ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿ : 13 ಜನರಿಗೆ ಗಾಯ

ರಾಜ್ಯ

ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿ ಹೊಡೆದು 13 ಜನರಿಗೆ ಗಂಭೀರ ಗಾಯಗೊಂಡಿರುವ ಘಟನೆ ಚಿತ್ರದುರ್ಗದಲ್ಲಿ‌ ನಡೆದಿದೆ.

 

 

 


ಚಿತ್ರದುರ್ಗ ಹಿರಿಯೂರಿನ ಐಮಮಂಗಲದ ಬಳಿ ಈ ಘಟನೆಯು ನಡೆದಿದ್ದು, ಬೆಂಗಳೂರಿನಿಂದ ಗೋವಾಕ್ಕೆ ಪ್ರವಾಸ ತೆರಳುತ್ತಿದ್ದ ಮಿನಿ ಬಸ್ ನಲ್ಲಿ 13 ಜನರು ತೆರಳುತ್ತಿದ್ದರು, ಗಾಯಾಳುಗಳಲ್ಲಿ ಮೂವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಇವರೆಲ್ಲರನ್ನು ಬೆಂಗಳೂರಿನ ಯಲಹಂಕ ನಿವಾಸಿಗಳು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಮಂಜುನಾಥ್ ಮತ್ತು ಸುರೇಶ್ ಭೇಟಿ‌ ನೀಡಿ ಪರಿಶೀಲಿಸಿದ್ದು, ಐಮಂಗಲ‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *