ಮಾಜಿ ಶಾಸಕ ತಿಪ್ಪಾರೆಡ್ಡಿ ತಮ್ಮ ಸೋಲಿನ‌ ಬಗ್ಗೆ ಏನು ಹೇಳಿದ್ರು ಗೊತ್ತಾ?

ರಾಜ್ಯ

ಬಿಜೆಪಿಯ ಕೆಲ ನಾಯಕರು ಮತ್ತು ಕಾರ್ಯಕರ್ತರು ಒಳಗಿಂದೊಳಗೆ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದರಿಂದ ನನ್ನ ಸೋಲಾಯ್ತು ಎಂದು ಮಾಜಿ ಶಾಸಕ ಜಿ. ಹೆಚ್. ತಿಪ್ಪಾರೆಡ್ಡಿ ಹೇಳಿದರು.
ಅವರು ರೆಡ್ಡಿ‌ ಸಮುದಾಯ ಭವನದಲ್ಲಿ ನಡೆದ ರಾಜ್ಯ ಮಟ್ಟದ ಬಿಜೆಪಿ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದರು.ಯಡಿಯೂರ ಪ್ಪನವರ ಸಮ್ಮುಖದಲ್ಲಿಯೇ ಹೇಳಿದ ತಿಪ್ಪಾರೆಡ್ಡಿ ವೇದಿಕೆ ಮೇಲೆ ಕುಳಿತಿರುವ ಕೆಲ‌ ನಾಯಕರು ಹಾಗೂ ಕಾರ್ಯಕ್ರಮದಲ್ಲಿ‌ ಕುಳಿತಿರುವ ನನ್ನ ಕ್ಷೇತ್ರದ ಕೆಲವರು ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದರು. ಮೇ 10 ರ ನಂತರ ಮತ್ತೆ ಬಿಜೆಪಿಗೆ ಮರಳಿ ಬಂದಿದ್ದಾರೆ. ಇದರಿಂದ ನಾನು ಸೋಲು‌ ಅನುಭವಿಸಬೇಕಾ ಯ್ತು ಎಂದರು. ಮಧ್ಯದಲ್ಲಿ ಮೊಳಕಾಲ್ಮೂರಿನ ಪರಾಜಿತ ಅಭ್ಯರ್ಥಿ ತಿಪ್ಪೇಸ್ವಾಮಿ‌ ಹಾಗೂ ‌ಹಿರಿಯೂರಿನ‌ ಪೂರ್ಣಿಮಾ ಕೂಡ ಇದಕ್ಕೆ‌ ಧ್ವನಿ‌ ಸೇರಿಸಿದರು. ತಿಪ್ಪಾರೆಡ್ಡಿ ನನ್ನನ್ನು ಮಾತನಾಡಲು ಬಿಟ್ಟರೆ ಕಂಬಳಿ ಚೀಲ ಗೊಡವಿದಂಗೆ ಕೊಡವಿ‌ ಬಿಡುತ್ತೇನೆ ಎಂದು‌ ಆಕ್ರೋಶ ವ್ಯಕ್ತಪಡಿಸಿ ದರು.ನಂತರ ಸಮಾಧಾನಗೊಂಡ ಅವರು ದೊಡ್ಡವರಿದ್ದಾರೆ ನಾನು ಮಾತನಾಡುವುದಿಲ್ಲ, ಎನ್ನುತ್ತಾ ನಮ್ಮ ಮುಂದಿನ ಗುರಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ‌ ಚುನಾವಣೆಗಳನ್ನು‌ ಗೆಲ್ಲಬೇಕಿದೆ. ದೇಶದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಪ್ರಧಾನಿ ಮೋದಿ‌ ಅವರನ್ನು ಸೋಲಿಸಲು ಬೇರೆ ಬೇರೆ ಸಿದ್ದಾಂತಗಳಿರುವ ಪಕ್ಷಗಳು ಪಾಟ್ನಾದಲ್ಲಿ ಸಭೆಯನ್ನು ಸೇರಿ ಯೋಜನೆ ರೂಪಿಸುತ್ತಿದ್ದಾರೆ. ಪ್ರಪಂಚಕ್ಕೆ ಇಂದು‌ ಮೋದಿ‌ ಎಷ್ಟು‌ ಅಗತ್ಯವಿದೆಯೋ ಅಷ್ಟೆ ಅಗತ್ಯ ನಮ್ಮ ದೇಶಕ್ಕೆ‌ಇದೆ. ಆದ್ದರಿಂದ ನಾವುಗಳು ಮೋದಿಯವರನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.

 

 

 

Leave a Reply

Your email address will not be published. Required fields are marked *