ಕೋಟಿ‌ ಕೋಟಿ‌‌ಹಣ ನುಂಗಿ‌ ನೀರು‌ ಕುಡಿದ್ರಾ ಸಚಿವ ಶ್ರೀರಾಮುಲು ಅಪ್ತ ಸಹಾಯಕರುಗಳು?

ರಾಜ್ಯ

ಚಿತ್ರದುರ್ಗ ಪರಿಶಿಷ್ಟ ಕಲ್ಯಾಣ ವರ್ಗ ಮತ್ತು ಅಭಿವೃದ್ಧಿ ನಿಗಮದಲ್ಲಿ ಸುಮಾರು 30 ಕೋಟಿ‌ ಹಗರಣವಾಗಿದೆ ಎಂದು ಚಿತ್ರನಾಯಕನ ವೇದಿಕೆ ಅಧ್ಯಕ್ಷರಾದ ಪ್ರಶಾಂತ್ ಆರೋಪಿಸಿದ್ದಾರೆ. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಎಂಪಿ‌ ಅವರ ‌ಮೂರು ಕೋಟಿ‌ ವಿಶೇಷ ಅನುದಾನ ಮೊಳಕಾಲ್ಮೂರು  ತಾಲೂಕಿನ ಅಭಿವೃದ್ದಿಗೆ ಬಳಕೆಯಾಗಬೇಕಿತ್ತು, ಈ ವಿಶೇಷ ಅನುದಾನದಲ್ಲಿ‌ 57ಜನರಿಗೆ ಸೌಲಭ್ಯ ಸಿಗಬೇಕಿತ್ತು. ಆದರೆ 37 ಜನರಿಗೆ ಮಾತ್ರ ಸಿಕ್ಕಿದೆ. ಅದೂ ಸೌಲಭ್ಯ ಪಡೆದುಕೊಂಡವರು ಕೂಡ ಅರ್ಹ ಫಲಾನುಭವಿಗಳಲ್ಲ, ಇಲಾಖೆಯಲ್ಲಿ‌ ಕೆಲಸ ಮಾಡುತ್ತಿರುವವರೆ ಅವರ ಸಂಬಂಧಿಗಳಿಗೆ ಕೊಟ್ಟಿದ್ದಾರೆ. ಶ್ರೀರಾಮುಲು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮೂರು ಕೋಟಿ‌ ಅನುದಾನವನ್ನು ಕೋವಿಡ್ ಗಾಗಿ ತಂದಿದ್ದರು, ಅದರ ಹಂಚಿಕೆಯಲ್ಲೂ ತಾರತಮ್ಯ ಮಾಡಿದ್ದು, ಹಗರಣವಾಗಿದೆ ಅದು ಈಗಾಗಲೇ ಪುರಾವೆಗಳು ಸಿಕ್ಕಿವೆ. ಇದರ ಬಗ್ಗೆಯೂ ತಿಳಿದ್ದಿದ್ದರು ಕೂಡ ಯಾರೂ ಚಕಾರ ಎತ್ತುತ್ತಿಲ್ಲ.

 

 

 

ಇನ್ನು ಪರಿಶಿಷ್ಟ ವರ್ಗದ ಬಡವರಿಗೆ ಸ್ವಯಂ ಉದ್ಯೋಗ ಮಾಡಲು ಐರಾವತ ಯೋಜನೆಯಡಿಯಲ್ಲಿ 74 ವಾಹನಗಳು ಬಂದಿದ್ದು, ಕೇವಲ ಮೊಳಕಾಲ್ಮೂರಿಗೆ 70ವಾಹನಗಳನ್ನು ಹಂಚಿದ್ದಾರೆ. ಉಳಿದ‌ ನಾಲ್ಕು ಮಾತ್ರ ಜಿಲ್ಲೆಯ ಕೆಲ‌ ತಾಲೂಕುಗಳಿಗೆ ನೀಡಿದ್ದಾರೆ. ಆದರೆ ಅವರು ನೀಡಿರುವ ಫಲಾನುಭವಿಗಳ್ಯಾರೂ ಕೂಡ ಅರ್ಹರಾಗಿಲ್ಲ, ಇಲ್ಲಿಯೂ ಕೂಡ ಹಗರಣವಾಗಿದೆ.ಇದೆಲ್ಲದಕ್ಕೂ ನೇರ ಹೊಣೆಗಾರರು ಸಚಿವ ಶ್ರೀರಾಮುಲು ಮತ್ತು ಅಪರ ಅಪ್ತ ಸಾಹಾಯಕರಾದ ಪಾಪೇಶ್ ನಾಯ್ಕ್ ಮತ್ತು ಹನುಮಂತರಾಯಪ್ಪ ಎಂದು ಆರೋಪಿಸಿದರು. ಇದಕ್ಕೆ ಶ್ರೀರಾಮುಲು ಉತ್ತರ ನೀಡಬೇಕು, ನಮ್ಮ ಸಮೂದಾಯದ ಅಗ್ರಗಣ್ಯ ನಾಯಕ‌ ಶ್ರೀರಾಮುಲು ನಾವು ಇದನ್ನು ಒಪ್ಪುತ್ತೇವೆ. ಆದರೆ ಅದೇ ಸಮೂದಾಯದ ಕಟ್ಟ ಕಡೆಯ ಜನರ ಹಸಿವ‌ನ್ನು ಕಿತ್ತು ತಿನ್ನುತ್ತಿದ್ದಾರೆ.‌ಇದನ್ನು ನಾವು ಹೇಗೆ ಸಹಿಸುವುದು ಎಂದು ಪ್ರಶ್ನಿಸಿದರು. ಇದಕ್ಕೆ ಶ್ರೀರಾಮುಲು ಮತ್ತು ಅವರ ಪಿಎಗಳು ಉತ್ತರ ಕೊಡಬೇಕು, ಹೆಚ್ಚಿನ ತನಿಖೆ‌ ಆಗಬೇಕು, ನಾವು ಇದರ ಮೇಲೆ ಲೋಕಾಯುಕ್ತಕ್ಕೆ‌ ದೂರು‌‌ ಸಲ್ಲಿ ಸುತ್ತಿದ್ದೇವೆ. ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ,
ಇನ್ನು ಟಿಎಸ್ಪಿ ಅನುದಾನವನ್ನು ಮೊಳಕಾಲ್ಮೂರಿನ ಗಢಿ‌ಭಾಗದಲ್ಲಿ ಹಂಚಿಕೊಂಡಿದ್ದು, ಪಿಆರ್ ಇಡಿ ಮತ್ತು ಪಿಡಬ್ಲೂ ಡಿ ಇಲಾಖೆ ಅಡಿಯಲ್ಲಿ ಕಾಮಗಾರಿಗಳಿಗೆ ಹಣ ಬಿಡುಗಡೆ ಆಗಿದೆ.‌ಆದರೆ ಹಿಂದೆ ಆಗಿರುವ ಕಾಮಗಾರಿಗೆ ತೇಪೆ ಹಾಕಲಾಗಿದೆ. ಇದರಲ್ಲಿಯೂ ಕೂಡ ಬೋಗಸ್ ಆಗಿರುವುದು ಕಂಡು ‌ಬಂದಿದೆ. ಇನ್ನು ಮೊಳಕಾಲ್ಮೂರು ಕ್ಷೇತ್ರದ ಚಳ್ಳಕೆರೆ ಭಾಗದ ಗ್ರಾಮಗಳಲ್ಲಿ‌ ನಡೆದಿರುವ ಕಾಮಗಾರಿಗಳಲ್ಲಿ ಕೂಡ ಕಳಪೆಯಾಗಿದ್ದು, ಅದನ್ನು ಕೂಡ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ

Leave a Reply

Your email address will not be published. Required fields are marked *