ವಂದೇ ಭಾರತ್ ರೈಲು ಚಿಕ್ಕಜಾಜೂರಿನಲ್ಲಿ‌ ನಿಲುಗಡೆ ರೈಲ್ವೇ ಮಂತ್ರಿ‌ಆದೇಶ

ರಾಜ್ಯ

ಭಾರತೀಯ ರೈಲ್ವೆಯಲ್ಲಿಯೇ ಮೊದಲ ಬಾರಿಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ರವರು 27 ನೆಯ ಜೂನ್ 2023 ರಂದು ಧಾರವಾಡ-ಕೆಎಸ್‌ಆರ್ ಬೆಂಗಳೂರು ನಗರಗಳ ನಡುವಿನ ಕರ್ನಾಟಕ ರಾಜ್ಯದ ಎರಡನೇ ವಂದೇ ಭಾರತ್ ರೈಲು ಸೇರಿದಂತೆ ಒಂದೇ ದಿನದಲ್ಲಿ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಮಿ-ಹೈ ಸ್ಪೀಡ್ ರೈಲುಗಳನ್ನು ಆನ್ ಲೈನ್ ಮುಖಾಂತರ ಉದ್ಘಾಟಿಸಲಿದ್ದಾರೆ. ದಕ್ಷಿಣ ಭಾರತದ ಮೊತ್ತ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಆದ ಮೈಸೂ ರು-ಚೆನ್ನೈ ಮಾರ್ಗದಲ್ಲಿನ ಸೆಮಿ-ಹೈ-ಸ್ಪೀಡ್ ರೈಲಿ ನೊಂದಿಗೆ ಕರ್ನಾಟಕವು ತನ್ನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪಡೆದಿತ್ತು ಎಂದು ಇಲ್ಲಿ ಸ್ಮರಿಸಬಹುದಾಗಿದೆ. ಧಾರವಾಡ-ಕೆಎಸ್‌ಆರ್ ಬೆಂಗಳೂರು ನಗರಗಳ ನಡುವಿನ ಗಾಡಿಯು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ಓಡಾಡುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಲಿದೆ.

 

 

 

ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಯಶವಂತಪುರ, ದಾವ ಣಗೆರೆ ಮತ್ತು ಎಸ್‌ಎಸ್‌ ಎಸ್ ಹುಬ್ಬಳ್ಳಿ ನಿಲ್ದಾಣ ಗಳಲ್ಲಿ ನಿಲುಗಡೆ ಹೊಂದಿವೆ.ಉದ್ಘಾಟನಾ ವಿಶೇಷ ರೈಲು ಗಾಡಿಯು 27.06.2023 ರಂದು ಬೆಳಗ್ಗೆ ಸುಮಾರು 10:35 ಗಂಟೆಗೆ ಧಾರವಾಡ ರೈಲು ನಿಲ್ದಾಣದಿಂದ ತನ್ನ ಪ್ರ ಯಾಣವನ್ನು ಪ್ರಾರಂಭಿ ಸುತ್ತದೆ ಮತ್ತು ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂ ರು, ಅರಸೀಕೆರೆ, ತಿಪಟೂ ರು, ಅಮ್ಮಸಂದ್ರ, ತುಮ ಕೂರು, ದೊಡ್ಡಬೆಲೆ, ಚಿಕ್ಕ ಬಾಣಾವರ ಮತ್ತು ಯಶ ವಂತಪುರ ಜಂ. ಮಾರ್ಗ ವಾಗಿ ಜೊತೆಯಲ್ಲಿ ಲಗತ್ತಿಸಲಾದ ವೇಳಾಪ ಟ್ಟಿಯ ಪ್ರಕಾರ ಚಲಿಸಿ ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ.ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಧಾರವಾಡ ನಗರಗಳನ್ನು ತ್ವರಿತವಾಗಿ ಸೇರಿಸಿ ಸಂಪರ್ಕವನ್ನು ಒದಗಿಸುತ್ತಿದೆ ಎಂದು ಮೈಸೂರು ವಿಭಾಗದ ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವ ಸ್ಥಾಪಕರುಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ, ಜೆ.ಲೋಹಿತೇಶ್ವರ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *