ಅನಾಮಧೇಯ ಶವ ಪತ್ತೆ

ಜಿಲ್ಲಾ ಸುದ್ದಿ

ಅನಾಮಧೇಯ ಶವ ಪತ್ತೆ

 

 

 

ಚಿತ್ರದುರ್ಗ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಅನ್ನಪೂರ್ಣೇಶ್ವರಿ ಹೋಟೆಲ್ ಮುಂಭಾಗದಲ್ಲಿ ಸುಮಾರು 45 ರಿಂದ 48 ವರ್ಷದ ಪುರುಷನÀ ಅನಾಮಧೇಯ ಶವ ಪತ್ತೆಯಾಗಿರುವ ಪ್ರಕರಣ 2022ರ ಅಕ್ಟೋಬರ್ 4 ರಂದು ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅನಾಮಧೇಯ ಪುರುಷನ ಚಹರೆ ಇಂತಿದೆ. ಕೋಲು ಮುಖ, 5.10 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಬಲಗೈಯಲ್ಲಿ ಗೀತ ಹಾಗೂ ಎಡಗೈಯಲ್ಲಿ ರೇಣುಕಾ ಎಂಬ ಹಚ್ಚೆ ಗುರುತು ಇದೆ. ಕಪ್ಪುಬಿಳಿ ಮಿಶ್ರಿತ ತುಂಬುತೋಳಿನÀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ಚಹರೆಯುಳ್ಳ ಪುರುಷನ ಬಗ್ಗೆ ಮಾಹಿತಿ ದೊರೆತ ಕೂಡಲೆ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ನಿರೀಕ್ಷಕರ ದೂರವಾಣಿ ಸಂಖ್ಯೆ 08194-222933,9480803145. ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕರ ದೂರವಾಣಿ ಸಂಖ್ಯೆ 08194-222430,9480803120 ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 08194-222782ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ

Leave a Reply

Your email address will not be published. Required fields are marked *