9 ಗ್ರಾಮಗಳಲ್ಲಿ ಕೂಡಲೇ ರಕ್ಷಣಾ ಕ್ರಮ ತೆಗೆದುಕೊಳ್ಳಿ

ಜಿಲ್ಲಾ ಸುದ್ದಿ

ಹಿರಿಯೂರು; ಐತಿಹಾಸಿಕ ವಾಣಿ ವಿಲಾಸ ಸಾಗರ ಜಲಾಶಯವು 88 ವರ್ಷಗಳ ನಂತರ 128 ಅಡಿಗಳಷ್ಟು ನೀರು ತುಂಬಿದ್ದು ಕೋಡಿ ಬೀಳುವ ಶುಭ ಸಂದರ್ಭ ಇರುವುದರಿಂದ ತಾಲ್ಲೂಕಿನಲ್ಲಿ ಮುಂದಿನ ಸುರಕ್ಷತೆ ಬಗ್ಗೆ ಶಾಸಕಿ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಇಂದು ತುರ್ತಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಟಾಸ್ ಫೋರ್ಸ್ ಸಭೆ ಕರೆದು ಸುಧೀರ್ಘವಾಗಿ ಚರ್ಚೆ ನಡೆಸಿದರು.

ತಾಲ್ಲೂಕಿನಲ್ಲಿ ವಿ ವಿ ಪುರ ಸೇರಿ ಒಟ್ಟು 8 ಗ್ರಾಮ ಪಂಚಾಯಿತಿಗಳಲ್ಲಿ 9 ಗ್ರಾಮಗಳಾದ ವಿ ವಿ ಪುರ, ಕಾತ್ರಿಕೇನಹಳ್ಳಿ, ಲಕ್ಕವ್ವ ನಹಳ್ಳಿ, ಹಿರಿಯೂರು, ಮಾರುತಿ ನಗರ, ರಂಗನಾಥಪುರ, ಯಳನಾಡು, ಕೂಡ್ಲಹಳ್ಳಿ, ನದಿ ಪಾತ್ರದಲ್ಲಿರುವುದರಿಂದ ಇಂತಹ ಕಡೆ ಸಾರ್ವಜನಿಕರಿಗೆ ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

 

 

 

ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಡಿವೈಎಸ್ಪಿ ರೋಷನ್ ಜಮೀರ್, ತಾಪಂ ಇಒ ಈಶ್ವರ ಪ್ರಸಾದ್, ಎಇಇ ಕೃಷ್ಣಮೂರ್ತಿ, ನಗರಸಭೆ ಆಯುಕ್ತ ಉಮೇಶ್, ಕೃಷಿ ಸಹಾಯಕ ನಿರ್ದೇಶಕಿ ಜೈಬ, ಬಿಇಒ ನಾಗಭೂಷಣ್, ಸಿಡಿಪಿಒ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *