ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ : ಎಸ್.ಜೆ.ಸೋಮಶೇಖರ್

ರಾಜ್ಯ

ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ : ಎಸ್.ಜೆ.ಸೋಮಶೇಖರ್

ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಚುನಾವಣೆ. ಈ
ರಾಷ್ಟ್ರೀಯ ಹಬ್ಬದಲ್ಲಿ ಜಿಲ್ಲೆಯ ಎಲ್ಲಾ ಅರ್ಹ ನೋಂದಾಯಿತ ಮತದಾರರು ಏಪ್ರಿಲ್ 26ರಂದು ತಮ್ಮ ಸಮೀಪದ ಮತಗಟ್ಟೆಗೆ ತೆರಳಿ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ನಿರ್ಭೀತಿಯಿಂದ ಮತ ಚಲಾಯಿಸಿ, ಸಮರ್ಥ ಜನನಾಯಕನ ಆಯ್ಕೆಯಲ್ಲಿ ಭಾಗೀದಾರರಾಗುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಹೇಳಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಚುನಾವಣಾ ಶಾಖೆ, ಜಿಲ್ಲಾ ಪಂಚಾಯತ್, ನಗರಸಭೆ ಚಿತ್ರದುರ್ಗ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾ ವ್ಯವಸ್ಥಿತ ಮತದಾರರ ಜಾಗೃತಿ ಮತ್ತು ಭಾಗವಹಿಸುವಿಕೆ ಕಾರ್ಯಕ್ರಮದ ಭಾಗವಾಗಿ ನಗರದಲ್ಲಿ ಶೇ.70ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆ ಪ್ರದೇಶಗಳಲ್ಲಿ ಮತದಾರರಲ್ಲಿ ಅರಿವು ಮೂಡಿಸಲು ಏರ್ಪಡಿಸಲಾಗಿದ್ದ ವಾಕ್ ಥಾನ್ ನಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಏಪ್ರಿಲ್ 26ರಂದು ಮೊದಲ ಹಂತದಲ್ಲಿ ನಡೆಯಲಿರುವ ಚಿತ್ರದುರ್ಗ ಲೋಕಸಭಾ ಚುನಾವಣೆಯ ದಿನದಂದು ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯರಿತು ಮತದಾನ ಮಾಡುವ ಮೂಲಕ ಕಡ್ಡಾಯವಾಗಿ ತಮ್ಮಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದ ಅವರು, ಪ್ರಜಾಪ್ರಭುತ್ವ ಎನ್ನುವುದು ಆಡಳಿತ ವ್ಯವಸ್ಥೆಯ ವಿಧಾನ ಮಾತ್ರವಲ್ಲ, ಅದೊಂದು ಒಗ್ಗೂಡಿ ಬಾಳುವ ವಿಧಾನ ಸಮಸ್ಯೆ ಬದುಕಿನ ಜೀವನ ಅನುಭವ, ಜೊತೆಯಲ್ಲಿರುವ ಮನುಷ್ಯರಿಗೆ ಘನತೆ ಮತ್ತು ಗೌರವ ನೀಡುವ ಕಾರ್ಯಕ್ರಮ ಇದಾಗಿದೆ ಎಂದ ಅವರು ಮತದಾನ ನಮ್ಮ ಹೆಮ್ಮೆ ಎಂದವರು ನುಡಿದರು.

 

 

 

ನಿಮ್ಮ ಮತ ನಿಮ್ಮ ಹಕ್ಕು ಪ್ರತಿಯೊಬ್ಬರೂ ನಿಮ್ಮ ಹಕ್ಕನ್ನು ಚಲಾಯಿಸಿ ದೇಶದ ಸಂವಿಧಾನನ್ನು ಗೌರವಿಸುವೆ. ಅದನ್ನು ಸಂರಕ್ಷಿಸುವ ನಾಯಕನನ್ನು ಆರಿಸಬೇಕಾದ ಅಗತ್ಯವನ್ನು ಅರಿಯಬೇಕು. ಮತದಾನ ಸಂಭ್ರಮವಾದಾಗ ಮಾತ್ರ ದೇಶ ಸಹಜವಾಗಿ ಬದಲಾವಣೆ ಕಂಡುಕೊಳ್ಳುತ್ತದೆ ಎಂದರು.

ಎಲ್ಲರೂ ಮುಕ್ತ ಮತ್ತು ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸುವಂತೆ ಮನವಿ ಮಾಡಿದ ಅವರು, ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಿ, ಸಮರ್ಥರನ್ನು ಆಯ್ಕೆ ಮಾಡಬೇಕು. ಅಮೂಲ್ಯವಾದ ಒಂದು ಮತ ಖಂಡಿತವಾಗಿ ದೇಶದ ಭವಿಷ್ಯವನ್ನು ಬದಲಾಯಿಸಲಿದೆ ಎಂದವರು ನುಡಿದರು.

ಚುನಾವಣೆಗಳು ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿವೆ. ಆಮಿಷ, ಒತ್ತಡಗಳಿಗೆ ಬಲಿಯುಗದಿರಿ. ಮತಗಟ್ಟೆಗೆ ತೆರಳಿ ನಿರ್ಭಯವಾಗಿ ಮತ ಚಲಾಯಿಸಿ, ದೇಶದ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಿ ಎಂದ ಅವರು, ಅದಕ್ಕೂ ಮುನ್ನ

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಗರಸಭೆ ಆಯುಕ್ತ ಶ್ರೀಮತಿ ರೇಣುಕಾ ಸೇರಿದಂತೆ

ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ತಿತರಿದ್ದರು. ನಗರದ ಮಹಾತ್ಮ ಗಾಂಧಿಸರ್ಕಲ್ ನಿಂದ ಆರಂಭಗೊಂಡ ವಾಕಥಾನ್ ಸಂತೆ ಹೊಂಡದ ರಸ್ತೆ, ಅಂಜುಮನ್ ರಸ್ತೆ, ಸರ್ಕಾರಿ ಉರ್ದು ಶಾಲೆ, ರೀಜನಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಗೋಪಾಲಪುರ ಹಾಗೂ ಜೆ.ಸಿ.ಆರ್.ಬಡಾವಣೆ, ವಿ.ಪಿ.ಬಡಾವಣೆಗಳಲ್ಲಿ ಸಂಚರಿಸಿ, ಅಂತಿಮವಾಗಿ ವೀರವನಿತೆ ಓಬದ್ದ ಸರ್ಕಲ್ ನಲ್ಲಿ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *