ಓಎಂ‌ಆರ್ ಶೀಟ್ ತಿದ್ದಲು ಕೀ‌ಕೊಟ್ಟು ರಜೆ ಮೇಲೆ ಹೋಗಿದ್ದ ಅಮೃತ್ ಪೌಲ್

ರಾಜ್ಯ

ಸಬ್ ಇನ್ಸ್‌ಪೆಕ್ಟರ್ 545 ಹುದ್ದೆಗಳ ಓಎಂ ಆರ್ ಶೀಟ್ ತಿದ್ದಲು ತನ್ನ ಬಳಿಯಿದ್ದ ಸ್ಟ್ರಾಂಗ್ ರೂಂ ಕೀ ಡಿವೈಎಸ್ಪಿ ಶಾಂತ ಕುಮಾರ್ ಗೆ ಕೊಟ್ಟು ಎಡಿಜಿಪಿ ಅಮೃತ್ ಪೌಲ್ ರಜೆ ಮೇಲೆ‌ ತೆರಳಿದ್ದರು.
ಡೀಲ್ ಕೊಟ್ಟ ಅಭ್ಯರ್ಥಿಗಳ ಓಎಂ ಆರ್ ಶೀಟ್ ತಿದ್ದಲು ಶಾಂತ್ ಕುಮಾರ್ ಗೆ ಹೇಳಿ‌ ರಜೆ ಮೇಲೆ ತೆರಳಿದ್ದರು. ಎಡಿಜಿಪಿ ಆದೇಶದಂತೆ ಶಾಂತ್ ಕುಮಾರ್ ಹಾಗೂ ಗ್ಯಾಂಗ್ ಮೂರು‌ ದಿನ 9 ತಾಸುಗಳ ಕಾಲ ಹಣ ಕೊಟ್ಟ ಅಭ್ಯರ್ಥಿಗಳ ಓಎಂ‌ಆರ್ ಶೀಟ್ ತಿದ್ದಿ ಅಯ್ಕೆ ಪಟ್ಟಿಯಲ್ಲಿ‌ಇವರ ಹೆಸರು ಬರುವಂತೆ ಮಾಡಿದ್ದರು ಎಂದು ಸಿಐಡಿ‌ ತನ್ನ. ಚಾರ್ಜ್ ಶೀಟ್ ನಲ್ಲಿ‌ ಉಲ್ಲೇಖಿಸಿದೆ.
ಅಮೃತ್ ಪಾಲ್ ಮತ್ತು ಸಹಚರರು ಒಳ‌ಸಂಚು ರೂಪಿಸಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ‌ ಮಾಡಿದ್ದರು. ಅರಮನೆ ರಸ್ತೆ ಸಿಐಡಿ ಪ್ರಧಾನ ಕಚೇರಿ‌ ನೇಮಕಾತಿ ಸ್ಟ್ರಾಂಗ್ ರೂಂ ನಲ್ಲಿ 2021 ರ ಅಕ್ಟೋಬರ್‌ನಲ್ಲಿ‌ಮೂ ದಿನಗಳ ಕಾಲ ಬೆಳಗಿನ ಸಮಯದಲ್ಲಿ ಓಎಂ‌ಆರ್ ಶೀಟ್ ಗಳನ್ನುವಹಿಸುತ್ತಿದ್ದರು.545 ಎಸ್​ಐ ನೇಮಕಾತಿಗೆ 2021ರ ಅಕ್ಟೋಬರ್ 3ರಂದು ರಾಜ್ಯದ 91 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಎಲ್ಲ ಒಎಂಆರ್ ಶೀಟ್​ಗಳನ್ನು ಸಿಐಡಿ ಪ್ರಧಾನ ಕಚೇರಿಗೆ ರವಾನೆ ಮಾಡಲಾಗಿತ್ತು. ಅದಾಗಲೇ ಅಮೃತ್ ಪೌಲ್ ಮತ್ತು ಅವರ ಗ್ಯಾಂಗ್ ಒಳಸಂಚು ರೂಪಿಸಿ ಕೆಲ ಅಭ್ಯರ್ಥಿಗಳಿಗೆ ನೌಕರಿ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂ. ವಸೂಲಿ ಮಾಡಿದ್ದರು. ಅದರಂತೆ ಪೌಲ್, ತನ್ನ ಬಳಿಯಿದ್ದ ಸ್ಟ್ರಾಂಗ್ ರೂಮ್ ಕೀಯನ್ನು ಶಾಂತಕುಮಾರ್​ಗೆ ಒಪ್ಪಿಸಿದ್ದರು. 3-4 ದಿನಗಳ ಕಾಲ ಕಚೇರಿಗೆ ಬಾರದೆ ರಜೆ ಹಾಕಿದ್ದರು.

 

 

 

ಈ ಕೀ ಬಳಿಸಿಕೊಂಡು ನೇಮಕಾತಿ ವಿಭಾಗದ ಸಿಬ್ಬಂದಿ ಶ್ರೀನಿವಾಸ್, ಬೆಳಗ್ಗೆ 6.30ಕ್ಕೆ ಸ್ಟ್ರಾಂಗ್ ರೂಮ್ ಪ್ರವೇಶ ಮಾಡಿ ಒಎಂಆರ್ ಶೀಟ್ ಇಟ್ಟಿದ್ದ ನೀಲಿ ಬಣ್ಣದ ಒನ್​ಟೈಮ್ ಗಮ್ಮಿಂಗ್ ಕವರ್ ಕಟ್ ಮಾಡಿ ತಮಗೆ ಬೇಕಾದ ಅಭ್ಯರ್ಥಿಗಳ ಉತ್ತರ ಪತ್ರಿಕೆ ತೆಗೆದುಕೊಳ್ಳುತ್ತಾರೆ. ಶಾಂತಕುಮಾರ್ ನೀಡಿದ್ದ ಸರಿ ಉತ್ತರವನ್ನು ನೋಡಿಕೊಂಡು ಅಭ್ಯರ್ಥಿಗಳು ಖಾಲಿ ಬಿಟ್ಟಿದ್ದ ಒಎಂಆರ್ ಶೀಟ್​ನಲ್ಲಿ ತುಂಬಿರುತ್ತಾರೆ. 2021ರ ಅಕ್ಟೋಬರ್ 7ರಂದು 2 ಕಿಟ್ ಬಾಕ್ಸ್, ಅ.8ರಂದು 2 ಕಿಟ್ ಬಾಕ್ಸ್ ಮತ್ತು ಅ.16ರಂದು 3 ಕಿಟ್ ಬಾಕ್ಸ್ ತೆರೆದು ಅಕ್ರಮ ಎಸಗಿದ್ದರು. ಈ ಮೂರು ದಿನಗಳು ನೇಮಕಾತಿ ವಿಭಾಗದ ಎಫ್​ಡಿಎ ಡಿ. ಹರ್ಷ, ಸಿಐಡಿ ಪ್ರಧಾನ ಕಚೇರಿ ಹೊರಗೆ ನಿಂತು ಮೇಲಾಧಿಕಾರಿಗಳ ಚಲನವಲನಗಳ ಮೇಲೆ ನಿಗಾ ವಹಿಸುತ್ತಿದ್ದರು.

ಸಿಸಿ ಕ್ಯಾಮರಾ ಬ್ಯಾಕಪ್ ನಾಶ: ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ೆ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಶ್ರೀಧರ್​ಗೆ ವಹಿಸಲಾಗಿತ್ತು. ಆ ಮೂರು ದಿನಗಳು ಬೆಳಗ್ಗೆ 6.30ರಿಂದ 9.30ರವರೆಗೆ ಸಿಸಿ ಕ್ಯಾಮರಾ ಆಫ್ ಮಾಡಿದ್ದ. ಅಲ್ಲದೆ, ಬೆಳಗ್ಗೆ 6ರಿಂದ 10 ಗಂಟೆವರೆಗೆ ದೃಶ್ಯಾವಳಿಗಳ ಬ್ಯಾಕಪ್ ಸಂಗ್ರಹಿಸಿಡುವ ಬದಲು ನಾಶಪಡಿಸಿ, ಸಾಕ್ಷ್ಯಾಧಾರಗಳನ್ನು ಸಿಗದಂತೆ ಮಾಡಿದ್ದರು ಎಂಬುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ.

Leave a Reply

Your email address will not be published. Required fields are marked *