ಶಿವಮೊಗ್ಗದ ಗಲಭೆಗೆ ಕಾರಣನಾದವನಿಗೆ ಗುಂಡೇಟು

ರಾಜ್ಯ

 

ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್​ ಅವರ ಫ್ಲಕ್ಸ್ ತೆರವು ವಿಚಾರಕ್ಕೆ ಸಂಭಂದಿಸಿದ ವಿವಾದದಿಂದಾಗಿ ಶಿವಮೊಗ್ಗ ಧಗಧಗಿಸುತ್ತಿದೆ. ಸಾವರ್ಕರ್​ ಫ್ಲಕ್ಸ್ ತೆಗೆದು ಆ ಜಾಗದಲ್ಲಿ ಟಿಪ್ಪು ಸುಲ್ತಾನ್​ ಫೋಟೋ ಹಾಕಲು ಮುಂದಾಗುತ್ತಿದ್ದಂತೆಯೇ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು.
ಇದೇ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಹಿಂದೂ ಯುವಕರ ಮೇಲೆ ಕೆಲವು ಮುಸ್ಲಿಂ ವ್ಯಕ್ತಿಗಳು ಚಾಕು ಇರಿದಿದ್ದರು.. ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸಿದ್ದಾರೆ.

ಈ ಚಾಕು ಇರಿತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವ್ಯಕ್ತಿಗಳಲ್ಲಿ ಒಬ್ಬ ನದೀಮ. 20 ವರ್ಷದ ಯುವಕ ಪ್ರೇಮ್​ಸಿಂಗ್​ ನಿನ್ನೆ ತನ್ನ ಬಟ್ಟೆ ಅಂಗಡಿ ಮುಚ್ಚಿ ಮನೆಗೆ ಹೋಗುವ ಸಂದರ್ಭದಲ್ಲಿ ಈತ ಸೇರಿದಂತೆ ಕೆಲವು ಮುಸ್ಲಿಂಮರು ಪ್ರೇಮ್​ ಸಿಂಗ್​ ಮೇಲೆ ಚಾಕು ಇರಿದಿದ್ದರು.

 

 

 

ಈತನನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಪೈಕಿ ನದೀಮ್​ ಕರಾಳ ಇತಿಹಾಸ ಇದೀಗ ಬಹಿರಂಗಗೊಂಡಿದೆ.

2016ರಲ್ಲಿ ಶಿವಮೊಗ್ಗದಲ್ಲಿ‌ ನಡೆದ ಕೋಮು ಗಲಭೆಯಲ್ಲಿ ಈತನೇ ಪ್ರಮುಖ ಪಾತ್ರ ವಹಿಸಿದ್ದ. 2016ರಲ್ಲಿ ನಡೆದ ಗಣೇಶೋತ್ಸವದಲ್ಲಿ ಕಲ್ಲು ತೂರಾಟ ಹಾಗೂ ಚಪ್ಪಲಿ ತೂರಾಟದಲ್ಲೂ ಇವನದ್ದೇ ಪ್ರಮುಖ ಪಾತ್ರ. ಈ ಮೂಲಕ ಗಲಭೆ ಹೆಚ್ಚಾಗಲು ಕಾರಣನಾಗಿದ್ದ ನದೀಮ್. ಇದೀಗ ಚಾಕು ಇರಿತದ ಮೂಲಕ ಮತ್ತೆ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಾನೆ.

ಇದು ನದೀಂ ಇತಿಹಾಸವಾದರೆ, ಇನ್ನೋರ್ವ ಆರೋಪಿ ಜಬಿವುಲ್ಲಾಗೂ ಇದೆ ಕಳ್ಳತನದ ಇತಿಹಾಸ. ಈತನಿಗೆ ಕಳ್ಳತನವೇ ಜೀವನಾಧಾರ. ಹತ್ತಾರು ಕಳ್ಳತನ ಪ್ರಕರಣಗಳು ಜಬೀವುಲ್ಲಾ ಮೇಲಿದೆ. ಕೋಮುದ್ವೇಷದ ಬಗ್ಗೆ ಯಾವಾಗಲೂ ಈತ ಸಿಡಿದೇಳುತ್ತಿರುವುದು ತಿಳಿದುಬಂದಿದೆ. ಇವರಿಬ್ಬರೂ ಸೇರಿದಂತೆ ಉಳಿದ ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *