇಳಿದರೂ ಅವುಗಳಿಗೆ ಅಧಿಕೃತ ದಾಖಲೆಗಳಿಲ್ಲ. ಆದ್ದರಿಂದ ಒಡವೆಗಳನ್ನು ಪೊಲೀಸರು ವಶಪಡಿಸಿಕೊಂಡು ತಾಲೂಕು‌ ಖಜಾನೆಗೆ ಒಪ್ಪಿಸಿದ್ದಾರೆ. ಇನ್ನೊಂದೆಡೆ ಮಸ್ಕಲ್ ಬಳಿ ಎಫ್ ಎಸ್ಟಿ ತಂಡದ ಅಧಿಕಾರಿಗಳು ಐಚೇರ್ ವಾಹನ ತಡೆದು ಪರಿಶೀಲಿಸಿದಾಗ ಅದರಲ್ಲಿ 6.80 ಸಾವಿರ ನಗದು ಸಿಕ್ಕಿದೆ. ಇದು ಆಂಧ್ರ ಪ್ರದೇಶದ ನಂದ್ಯಾಲದಿಂದ ಶೇಂಗಾ ಮಾರಾಟ ಮಾಡಲು ಬಬ್ಬೂರಿಗೆ ಬಂದಿದ್ದು, ಶೇಂಗಾ ಮಾರಾಟ ಮಾಡಿದಾಗ ಬಂದಿರುವ ಹಣ ಎಂದು‌ ಹೇಳಲಾಗುತ್ತಿದೆ. ಆದರೆ ಇದಕ್ಕೂ ಅಧಿಕೃತ ದಾಖಲೆ ಇಲ್ಲವಾಗಿದ್ದು, ಎರಡು ಪ್ರಕರಣಗಳ‌ನ್ನು ದಾಖಲಿಸಿಕೊಂಡಿರುವ ಪೊಲೀಸರು 6.80 ಲಕ್ಷ ನಗದನ್ನು ಹಿರಿಯೂರಿನ ಖಜಾನೆಗೆ ಒಪ್ಪಿಸಿದ್ದಾರೆ. ಪ್ರಕರಣದ ವರದಿಯನ್ನು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ನೀಡಿದ್ದಾರೆ. ಇ‌ನ್ನು ಚಿನ್ನದ ಒಡವೆಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಐಟಿ‌ ಅಧಿಕಾರಿಗಳಿಗೆ ಒಪ್ಪಿಸಿದ್ದು ಎರಡು ಪ್ರತ್ಯೇಕ ಪ್ರಕರಣಗಳು ಹಿರಿಯೂರು ಠಾಣೆಯಲ್ಲಿ ದಾಖಲಾಗಿದೆ

Leave a Reply

Your email address will not be published. Required fields are marked *