ಜಿಲ್ಲಾ ಸುದ್ದಿ

ತಾಲೂಕು ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗದಿರುವ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ನಿರೀಕ್ಷಕ ಮೈಲಾರಪ್ಪ‌ ಸೇರಿದಂತೆ ಕೆಲವರ‌ ಮೇಲೆ ಶಿಸ್ತಿನ ಕ್ರಮ‌ ಜರುಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಿಇಓ‌ ಅವರುಗಳಿಗೆ ಗಂಭೀರವಾಗಿ ಹೇಳಿದರು.

 

 

 


ಕಳೆದ 12 ನೇ ತಾರೀಕು ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯನ್ನು ಕರೆಯಲಾಗಿತ್ತು. ಆದರೆ ತಾಲೂಕು ಪಂಚಾಯಿತಿ‌ ಕಾರ್ಯ ನಿರ್ವಹಣಾಧಿಕಾರಿ ಸೇರಿದಂತೆ ಹಲವಾರು ಅಧಿಕಾರಿಗಳು ಗೈರಾಗಿದ್ದರು, ಕೆಲವರು ಲೇಟಾಗಿ ಬಂದಿದ್ದರು.‌ಇದರಿಂದ ಕೆಂಡಾಮಂಡಲವಾಗಿದ್ದ ಶಾಸಕರು ಸಭೆಯನ್ನು ರದ್ದುಗೊಳಿಸಿ ಹೊರಟು ಹೋಗಿದ್ದರು. ಆ ಸಭೆಯನ್ನು ಇಂದು ಮತ್ತೆ ಸಭೆಯನ್ನು ಕರೆಯಲಾಗಿತ್ತು. ಹಿಂದಿನ ಸಭೆಯಲ್ಲಿ ಯಾರ್ಯಾರು ಬಂದಿಲ್ಲ ಎಂದು ಒಂದೊಂದೆ ಇಲಾಖೆಯ ಅಧಿಕಾರಿಗಳನ್ನು ಕರೆದು ತರಾಟೆಗೆ ತೆಗೆದುಕೊಂಡರು.ಇದರಲ್ಲಿ ಹತ್ತಕ್ಕಿಂತ ಹೆಚ್ಚು ಅಧಿಕಾರಿಗಳು ಗೈರಾಗಿದ್ದು, ತಾಲೂಕು ಆರೋಗ್ಯಾಧಿಕಾರಿ ಗಿರೀಶ್ ಅವರನ್ನು ಯಾಕೆ ಬಂದಿಲ್ಲ.ನಿಮ್ಮ‌ಇತಿಹಾಸ ಬಿಚ್ಚಿಡುತ್ತೇನೆ. ಇಲಾಖೆಯ ವಾಹನಗಳನ್ನು ಯಾಕೆ ಶಿರಾ ದುರಸ್ತಿಗೆ ಕಳುಹಿಸುತ್ತಿದ್ದೀರಾ ಎಂದು ನನಗೆ ತಿಳಿದಿದೆ. ಕಾರಣವೇನು? ನೀನು ಅಟ ಆಡಲು ಬಂದಿದ್ದೀಯಾ ಎಂದು ಗದರಿದರು.
ಅಂಬೇಡ್ಕರ್, ವಾಲ್ಮೀಕಿ ದೇವರಾಜ್ ಆರಸ್ ನಿಗಮಗಳ ಅಧಿಕಾರಿಗಳನ್ನು ಕೂಡ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಆಹಾರ ನಾಗರೀಕ‌ ಪೂರೈಕೆ ಇಲಾಖೆಯ ಆಹಾರ ನೀರೀಕ್ಷಕ ಮೈಲಾರಪ್ಪ ಮೀಟಿಂಗ್ ಬಂದಿಲ್ಲ, ರಜೆ ಮೇಲೆ ತೆರಳಿದ್ದು, ಇಂದು ಕೂಡ ಮೀಟಿಂಗ್ ಗೆ ಬಂದಿಲ್ಲ‌ ಇಲಾಖೆಯ ಆಹಾರ ವಿತರಣಾ ಕೇಂದ್ರಗಳ ಪಟ್ಟಿಯನ್ನು ತರಲು ಉಪನಿರ್ದೇಶಕರು ಕೇಳಿದ್ರೂ ತಂದು‌ಕೊಡುತ್ತಿಲ್ಲ. ಇವರ ಮೇಲೆ ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕು, ಸಾಧ್ಯವಾದರೆ ಅಮಾನತ್ತು ಮಾಡುವಂತೆ ಸೂಚಿಸಿದರು. ನಂತರ ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೇರಿ ಮತ್ತು ಮುಖ್ಯ ಕಾರ್ಯ ನಿರ್ವಣಾಧಿಕಾರಿ ಡಾ.‌ನಂದಿನಿದೇವಿ ಅವರುಗಳಿಗೆ ಕೂಡಲೇ ಕ್ರಮ ಜರುಗಿಸುವಂತೆ ಸೂಚಿಸಿದರು.

Leave a Reply

Your email address will not be published. Required fields are marked *