ಕೇಂದ್ರ ಸಚಿವ ಅಭ್ಯರ್ಥಿ ಕಾರಜೋಳಗೆ ಮತ ನೀಡಿ: ರವಿಕುಮಾರ್

ರಾಜ್ಯ

ಚಿತ್ರದುರ್ಗ ನಗರದ ಮನೆ ಮನೆಗೆ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಬಿಜೆಪಿ ನಾವು ಮೂರು ದಿನಗಳ ಕಾಲ ಮಾಡುತ್ತಿದ್ದೇವೆ 2167 ಬೂತ್ ಗಳನ್ನು ಭೇಟಿ ಮಾಡುತ್ತೇವೆ ಎಂದು ಎಂಎಲ್ ಸಿ ರವಿಕುಮಾರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. 24 ರಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್ ಶೋ ನಲ್ಲಿ ಎಂಟು ವಿಧಾನ ಸಭಾ ಕ್ಷೇತ್ರದದಿಂದ ಜನರು ಆಗಮಿಸಲಿದ್ದಾರೆ.ಅಲ್ಲಿ ನಮ್ಮ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕು ಎಂಬ ಸಂದೇಶ ಹೋಗಬೇಕು. ಇನ್ನು ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲುವುದಿಲ್ಲ. 40 ಕೂಡ ಗೆಲ್ಲಲ್ಲ. ಗೋವಿಂದ ಕಾರಜೋಳ ಅವರು ಸಂಸದರಾಗುವುದಷ್ಟೆ ಅಲ್ಲ, ಕೇಂದ್ರದಲ್ಲಿ ಸಚಿವರಾಗುತ್ತಾರೆ. ಇದರಿಂದ ಸಚಿವರಾಗುವ ಅಭ್ಯರ್ಥಿಗೆ ಚಿತ್ರದುರ್ಗ ಜನತೆ ಮತಹಾಕಬೇಕು ಎಂದು ಮನವಿ ಮಾಡಿದರು. ಎಂಎಲ್ ಸಿ‌ ನವೀನ್ ಅವರು ಮಾತಾಡಿ, ಕುಮಾರಸ್ವಾಮಿ ಅವರು ನಾಳೆಯಿಂದ ಕಾರಜೋಳ ಪರ ಪ್ರಚಾರದಲ್ಲಿ ತೊಡಗಲಿದ್ದಾರೆ ಎಂದರು. ಮದಕರಿನಾಯಕ ಥೀಮ್ ಪಾರ್ಕ್ ಮಾಡುತ್ತೇವೆ. ಜಾಗದ ವಿಷಯದಲ್ಲಿ ಗೊಂದಲವಿದೆ. ಅದನ್ನು ಕೂಡಲೇ ಬಗೆಹರಿಸಿ ಥೀಮ್ ಪಾರ್ಕ್ ಮಾಡಬೇಕೆಂದು ಅಮಿತ್ ಷಾ ಹೇಳಿದ್ದಾರೆ. ಆದ್ದರಿಂದ ವಿಳಂಬವಾಗಿದೆ. ಆದರೆ ಕೂಡಲೇ ಥೀಮ್ ಪಾರ್ಕ್ .ಮಾಡುತ್ತೇವೆ ಎಂದರು. ಅಭ್ಯರ್ಥಿ ಗೋವಿಂದ ಕಾರಜೋಳ ಮಾತಾಡಿ, ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರಿನ್ನಿಟ್ಟಿರುವ ನಾವು, ಶೀಘ್ರದಲ್ಲಿಯೇ ಈ ಥೀಮ್ ಪಾರ್ಕ್ ಮಾಡುತ್ತೇವೆ. ಕಾಂಗ್ರೆಸ್ ಪ್ರಣಾಳಿಕೆ ನೋಡಿ‌ ನನಗೆ ರಾತ್ರಿ ನಿದ್ದೆ ಬರಲಿಲ್ಲ. ಅವರು ಕೇಂದ್ರದ ಬಜೆಟ್ ಗಿಂತ ಹೆಚ್ಚು ಹಣ ಈ  ಪ್ರಣಾಳಿಕೆಗೆ ಬೇಕಾಗುತ್ತದೆ. ಆದ್ದರಿಂದ ಕಾಂಗ್ರೆಸ್ ನವರು ಇಂತಹ ಸುಳ್ಳು ಹೇಳುತ್ತಿದ್ದು, ಅವರಿಗೆ ತಲೆಯಲ್ಲಿ ಬುದ್ದಿ ಇಲ್ಲದಾಗಿದೆ. ಸಿದ್ದರಾಮಯ್ಯ ಅವರು ಮೋದಿ ಬಗ್ಗೆ ಬೇಕಾ ಬಿಟ್ಟಿಯಾಗಿ ಮಾತಾಡುತ್ತಾರೆ.‌ಅದು ಸರಿಯಲ್ಲ. ಇನ್ನು ಕಾಂಗ್ರೆಸ್ ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಬೇಕು. ನಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ಲಕ್ಷಕ್ಕಿಂದ ಹೆಚ್ಚು ಬಹುಮತದಿಂದ ಗೆಲ್ಲುತ್ತೇನೆ ಎನ್ನುವ ನಂಬಿಕೆ‌ ಇದೆ, ಗೆಲ್ಲುತ್ತೇನೆ. ಯಡಿಯೂರಪ್ಪ ಸರ್ಕಾರ ಅಪ್ಪರ್ ಭದ್ರಾ ಯೋಜನೆಗೆ ರಾಜ್ಯ ಸರ್ಕಾರ ಹಣ ನೀಡಿದರೂ, ಸಿದ್ದರಾಮಯ್ಯ ಸರ್ಕಾರ ಹಣ ಕೊಡಲಿಲ್ಲ. ವಿಳಂಬವಾಗಿದೆ. ಈಗಲಾದರೂ ಕೂಡ ಹಣವನ್ನು ನೀಡಿದರೆ, ಅಪ್ಪರ್ ಭದ್ರಾ ಯೋಜನೆಗೆ ಹಣ ಬಿಡುಗಡೆ ಮಾಡಿದರೆ, ಕೆಲಸ ಆಗುತ್ತದೆ. ನಾನು ಕೂಡ ಅಪ್ಪರ್ ಭದ್ರಾ ಯೋಜನೆಗೆ 5300 ಕೋಟಿ‌ ಹಣ. ಬಿಡುಗಡೆ ಮಾಡಿಸುವ ಕೆಲಸ ಮಾಡುತ್ತೇನೆ. ನನ್ನ ಮೊದಲ‌ ಆದ್ಯತೆ ಅಪ್ಪರ್ ಭದ್ರಾ ಯೋಜನೆಗಿದೆ. ದಾವಣಗೆರೆ ಬೆಂಗಳೂರು ನೇರ ರೈಲು ಮಾರ್ಗಕ್ಕೂ ಪ್ರಯತ್ನ ಮಾಡುತ್ತೇನೆ. ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ತರುವ ಆಲೋಚನೆ ಇದೆ. ಇದಕ್ಕಾಗಿ ನನಗೆ ಆಶೀರ್ವಾದ ಮಾಡಬೇಕೆಂದು ಮನವಿ‌ಮಾಡಿದರು. ಇದೇ ಸಂದರ್ಭದಲ್ಲಿ ನಗರಸಭೆಯ ಬಿಜೆಪಿ ಜೆಡಿಎಸ್ ಹಾಗೂ ಪಕ್ಷೇತರ ಒಟ್ಟು 28 ಅಭ್ಯರ್ಥಿಗಳು, ಕಾಂತರಾಜ್ ನೇತೃತ್ವದಲ್ಲಿ ಬಿಜೆಪಿಗೆ ಬೆಂಬಲವನ್ನು ಸೂಚಿಸಿದರು.

 

 

 

Leave a Reply

Your email address will not be published. Required fields are marked *