ದೂರದೂರಿನ ಅಭ್ಯರ್ಥಿ ಯಾಕೆ ಬೇಕಿತ್ತು: ಚಿತ್ರದುರ್ಗದಲ್ಲಿ ಗಂಡಸರಿಲ್ಲವೇ?

ರಾಜ್ಯ

ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡದೆ 500 ಕಿಮೀ ದೂರದಿಂದ ಕರೆ ತಂದು ಅಭ್ಯರ್ಥಿ ಹಾಕುವ ಅವಶ್ಯಕತೆ ಏನಿತ್ತು, ಚಿತ್ರದುರ್ಗದಲ್ಲಿ ಯಾರೂ ಗಂಡಸರಿರಲಿಲ್ವವೇ ಪಕ್ಷದ ಕಾರ್ಯಕರ್ತರು ಮತ ಹಾಕಿಸಲು ಮಾತ್ರವೇ ಬೇಕೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅರ್ಹತೆ ಇಲ್ಲವೆ? ಈ ಬಾರಿ ಲೋಕಸಭಾ ಚುನಾವಣೆಯಲ್ಲಿ‌ ನನಗೆ ಟಿಕೆಟ್ ಸಿಗುವ ಭರವಸೆ ಬಹಳವಿತ್ತು. ಅದರೆ ಜಿಲ್ಲೆಯ ಸ್ಥಳೀಯ ನಾಯಕರುಗಳೇ ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎಂ ಸಿ ರಘುಚಂದನ್ ಆರೋಪಿಸಿದರು.ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಕಾರಜೋಳರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಖಂಡನೀಯ, ಕಳೆದ ಬಾರಿ ಅನೇಕಲ್ ನಿಂದ ಅಭ್ಯರ್ಥಿ ಕರೆ ತಂದಿದ್ದರು. ಈ ಬಾರಿ ಮಧೋಳ್ ನಿಂದ ಕರೆ ತಂದಿದ್ದಾರೆ.‌ ಇದು ಚಿತ್ರದುರ್ಗದ ದುರಂತ. ಮದಕರಿನಾಯಕನ ಕಾಲದಿಂದಲೂ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ.‌ಇದನ್ನು ಯಾರೂ ಖಂಡಿಸದಿರುವುದು ನಮ್ಮ ದೌರ್ಭಾಗ್ಯ. ನನ್ನ ಮುಂದಿನ ನಡೆಯನ್ನು ನಾಳೆ ನಡೆಯುವ ಕಾರ್ಯರ್ತರ ಅಭಿಮಾನಿಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು, ಈ ಬಾರಿ ಟಿಕೆಟ್ ದೊರೆಯಬಹುದೆಂಬ ಆಕಾಂಕ್ಷೆಯಲ್ಲಿ ನಾನಿದ್ದೆ, ಇದಕ್ಕೆ ಸಂಬಂಧಪಟ್ಟಂತೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ನಾನು ಬಹಳ ನಂಬಿದ್ದೆ ಆದರೆ ಕೊನೆ ಗಳಿಗೆಯಲ್ಲಿ ನನಗೆ ಟಿಕೆಟ್ ಕೊಡಿಸುವಲ್ಲಿ ಅನ್ಯಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ವಿರುದ್ಧವಾಗಲಿ ಮೋದಿ ವಿರುದ್ದವಾಗಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು, ಈ‌ ಬಾರಿ ಟಿಕೆಟ್ ನನ್ನ ವಯಸ್ಸಿನ ಮತ್ತು ಅನುಭವದ ಮೇಲೆ ತಪ್ಪಿಸಲಾಗಿದೆ. ನನಗಲ್ಲದಿದ್ದರೂ ಜನಾರ್ಧನ ಸ್ವಾಮಿ ಅವರಿಗೆ ನೀಡಬಹುದಾಗಿತ್ತು.‌ ಆದು ಬಿಟ್ಟು ಎಲ್ಲೋ‌ ಇರುವ ವ್ಯಕ್ತಿಯನ್ನು ಕರೆ ತಂದು ಚುನಾವಣೆಯಲ್ಲಿ ನಿಲ್ಲಿಸುವ ಅವಶ್ಯಕತೆ ಏನಿತ್ತೆಂದು ಪಕ್ಷದ ನಾಯಕರನ್ನು ಪ್ರಶ್ನಿಸಿದ ರಘುಚಂದನ್, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಏನಾದರೂ ಅನ್ಯಾಯವಾದರೆ ದೂರದ ಐದುನೂರು ಕಿಮೀ ನಿಂದ ಯಾರೂ ಬರುವುದಿಲ್ಲ. ಸ್ಥಳಿಯರಾದ ನಾವುಗಳೇ ಕಾರ್ಯಕರ್ತರ ನೆರವಿಗೆ ಹೋಗಬೇಕಿದೆ ಇದು ಪಕ್ಷದ ಅರಿವಿಗೆ ಬಂದಿಲ್ಲ ಎಂದು ನೊಂದು ಹೇಳಿದರು. ಎರಡೂ ರಾಷ್ಟ್ರೀಯ ಪಕ್ಷಗಳೂ ಸಹ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಥಳಿಯರಿಗೆ ಪ್ರಾತಿನಿಧ್ಯ ನೀಡದೆ ಹೊರಗಿನವರಿಗೆ ಮಣೆ ಹಾಕಿದ್ದಾರೆ. ಇದರಿಂದ ಎರಡೂ ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಇದು ಚುನಾವಣೆ ಫಲಿತಾಂಶದ ಮೇಲೆ ವ್ಯತಿರಿಕ್ತ ವಾಗುವ ಅವಕಾಶವಿದೆ ಎಂದರು. ಈ ಸಮಯದಲ್ಲಿ ತಿಪ್ಪೇಸ್ವಾಮಿ, ಶ್ರೀಮತಿ,ರತ್ನಮ್ಮ,ಸಿದ್ದೇಶ, ಶಿವನಕೆರೆ ರಾಜಣ್ಣ, ತಿಪ್ಪೇಸ್ವಾಮಿ, ನಾಗೇಂದ್ರ ಸೇರಿದಂತೆ ಇತರರು ಇದ್ದರು.

 

 

 

Leave a Reply

Your email address will not be published. Required fields are marked *