ಮೀಸಲಾತಿ ವರ್ಗೀಕರಣಕ್ಕಾಗಿ ಮಾದಿಗರು ಬಿಜೆಪಿ ಬೆಂಬಲಿಸಿ: ಮಂದಕೃಷ್ಣ ಮಾದಿಗ

ದೇಶ

ಮಾದಿಗ ಮೀಸಲಾತಿಯನ್ನು ಜಾರಿ ಮಾಡುವುದು ಕೇಂದ್ರದ ಬಿಜೆಪಿಯಿಂದ  ಮಾತ್ರ ಸಾಧ್ಯ, ಅದು ಕಾಂಗ್ರೆಸ್ ನಿಂದ ಸಾಧ್ಯವಿಲ್ಲ, ಆದ್ದರಿಂದ ಮಾದಿಗರು ಬಿಜೆಪಿಯನ್ನು ಬೆಂಬಲಿಸಬೇಕೆಂದು ಮಾದಿಗ ದಂಡೋರ ರಾಷ್ಟ್ರೀಯ ಅಧ್ಯಕ್ಷ ಮಂದ ಕೃಷ್ಣ ಮಾದಿಗ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
40 ವರ್ಷಗಳಿಂದ ಮೀಸಲಾತಿ ವರ್ಗೀಕರಣಕ್ಕಾಗಿ ಹೋರಾಟ ನಡೆಯುತ್ತಿದೆ. ಖರ್ಗೆ ಸೇರಿದಂತೆ ಕಾಂಗ್ರೆಸ್ ನಲ್ಲಿ ಬಹಳಷ್ಟು ಮಂದಿ,ಎಸ್ಸಿ ಮೀಸಲಾತಿ ವರ್ಗೀಕರಣಕ್ಕೆ ಅಡ್ಡಿಯಾಗುತ್ತಾರೆ. ಆದ್ದರಿಂದ ಬಿಜೆಪಿಯೇ ಅದರಲ್ಲೂ ಮೋದಿಯವರೇ,ಮೀಸಲಾತಿ  ವರ್ಗೀಕರಣ ಮಾಡಲು ಸರಿಯಾದ ವ್ಯಕ್ತಿ ಮೀಸಲಾತಿ ಎಂದರು.

 

 

 

ಸದಾಶಿವ ಆಯೋಗದ ವರದಿಯನ್ನು ತಂದಿದ್ದು, ಕಾಂಗ್ರೆಸ್ ಆದರೆ, ಅದನ್ನು ತೆಡೆ ಹಿಡಿದುಕೊಂಡಿರುವುದು ಕೂಡ ಕಾಂಗ್ರೆಸ್, ನಮಗೆ ಮೋದಿ‌ ಮೇಲೆ ಬಾರಿ ನಂಬಿಕೆಯಿದೆ. ಮೋದಿ‌ ಅವರು ಮೂರನೇ ಬಾರಿ ಪ್ರಧಾನಿಯಾದರೆ, ಮೀಸಲಾತಿ ವರ್ಗೀಕರಣದ ಚಾಲನಾ  ಪ್ರಕ್ರಿಯೆಗೆ ವೇಗ ದೊಯುತ್ತದೆ. ಇಡೀ ರಾಜ್ಯದಲ್ಲಿ ಬಿಜೆಪಿ ಗೆಲ್ಲಬೇಕು.‌ ಅದರಲ್ಲೂ ಚಿತ್ರದುರ್ಗದಲ್ಲಿ ಸ್ಪರ್ಧಿಸಿರುವ ಗೋವಿಂದ ಕಾರಜೋಳ‌ ಅವರು ಗೆಲ್ಲಬೇಕು. ನಮ್ಮ ಬೆಂಬಲ ಚಿತ್ರದುರ್ಗ ಅಷ್ಟೆ ಅಲ್ಲ, ಕರ್ನಾಟಕ ರಾಜ್ಯ ಸೇರಿದಂತೆ ದಕ್ಷಿಣ ಭಾಗದಲ್ಲಿ ಬಿಜೆಪಿ ಪರವಾಗಿ ಮತ ಪ್ರಚಾರ ಮಾಡುತ್ತಿದ್ದೇವೆ. ಮೂರನೇ ಬಾರಿ ಮೋದಿ ಪ್ರಧಾನಿಯಾದರೆ, ಇದರಿಂದ ಮೀಸಲಾತಿ ವರ್ಗೀಕರಣಕ್ಕೆ ಮತ್ತಷ್ಟು ವೇಗದ ಚಾಲನೆ ದೊರೆಯುತ್ತದೆ. ಕಾರಜೋಳ ಕೇಂದ್ರದಲ್ಲಿದ್ದರೆ ನ್ಯಾಯ ದೊರೆಯತ್ತದೆ. ಯುಪಿಎ ಸರ್ಕಾರ ಇದ್ದಾಗ, ಮನಮೋಹನ್ ಸಿಂಗ್ ಅವರನ್ನು ಭೇಟಿ‌ ಮಾಡಿದ್ದು, ಮೀಸಲಾತಿ ವರ್ಗೀಕರಣ ಮುಂದಾಗಲಿಲ್ಲ. ಇವರೇ ಅಡ್ಡಿ ಪಡಿಸಿದರು.ಪ್ರತೀ ಪಕ್ಷ ಆಗಿದ್ದಾಗಲೂ, ಕೂಡ ಕಾಂಗ್ರೆಸ್ ಮೀಸಲಾತಿ ವರ್ಗೀಕರಣಕ್ಕಾಗಿ ಮನವಿಯನ್ನು ಮಾಡಲಿಲ್ಲ. ಕರ್ನಾಟಕದಲ್ಲಿ ಕೂಡ 25 ವರ್ಷಗಳಿಂದ ವರ್ಗೀಕರಣಕ್ಕಾಗಿ ಹೋರಾಟ ನಡೆಯುತ್ತಿದೆ. ನಾವು ಮೀಸಲಾತಿಗಾಗಿ ಹೋರಾಟ .ಮಾಡುತ್ತಿದ್ದೇವೆ. ಪ್ರಧಾನಿ‌ ಮೋದಿ ಅವರನ್ನು ಭೇಟಿ ಮಾಡಿ‌ದಾಗ ಅವರು, ವರ್ಗೀಕರಣ .ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಮಾದಿಗ ಮೀಸಲಾತಿ ವರ್ಗೀಕರಣಕ್ಕೆ ಕಾಂಗ್ರೆಸ್ ನಿಂದ ವಿರೋಧವಿದೆ, ಬಿಜೆಪಿ ಪರವಾಗಿದೆ ಎಂದರು. ಖರ್ಗೆಗೆ ವಯಸ್ಸಾದರೂ ಸುಳ್ಳು ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ಅನಾಹುತಗಳು ನಡೆದಿದ್ದರೆ, ಕಾಂಗ್ರೆಸ್ ಹಾಗೂ ಇಂದಿರಾಗಾಂಧಿ‌ ಸಮಯದಲ್ಲೇ ನಡೆದಿದೆ. ದೇಶಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದ್ದು, ಇಂದಿರಾಗಾಂಧಿ ಕಾಲದಲ್ಲಿ‌ ಇದನ್ನು ಖಂಡಿಸುತ್ತೇನೆ. ಮೋದಿಯವರು ಏನು ಅಂದುಕೊಂಡಿದ್ದಾರೋ‌ ಅದನ್ನು ಮಾಡಿ ತೀರುತ್ತಾರೆ. ರಾಮ ಮಂದಿರದ ಉದ್ಘಾಟನೆಯಲ್ಲಿ ಯಾವುದೇ ಗದ್ದಲ ಆಗಲಿಲ್ಲ ಎಂದರು. ಎಂ ಆರ್ ಎಸ್ ಬಿಜೆಪಿ ಜೊತೆ ವಿಲೀನವಾಗುವುದಿಲ್ಲ, ಆದರೆ ಬಿಜೆಪಿ ಇರುವವರೆಗೂ ನಾವು ಬಿಜೆಪಿಗೆ ಮತ್ತು ಮೋದಿಯವರಿಗೆ ಬೆಂಬಲ ನೀಡುತ್ತೇವೆ ಎಂದರು.

Leave a Reply

Your email address will not be published. Required fields are marked *